ರಷ್ಯಾದ ಕೊರೋನಾ ಲಸಿಕೆ ಸ್ಪುಟ್ನಿಕ್-ವಿಗೆ ಮತ್ತೊಂದು ವಿಘ್ನ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ,ಅ.15- ಕಿಲ್ಲರ್ ಕೊರೊನಾ ವೈರಸ್ ನಿಗ್ರಹಕ್ಕಾಗಿ ಪ್ರಥಮ ಲಸಿಕೆ ಅಭಿವೃದ್ದಿಗೊಳಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಷ್ಯಾದ ಸ್ಪುಟಿಕ್-ವಿ ವ್ಯಾಕ್ಸಿನ್‍ಗೆ ಮತ್ತೊಂದು ವಿಘ್ನ ಎದುರಾಗಿದೆ.

ರಷ್ಯಾದ ಸ್ಪುಟಿಕ್ ವಿ ಲಸಿಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ(ಡಬ್ಲುಎಚ್‍ಒ)ನಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ವಕ್ತಾರರಾದ ಸ್ಟಿಫಾನೆ ಡಿಜರಿಕ್ ಅವರು, ರಷ್ಯಾದ ಸ್ಪುಟ್ನಿಕ್ ಸೇರಿದಂತೆ ಯಾವುದೇ ಕೊರೊನಾ ಔಷ ಮಾರುಕಟ್ಟೆಗೆ ವಿತರಣೆಯಾಗುವುದಕ್ಕೆ ಮುನ್ನ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಕಳೆದ ತಿಂಗಳು ವಿಶ್ವಸಂಸ್ಥೆಯ 75ನೇ ಮಹಾವೇಶನದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ತನ್ನ ದೇಶದ ಸ್ಪುಟ್ನಿಕ್ ವಿ ಲಸಿಕೆಯನ್ನು ವಿಶ್ವಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಉಚಿತವಾಗಿ ವಿತರಿಸುವುದಾಗಿ ತಿಳಿಸಿದ್ದರು.

ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿಶ್ವಸಂಸ್ಥೆ ವಕ್ತಾರರು ಯಾವುದೇ ಕೊರೊನಾ ಲಸಿಕೆ ಲಭ್ಯತೆಗೆ ಮುನ್ನ ಡಬ್ಲುಎಚ್‍ಒ ಅನುಮೋದನೆ ಪಡೆಯಬೇಕು. ಇದು ಎಲ್ಲದಕ್ಕಿಂತ ಮುಖ್ಯವಾಗುತ್ತದೆ ಎಂದು ಹೇಳಿದರು.

ರಷ್ಯಾ ಆಗಸ್ಟ್‍ನಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಅಭಿವೃದ್ಧಿಗೊಳಿಸುವ ಮೂಲಕ ಕೊರೊನಾ ವಿರುದ್ಧ ವ್ಯಾಕ್ಸಿನ್ ಪತ್ತೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಂದು ಗುರುತಿಸಿಕೊಂಡಿದೆ.

Facebook Comments

Sri Raghav

Admin