ವೇಗದ ಬೌಲರ್‌ಗಳ ನಡುವೆ ಅರಳಿದ ಸ್ಪಿನ್ ಮಾಂತ್ರಿಕ ತಾಹೀರ್

ಈ ಸುದ್ದಿಯನ್ನು ಶೇರ್ ಮಾಡಿ

# ಜಯಪ್ರಕಾಶ್
ಶಾನ್‍ ಪೋಲಾಕ್, ಆಲನ್‍ಡೋನಾಲ್ಡ್, ಮಕಾಯಾ ಎಂಟಿನಿ, ಲ್ಯಾಸ್ ಕುಲ್ಸನರ್, ಆ್ಯಂಡ್ರಿನೈಲ್, ಮಾರ್ಕಲ್‍ರಂತಹ ವೇಗದ ಬೌಲರ್‍ಗಳ ಜಮಾನವಿದ್ದ ದಕ್ಷಿಣ ಆಫ್ರಿಕಾದ ತಂಡದಲ್ಲಿ ತಮ್ಮ ಸ್ಪಿನ್ ಮೋಡಿಯಿಂದಲೇ ಎಲ್ಲರ ಗಮನ ಸೆಳೆದು ತಂಡದ ಖಾಯಂ ಆಟಗಾರನಾಗಿ ರೂಪುಗೊಂಡಿದ್ದ ಸ್ಪಿನ್ನರ್ ಇಮ್ರಾನ್ ತಾಹೀರ್ ತಮ್ಮ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದಾರೆ.

ಕ್ರಿಕೆಟ್ ಅನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ತಾಹೀರ್ ಕ್ರಿಕೆಟ್ ಅಂಗಳದಲ್ಲೇ ಮಿಂಚಬೇಕೆಂಬ ಕನಸು ಹೊತ್ತಿದ್ದರು ಆದರೆ ಪಾಕಿಸ್ತಾನ ತಂಡದಿಂದ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಎಡವಿದ ತಹೀರ್ ನಂತರ ದಕ್ಷಿಣ ಆಫ್ರಿಕಾ ತಂಡದಲ್ಲಿ ತಮ್ಮ ಕ್ರಿಕೆಟ್ ಜೀವನವನ್ನು ರೂಪಿಸಿಕೊಂಡರು.

ತಮ್ಮ ಕ್ರಿಕೆಟ್ ಜೀವನದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಆರೋನ್‍ಪಿಂಚ್‍ರನ್ನು ಬಲಿ ಪಡೆಯುವ ಮೂಲಕ ತಂಡದ ಗೆಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ತಾಹೀರ್‍ಗೆ ತಂಡವು ಜಯದ ಮೂಲಕ ವಿದಾಯ ಹೇಳಿದ್ದಾರೆ.

# ಸ್ಪಿನ್ ಮೋಡಿ:
ಹರಿಣಗಳು ಆ ತಂಡದ ವೇಗದ ಬೌಲರ್‍ಗಳಿಂದಲೇ ಪಂದ್ಯ ಗೆಲ್ಲುತ್ತದೆಯೇ ಹೊರತು ಸ್ಪಿನ್ ಮೋಡಿಯಿಂದಲ್ಲ ಎಂದು ಹೇಳುತ್ತಿದ್ದವರನ್ನು ಬೆರಗುಗೊಳಿಸಿದ್ದು ಇಮ್ರಾನ್ ತಹೀರ್.
9 ನವೆಂಬರ್ 2011ರಲ್ಲಿ ಟೆಸ್ಟ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ತಹೀರ್ 24 ಪೆಬ್ರುವರಿ 2011ರಲ್ಲಿ ವೆಸ್ಟ್‍ಇಂಡೀಸ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾರ್ದಾಪಣೆ ಮಾಡಿದಾಗಿನಿಂದಲೂ ದಕ್ಷಿಣ ಆಫ್ರಿಕಾಕ್ಕೆ ತಮ್ಮ ಸ್ಪಿನ್ ಮೋಡಿಯಿಂದ ಅನೇಕ ಗೆಲುವು ತಂದುಕೊಟ್ಟಿದ್ದಾರೆ.

