ಮುಂದಿನ 1,000 ದಿನಗಳಲ್ಲಿ ಎಲ್ಲ ಗ್ರಾಮಗಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.15-ಮುಂದಿನ 1,000 ದಿನಗಳಲ್ಲಿ ದೇಶದಲ್ಲಿರುವ ಆರು ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ಆಪ್ಟಿಕಲ್ ಪೈಬರ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರೀಯ ತ್ರಿವರ್ಣ ದ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ವಿಷಯ ಪ್ರಕಟಿಸಿದರು.

2014ಕ್ಕೂ ಹಿಂದೆ ದೇಶದಲ್ಲಿ ಕೇವಲ ಐದು ಡಜನ್ ಪಂಚಾಯಿತಿಗಳು ಮಾತ್ರ ಆಫ್ಟಿಕಲ್ ಪೈಬರ್ ಸಂಪರ್ಕ ಹೊಂದಿದ್ದವು. ನಾವು ದೇಶದ ಎಲ್ಲ ಗ್ರಾಮಗಳಿಗೂ ಈ ತಂತ್ರಜ್ಞಾನ ಅಳವಡಿಸುತ್ತಿದ್ದೇವೆ. ಇನ್ನೂ 1,000 ದಿನಗಳ ಒಳಗೆ ಇದು ಪೂರ್ಣಗೊಳ್ಳಲಿದೆ ಎಂದು ಮೋದಿ ತಿಳಿಸಿದರು.

ಆಲಾಂತರ್ಗಾಮಿ ಆಪ್ಟಿಕಲ್ ಪೈಬರ್ ಕೇಬಲ್‍ನನ್ನು ಲಕ್ಷದ್ವೀಪಕ್ಕೂ ವಿಸ್ತರಿಸಲಾಗುತ್ತದೆ. ದೇಶದಲ್ಲಿ 1,300ಕ್ಕೂ ಹೆಚ್ಚು ದ್ವೀಪಗಳಿವೆ. ಅವುಗಳ ಭೌಗೋಳಿಕ ಮಹತ್ವ ಮತ್ತು ರಾಷ್ಟ್ರಾಭಿವೃದ್ದಿಯಲ್ಲಿ ಅವುಗಳ ಪ್ರಾಮುಖ್ಯತೆಗಳನ್ನು ಗಮದಲ್ಲಿಟ್ಟುಕೊಂಡು ಕೆಲವು ದ್ವೀಪಗಳಲ್ಲಿ ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ ಎಂದು ಮೋದಿ ಘೋಷಿಸಿದರು.

ಸೈಬರ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟಲು ಮತ್ತು ಹೆಚ್ಚುತ್ತಿರುವ ಅಪರಾಧವನ್ನು ನಿಗ್ರಹಿಸಲು ಶೀಘ್ರದಲ್ಲೇ ಹೊಸ ಸೈಬರ್ ನೀತಿಯನ್ನು ಜಾರಿಗೊಳಿಸುವುದಾಗಿ ಅವರು ತಿಳಿಸಿದರು.

Facebook Comments

Sri Raghav

Admin