ಬಿಗ್ ಬ್ರೇಕಿಂಗ್ : ದೆಹಲಿಯಲ್ಲಿ ಐಎಂಎ ವಂಚಕ ಮನ್ಸೂರ್ ಖಾನ್‍ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜು.19 : ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿದ್ದ , ಐಎಂಎ ವಂಚನೆ ಪ್ರಕರಣದ ಪ್ರಮುಖ ರೂವಾರಿ  ಮೊಹಮ್ಮದ್ ಮನ್ಸೂರ್ ಖಾನ್‍ನನ್ನು ತಡರಾತ್ರಿ ವಿಶೇಷ ತನಿಖೆ ತಂಡ (ಎಸ್ ಐಟಿ)ಬಂಧಿಸಿದೆ. ಮಧ್ಯರಾತ್ರಿ 1.30ರ ಸುಮಾರಿಗೆ ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಎಸ್‍ಐಟಿ ಪೊಲೀಸರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ. ಇಂದು ಆತನನ್ನು ಎಸ್‍ಐಟಿ ಪೊಲೀಸರು ಬೆಂಗಳೂರಿಗೆ ಕರೆತರಲಿದ್ದಾರೆ.

ಮನ್ಸೂರ್ ಖಾನ್ ಬಂಧನ ಬೆನ್ನಲ್ಲೇ ಹಲವರಿಗೆ ನಡುಕ ಶುರುವಾಗಿದೆ. ಈ ನಡುವೆ ಬನ್ನೇರುಘಟ್ಟ ರಸ್ತೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದ ಮೌಲ್ವಿ ಉಮರ್ ಬಶೀರ್ ಎಂಬವರನ್ನು ಎಸ್‍ಐಟಿ ಬಂಧಿಸಿದೆ.
ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿತ್ತು.

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮನ್ಸೂರ್ ವಿರುದ್ಧ 40 ಸಾವಿರ ದೂರು ದಾಖಲಾಗಿತ್ತು. ಹೀಗಾಗಿ ಮನ್ಸೂರ್‍ಗಾಗಿ ಎಸ್‍ಐಟಿ ಮತ್ತು ಇಡಿ ತಂಡ ಕಾಯುತ್ತಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಜಾರಿ ನಿರ್ದೇಶನಾಲಯ ಸಹ ದೂರು ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ನಡೆಸುತ್ತಿತ್ತು. ಇದುವರೆಗೂ ಮನ್ಸೂರ್​ ಖಾನ್​ ಮತ್ತು ಐಎಂಎ ವಿರುದ್ದ ಕಮರ್ಷಿಯಲ್​ ಸ್ಟ್ರೀಟ್​ ಪೊಲೀಸ್​ ಠಾಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಂಚನೆ ದೂರು ದಾಖಲಾಗಿದೆ.

ಅನಾರೋಗ್ಯದ ಕಾರಣ ನೀಡಿ ಭಾರತಕ್ಕೆ ಮರಳುತ್ತಿದ್ದೇನೆ ತಮಗೆ ಜೀವ ಭಯ ಇದ್ದು, ಪೊಲೀಸರು ರಕ್ಷಣೆ ಕೊಡಬೇಕು ಎಂದು ಕೋರಿ ಸೋಮವಾರ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದನು. ಆದರೆ 24 ಗಂಟೆಗಳಲ್ಲಿ ಮನ್ಸೂರ್ ವಾಪಸ್ ಬರಲಿಲ್ಲ. ರಾತ್ರಿ ದೆಹಲಿಗೆ ಬಂದು ಎಸ್‍ಐಟಿ ಖೆಡ್ಡಾಗೆ ಬಿದ್ದಿದ್ದಾನೆ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ 24 ಗಂಟೆಯಲ್ಲಿ ಭಾರತಕ್ಕೆ ಬರುವುದಾಗಿ ಹೇಳಿದ್ದ ಮನ್ಸೂರ್ ಖಾನ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಸಾವಿರಾರು ಜನರಿಗೆ ಕೊಟ್ಯಂತರ ರು. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ. ಈತನ ಕಂಪನಿಯಲ್ಲಿ ಹಣ ಹೂಡಿದ್ದ ಹಲವು ಕುಟುಂಬಗಳು ಬೀದಿಗೆ ಬಿದ್ದಿದ್ದವು.

ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಜೂನ್ 8 ರಂದು ರಾತ್ರೋರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದನು. ವಿಷಯ ತಿಳಿದ ಹೂಡಿಕೆದಾರರು ಎಸ್‍ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.

ನಿನ್ನೇಯಷ್ಟೇ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಮೌಲ್ವಿ ಬಶೀರ್ ಮಸೀದಿಗಳಲ್ಲಿ ಪ್ರಚಾರ ಮಾಡಿದ್ದನು. ಇದಕ್ಕೆ ಪ್ರತಿಯಾಗಿ ಐಎಂಎ ಮಾಲೀಕನಿಂದ ಬಶೀರ್, 60 ಲಕ್ಷ ಹಣ ಮತ್ತು 15 ಲಕ್ಷ ಮೌಲ್ಯದ ವಾಹನವೊಂದನ್ನು ಪಡೆದಿದ್ದ ಎನ್ನಲಾಗಿದೆ.

ಸಾವಿರಾರು ಕೋಟಿ ರೂ.ಗಳನ್ನು ವಂಚನೆ ಮಾಡಿರುವ ಐಎಂಎ ಜುವೆಲ್ಸ್ ಸಂಸ್ಥೆಯ ನಿರ್ದೇಶಕರ ಪೈಕಿ ಹಲವರು ಎಸ್ ಎಸ್ ಎಲ್ ಸಿ ಕೂಡ ಪಾಸಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಸಂಸ್ಥೆಯ 7 ಮಂದಿ ನಿರ್ದೇಶಕರನ್ನು ಬಂಧಿಸಿದ್ದು, ಬಂಧಿತರನ್ನು ನಿಜಾಮುದ್ದೀನ್ ಖಾನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಅರ್ಷದ್‌ ಖಾನ್, ಅನ್ಸರ್ ಪಾಷಾ, ವಾಸೀಂ, ದಾದಾಪೀರ್ ಎಂದು ಗುರುತಿಸಲಾಗಿದೆ.

ಈ ಪೈಕಿ ನಿಜಾಮುದ್ದೀನ್, ಅರ್ಷದ್ ಖಾನ್ ಮತ್ತು ಅನ್ಸರ್ ಪಾಷಾ ಪದವಿದರರಾಗಿದ್ದು, ವಸೀಂ ಮತ್ತು ಅಹ್ಮದ್ ಪಿಯುಸಿ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಮತ್ತಿಬ್ಬರು ನಿರ್ದೇಶಕರುಗಳಾದ ದಾದಾಪೀರ್ ಮತ್ತು ಹುಸೇನ್ ಎಸ್ ಎಸ್ ಎಲ್ ಸಿಯನ್ನು ಪೂರ್ಣಗೊಳಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಎಲ್ಲ ಏಳೂ ನಿರ್ದೇಶಕರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಏಳೂ ಮಂದಿ ನಿರ್ದೇಶಕರನ್ನೂ ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಲಾಗಿದೆ.

# ಐಎಎಸ್ ಅಧಿಕಾರಿ ಬಂಧನ :
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್‌ಐಟಿ) ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಬಂಧಿಸಲಾಗಿದೆ.

ಗ್ರಾಮ ಲೆಕ್ಕಿಗ ಮಂಜುನಾಥ್ ಅವರ ಐಎಂಎ ಸಂಸ್ಥಾಪಕ ಮನ್ಸೂರ್ ಅಲಿ ಖಾನ್ ಅವರಿಂದ 4.5 ಕೋಟಿ ರುಪಾಯಿ ಲಂಚ ಪಡೆದ ಆರೋಪದ ಮೇಲೆ ವಿಜಯ್ ಶಂಕರ್ ಅವರನ್ನು ಎಸ್ ಐಟಿ ಬಂಧಿಸಿದೆ.
ಉಪವಿಭಾಗಾಧಿಕಾರಿ ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಈಗ ಜಿಲ್ಲಾಧಿಕಾರಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ವಿಜಯ್ ಶಂಕರ್ ಅವರಿಗೆ ನೋಟೀಸ್ ನೀಡಲಾಗಿತ್ತು. ಹೀಗಾಗಿ ಅವರು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ.