# ವಿಶ್ವಕಪ್ ನಲ್ಲೂ ಮಿಂಚು:
ವಯಸ್ಸಿಗೂ ಸಾಧನೆಗೂ ಸಂಬಂಧವಿಲ್ಲ ಎಂದು ತೋರ್ಪಡಿಸುತ್ತಾ ಬಂದಿರುವ ಇಮ್ರಾನ್ ತಾಹೀರ್ ತಮ್ಮ 40ನೆ ವಯಸ್ಸಿನಲ್ಲೂ ತಮ್ಮ ಸ್ಪಿನ್ ಮೋಡಿಯಿಂದ ಘಟಾನುಘಟಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಿದ್ದಾರೆ. ಪ್ರಸ್ತುತ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಎಸೆತ ಎಸೆಯುವ ಮೂಲಕ ವಿಶ್ವಕಪ್‍ನಲ್ಲಿ ಮೊದಲ ಓವರ್ ಮಾಡಿದ್ದ ಸ್ಪಿನ್ನರ್ , ಮೊದಲ ವಿಕೆಟ್ (ಜಾನಿ ಬ್ಯಾರಿಸ್ಟೋವ್) ಪಡೆದ ಬೌಲರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ವಿಶ್ವಕಪ್‍ನಲ್ಲಿ 39 ವಿಕೆಟ್ ಕಬಳಿಸುವ ಮೂಲಕ ಹರಿಣಿಗಳ ವಿರುದ್ಧ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರ ಎಂದು ಬಿಂಬಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವಕಪ್‍ನಲ್ಲೂ 11 ವಿಕೆಟ್‍ಗಳನ್ನು ತಹೀರ್ ಕೆಡವಿದ್ದಾರೆ.

# ಬೌಲಿಂಗ್ ಚಮತ್ಕಾರ:
ವೇಗಿಗಳ ನಡುವೆಯೂ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡ ಇಮ್ರಾನ್ ತಾಹೀರ್ ತಮ್ಮ ಬೌಲಿಂಗ್ ಚಮತ್ಕಾರ ಪ್ರದರ್ಶಿಸಿ ಏಕದಿನದಲ್ಲಿ ಹರಿಣಗಳ ಪರ 7 ವಿಕೆಟ್ ಪಡೆದ ಮೊದಲ ಆಟಗಾರ ಎಂದು ಗುರುತಿಸಿಕೊಂಡಿದ್ದರೆ, ವೇಗದ 100 ವಿಕೆಟ್ ಕಬಳಿಸಿದ ದಕ್ಷಿಣ ಆಫ್ರಿಕಾದ ಬೌಲರ್, ವಿಶ್ವಕಪ್, ಚಾಂಪಿಯನ್ ಟ್ರೋಫಿ, ವಿಶ್ವಕಪ್ ಸೇರಿದಂತೆ ಐಸಿಸಿಯ ಪ್ರಮುಖ ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದ ಏಕೈಕ ಹರಿಣಗಳ ಬೌಲರ್ ಎಂಬ ಕೀರ್ತಿಗೂ ಇಮ್ರಾನ್ ಭಾಜನರಾಗಿದ್ದಾರೆ.

# ಐಪಿಎಲ್‍ನಲ್ಲಿ ಮೆರಗು:
ಭಾರತ ಕ್ರಿಕೆಟ್‍ನೊಂದಿಗೆ ಅವಿನಾಭಾವ ಸಂಬಂಧವೊಂದಿರುವ ಇಮ್ರಾನ್ ಐಪಿಎಲ್‍ನಲ್ಲಿ ಕೂಡ ತಮ್ಮ ಸ್ಪಿನ್ ಬೌಲಿಂಗ್‍ನಿಂದ ಗಮನ ಸೆಳೆದಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್, ರೈಸಿಂಗ್ ಪುಣೆ ಜೆಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ತಮ್ಮ ಬೌಲಿಂಗ್‍ನಿಂದ ತಂಡಕ್ಕೆ ಅದ್ಭುತ ಕಾಣಿಕೆ ನೀಡಿದ್ದಾರೆ. ವಿಶ್ವಕಪ್ ಮಹಾಜಾತ್ರೆಗೂ ಮುನ್ನ ನಡೆದ ಐಪಿಎಲ್‍ನಲ್ಲೂ ಕೂಡ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಇಮ್ರಾನ್ ತಹೀರ್ 25 ವಿಕೆಟ್‍ಗಳನ್ನು ಕಬಳಿಸಿದ್ದರು.

# ತಹೀರ್ ಬೌಲಿಂಗ್ ಸಾಧನೆ:
ಟೆಸ್ಟ್: 20 (ಪಂದ್ಯ), 2294 (ರನ್),57(ವಿಕೆಟ್), 5/32 (ಶ್ರೇಷ್ಠ)
ಏಕದಿನ:107 (ಪಂದ್ಯ),5541(ರನ್),173(ವಿಕೆಟ್),7/45(ಶ್ರೇಷ್ಠ)
ಟ್ವೆಂಟಿ-20:38(ಪಂದ್ಯ), 948 (ರನ್), 63 (ವಿಕೆಟ್), 5/23 (ಶ್ರೇಷ್ಠ)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin