ನಮ್ಮ ದೇಶದಲ್ಲಿ 40 ಉಗ್ರ ಸಂಘಟನೆಗಳಿವೆ : ಬಹಿರಂಗಗೊಳಿಸಿದ ಪಾಕ್ ಪ್ರಧಾನಿ ಇಮ್ರಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.24 (ಪಿಟಿಐ)- ತಮ್ಮ ದೇಶದಲ್ಲಿ 40 ವಿವಿಧ ಭಯೋತ್ಪಾದನೆ ಸಂಘಟನೆಗಳು ಸಕ್ರಿಯವಾಗಿವೆ ಎಂದು ಬಹಿರಂಗಗೊಳೀಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಅಮೆರಿಕಾಗೆ ಸಾಥ್ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪಾಕ್‍ನಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಸರ್ಕಾರಗಳು ಕಳೆದ 15 ವರ್ಷಗಳಿಂದ ಈ ಬಗ್ಗೆ ಅಮೆರಿಕಕ್ಕೆ ಸತ್ಯವನ್ನು ಮುಚ್ಚಿಟ್ಟಿದ್ದವು. ಆದರೆ ಇಮ್ರಾನ್ ಖಾನ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಪಾಕಿಸ್ತಾನ ಕಾಂಗ್ರೆಸ್‍ನ ಅಧ್ಯಕ್ಷೆ ಶೀಲಾ ಜಾಕ್ಸನ್ ವಾಷಿಂಗ್ಟನ್‍ನ ಕ್ಯಾಪಿಟಲ್ ಹಿಲ್‍ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಇಮ್ರಾನ್ ಮಾತನಾಡಿದರು.
ಭಯೋತ್ಪಾದನೆ ವಿರುದ್ಧ ನಾವು ಅಮೆರಿಕದೊಂದಿಗೆ ಹೋರಾಡುತ್ತಿದ್ದೇವೆ. ಸೆ.11ರಂದು ನ್ಯೂಯಾಕ್ ಮತ್ತು ವಾಷಿಂಗ್ಟನ್ ಮೇಲೆ ನಡೆದ ಭಯೋತ್ಪಾದಕರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ.

ಇದು ಅಫ್ಘಾನಿಸ್ತಾನದ ಅಲ್-ಖೈದಾ ಉಗ್ರರ ಕೃತ್ಯ. ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳು ಇಲ್ಲ ಎಂದು ಖಾನ್ ಹೇಳಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಅಮೆರಿಕದ ಕೈಜೋಡಿಸಿದ್ದೇವೆ.

ದುರದೃಷ್ಟವಶಾತ್, ಯಾವುದೇ ಕೆಟ್ಟ ಘಟನೆಯಾದರೂ ಅದಕ್ಕೆ ನನ್ನ ಸರ್ಕಾರ ಕಾರಣವೆಂದು ದೂಷಿಸಲಾಗುತ್ತಿದೆ. ಹಿಂದಿನ ಸರ್ಕಾರಗಳು ಅಮೆರಿಕಕ್ಕೆ ಸತ್ಯವನ್ನು ಹೇಳಲು ಹಿಂದೇಟು ಹಾಕಿದವು ಎಂದು ಪ್ರಧಾನಿ ವಿಷಾದಿಸಿದರು.

ಇರಾನ್ ವಿರುದ್ಧ ದುಸ್ಸಾಸಹ ಬೇಡ: ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಮ್ರಾನ್ ಖಾನ್, ಇರಾನ್ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಕೈ ಹಾಕದಂತೆ ಅಮೆರಿಕಾಗೆ ಎಚ್ಚರಿಕೆ ನೀಡಿದರು.  ಇರಾಕ್ ಮಾದರಿಯಲ್ಲಿ ಇರಾನ್ ಮೇಲೆ ಅಮೆರಿಕ ಒಂದು ವೇಳೆ ದಾಳಿ ನಡೆಸಿದರೆ, ಅದರ ಪರಿಣಾಮದ ತೀವ್ರತೆ ಊಹಿಸಲು ಸಾಧ್ಯವಿಲ್ಲ ಎಂದು ಕಾನ್ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