# ಏನಿದು ಐಎಂಎ ಜುವೆಲ್ಲರಿ ಪ್ರಕರಣ?
ಹೂಡಿಕೆ ಬಿಸಿನೆಸ್‌ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಕೊಡುವ ಆಸೆ ತೋರಿಸಿ ಕೋಟ್ಯಂತರ ರೂ.ವಂಚನೆ ಮಾಡಲಾಗಿತ್ತು.

ಐಎಂಎ ಜ್ಯುವೆಲ್ಸ್‌ ಮಾಲೀಕ ಮನ್ಸೂರ್‌ ಖಾನ್‌ ಆಡಿಯೋದಲ್ಲಿ , ರಾಜಕಾರಣಿಗಳು, ಅಧಿಕಾರಿಗಳಿಗೆ ಲಂಚ ಕೊಟ್ಟಿದ್ದೇನೆ. ನನ್ನಿಂದ ಅವರು ಹಣ ಪಡೆದಿದ್ದಾರೆ. ಸ್ಥಳೀಯ ಶಾಸಕರು ಪಡೆದುಕೊಂಡ 400 ಕೋಟಿ ರೂ. ವಾಪಸ್‌ ಕೊಡುತ್ತಿಲ್ಲ. ಹೀಗಾಗಿ, ನಾನು ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ. ನನ್ನ ಬಳಿ ಉಳಿದುಕೊಂಡಿರುವ ಆಸ್ತಿ ಮಾರಾಟ ಮಾಡಿ ಹೂಡಿಕೆದಾರರಿಗೆ ಹಣ ಕೊಡಿ ಎಂದು ಮನ್ಸೂರ್‌ ಖಾನ್‌ ಹೇಳಿದ್ದಾನೆ.

# ನೂರಾರು ಕೋಟಿ ರೂ. ವಂಚನೆ, 2 ಸಾವಿರ ಜನರಿಂದ ದೂರು !
ಐಎಂಎನಲ್ಲಿ ಕರ್ನಾಟಕ ಮಾತ್ರವಲ್ಲದೇ, ಕೇರಳ, ತಮಿಳುನಾಡು ರಾಜ್ಯಗಳ ಜನರೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಸಾವಿರಾರು ಜನರು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ. ಹೀಗಾಗಿ, ವಂಚನೆ ಮೊತ್ತವೂ ನೂರಾರು ಕೋಟಿ ರೂ. ಇದೆ ಎಂದು ಹೇಳಲಾಗಿದೆ.
ಚಿನ್ನದ ಮನುುಷ್ಯ

ಸಾವಿರಾರು ಜನರಿಗೆ ಮೋಸ ಮಾಡಿ ನಾಪತ್ತೆಯಾಗಿರುವ ಐಎಂಎ ಕಂಪನಿ ಮಾಲೀಕ ಮನ್ಸೂರ್‌ ಖಾನ್‌ ಬಳಿ ಟನ್‌ಗಟ್ಟಲೇ ಚಿನ್ನ ಸೇರಿದಂತೆ ಕೋಟ್ಯಾಂತರ ರು. ಆಸ್ತಿ ಹೊಂದಿದ್ದಾನೆ ಎನ್ನಲಾಗಿದೆ.  ತನ್ನ ಐಎಂಎ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮನ್ಸೂರ್‌ ಪ್ರಕಟಿಸಿದ್ದ ಎನ್ನಲಾದ ಆಸ್ತಿ ಘೋಷಣಾ ಪತ್ರವೊಂದು ಬುಧವಾರ ವೈರಲ್‌ ಆಗಿದ್ದು, ಇದರಲ್ಲಿ ಆತನ ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರವಿದೆ.

ಆದರೆ ಈ ಪತ್ರದ ಕುರಿತು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿಲ್ಲ.  ಚಿನ್ನದ ವ್ಯಾಪಾರಿ ಮನ್ಸೂರ್‌ ಖಾನ್‌, ಶಿವಾಜಿನಗರ ಹಾಗೂ ಜಯನಗರದಲ್ಲಿ ಬೃಹತ್‌ ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದ್ದ. ಹದಿನಾರು ವರ್ಷಗಳಿಂದ ಚಿನ್ನ ಮತ್ತು ಆರ್ಥಿಕ ವ್ಯವಹಾರದಲ್ಲಿ ತೊಡಗಿದ್ದ ಆತ, ಔಷಧ ಮಾರಾಟ, ಆಸ್ಪತ್ರೆ ಹಾಗೂ ರಿಯಲ್‌ ಎಸ್ಟೇಟ್‌ನಲ್ಲಿ ಸಹ ಹಣ ಹೂಡಿಕೆ ಮಾಡಿದ್ದ.

ಹೀಗೆ ವಿವಿಧ ಉದ್ದಿಮೆಗಳಿಂದ ತಾನು ಸಾವಿರಾರು ಕೋಟಿ ರು. ಸಂಪಾದನೆ ಮಾಡಿದ್ದೇನೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸಹ ವಿವರ ಸಲ್ಲಿಸಿದ್ದೇನೆ ಎಂದು ಮನ್ಸೂರ್‌ ಹೇಳಿಕೊಂಡಿದ್ದಾನೆ.  ತನ್ನ ಸಂಸ್ಥೆಯಾದ ಐಎಂಎ ವೆಬ್‌ಸೈಟ್‌ನಲ್ಲಿ ಮನ್ಸೂರ್‌ ಖಾನ್‌ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದೆ. ಇದರಲ್ಲಿ ಚಿನ್ನಾಭರಣ, ವಜ್ರ, ಬೆಳ್ಳಿ ವಸ್ತುಗಳು ಸೇರಿದಂತೆ ಸ್ಥಿರ ಮತ್ತು ಚರಾಸ್ತಿ ಕುರಿತು ವಿವರವಾಗಿ ಹೇಳಿದ್ದಾನೆ.

ಏನಿದು ಐಎಂಎ ಜುವೆಲ್ಲರಿ ಪ್ರಕರಣ?
ಹೂಡಿಕೆ ಬಿಸಿನೆಸ್‌ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಕೊಡುವ ಆಸೆ ತೋರಿಸಿ ಕೋಟ್ಯಂತರ ರೂ.ವಂಚನೆ
ಮಾಡಲಾಗಿತ್ತು.

ಐಎಂಎ ಜ್ಯುವೆಲ್ಸ್‌ ಮಾಲೀಕ ಮನ್ಸೂರ್‌ ಖಾನ್‌
ಆಡಿಯೋದಲ್ಲಿ , ರಾಜಕಾರಣಿಗಳು, ಅಧಿಕಾರಿಗಳಿಗೆ ಲಂಚ ಕೊಟ್ಟಿದ್ದೇನೆ. ನನ್ನಿಂದ ಅವರು ಹಣ ಪಡೆದಿದ್ದಾರೆ. ಸ್ಥಳೀಯ ಶಾಸಕರು ಪಡೆದುಕೊಂಡ 400 ಕೋಟಿ ರೂ. ವಾಪಸ್‌ ಕೊಡುತ್ತಿಲ್ಲ. ಹೀಗಾಗಿ, ನಾನು ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ. ನನ್ನ ಬಳಿ ಉಳಿದುಕೊಂಡಿರುವ ಆಸ್ತಿ ಮಾರಾಟ ಮಾಡಿ ಹೂಡಿಕೆದಾರರಿಗೆ ಹಣ ಕೊಡಿ ಎಂದು ಮನ್ಸೂರ್‌ ಖಾನ್‌ ಹೇಳಿದ್ದಾನೆ.

ನೂರಾರು ಕೋಟಿ ರೂ. ವಂಚನೆ, 2 ಸಾವಿರ ಜನರಿಂದ ದೂರು !
ಐಎಂಎನಲ್ಲಿ ಕರ್ನಾಟಕ ಮಾತ್ರವಲ್ಲದೇ, ಕೇರಳ, ತಮಿಳುನಾಡು ರಾಜ್ಯಗಳ ಜನರೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಸಾವಿರಾರು ಜನರು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ. ಹೀಗಾಗಿ, ವಂಚನೆ ಮೊತ್ತವೂ ನೂರಾರು ಕೋಟಿ ರೂ. ಇದೆ ಎಂದು ಹೇಳಲಾಗಿದೆ.

# ಚಿನ್ನದ ಮನುುಷ್ಯ ”
ಸಾವಿರಾರು ಜನರಿಗೆ ಮೋಸ ಮಾಡಿ ನಾಪತ್ತೆಯಾಗಿರುವ ಐಎಂಎ ಕಂಪನಿ ಮಾಲೀಕ ಮನ್ಸೂರ್‌ ಖಾನ್‌ ಬಳಿ ಟನ್‌ಗಟ್ಟಲೇ ಚಿನ್ನ ಸೇರಿದಂತೆ ಕೋಟ್ಯಾಂತರ ರು. ಆಸ್ತಿ ಹೊಂದಿದ್ದಾನೆ ಎನ್ನಲಾಗಿದೆ.

ತನ್ನ ಐಎಂಎ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮನ್ಸೂರ್‌ ಪ್ರಕಟಿಸಿದ್ದ ಎನ್ನಲಾದ ಆಸ್ತಿ ಘೋಷಣಾ ಪತ್ರವೊಂದು ಬುಧವಾರ ವೈರಲ್‌ ಆಗಿದ್ದು, ಇದರಲ್ಲಿ ಆತನ ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರವಿದೆ. ಆದರೆ ಈ ಪತ್ರದ ಕುರಿತು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿಲ್ಲ.

ಚಿನ್ನದ ವ್ಯಾಪಾರಿ ಮನ್ಸೂರ್‌ ಖಾನ್‌, ಶಿವಾಜಿನಗರ ಹಾಗೂ ಜಯನಗರದಲ್ಲಿ ಬೃಹತ್‌ ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದ್ದ. ಹದಿನಾರು ವರ್ಷಗಳಿಂದ ಚಿನ್ನ ಮತ್ತು ಆರ್ಥಿಕ ವ್ಯವಹಾರದಲ್ಲಿ ತೊಡಗಿದ್ದ ಆತ, ಔಷಧ ಮಾರಾಟ, ಆಸ್ಪತ್ರೆ ಹಾಗೂ ರಿಯಲ್‌ ಎಸ್ಟೇಟ್‌ನಲ್ಲಿ ಸಹ ಹಣ ಹೂಡಿಕೆ ಮಾಡಿದ್ದ.

ಹೀಗೆ ವಿವಿಧ ಉದ್ದಿಮೆಗಳಿಂದ ತಾನು ಸಾವಿರಾರು ಕೋಟಿ ರು. ಸಂಪಾದನೆ ಮಾಡಿದ್ದೇನೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸಹ ವಿವರ ಸಲ್ಲಿಸಿದ್ದೇನೆ ಎಂದು ಮನ್ಸೂರ್‌ ಹೇಳಿಕೊಂಡಿದ್ದಾನೆ. ತನ್ನ ಸಂಸ್ಥೆಯಾದ ಐಎಂಎ ವೆಬ್‌ಸೈಟ್‌ನಲ್ಲಿ ಮನ್ಸೂರ್‌ ಖಾನ್‌ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದೆ. ಇದರಲ್ಲಿ ಚಿನ್ನಾಭರಣ, ವಜ್ರ, ಬೆಳ್ಳಿ ವಸ್ತುಗಳು ಸೇರಿದಂತೆ ಸ್ಥಿರ ಮತ್ತು ಚರಾಸ್ತಿ ಕುರಿತು ವಿವರವಾಗಿ ಹೇಳಿದ್ದಾನೆ.

# ಮನ್ಸೂರ್‌ ಬಳಿ ಏನೇನಿದೆ?
1888 ಕೆ.ಜಿ. ಚಿನ್ನಾಭರಣ, 18.64 ಕೆ.ಜಿ. ಪ್ಲಾಟಿನಂ, 463 ಕೆ.ಜಿ. ಬೆಳ್ಳಿ ವಸ್ತುಗಳು, 30 ಸಾವಿರ ಕ್ಯಾರೆಟ್‌ ವಜ್ರ, 110 ಕೆ.ಜಿ. ಬಿಳಿ ಬಂಗಾರ, ಐಎಎಂ ಜ್ಯುವೆಲ​ರ್ಸ್‌ನಲ್ಲಿ ಅಡಮಾನ ಪಡೆದ 350 ಕೆ.ಜಿ. ಚಿನ್ನ, ಕೋಟ್ಯಂತರ ಮೌಲ್ಯದ ರತ್ನದ ಹರಳುಗಳು ಹಾಗೂ 488 ಕೋಟಿ ಆಸ್ತಿ ಹೊಂದಿರುವುದಾಗಿ ಮನ್ಸೂರ್‌ ಘೋಷಣೆ ಮಾಡಿಕೊಂಡಿದ್ದ ಎನ್ನಲಾಗಿದೆ.

Facebook Comments

Sri Raghav

Admin