ದಕ್ಷಿಣ ಸಮುದ್ರದ ಬಳಿ ಕ್ಷಿಪಣಿ ಪರೀಕ್ಷೆ ನಡೆಸಿದ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ಆ.27- ದಕ್ಷಿಣ ಸಮುದ್ರದ ಬಳಿ ಚೀನಾ ಸೇನೆ ಎರಡು ಕ್ಷಿಪಣಿಗಳು ಹಾಗೂ ಅತ್ಯಾಧುನಿಕ ಕ್ಯಾರಿಂಗ್ ಕಿಲ್ಲರ್ ಎಂಬ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ.

ಈಗಾಗಲೇ ಭಾರತದ ಗಡಿಯ ಲಾಕ್‍ಡನ್ ಬಳಿ ಸೇನೆಯನ್ನು ನೇಮಿಸಿ ಹಲವಾರು ಶಸ್ತ್ರಗಳನ್ನು ಸಂಗ್ರಹ ಮಾಡಿಕೊಂಡಿದ್ದು, ಈಗ ಕ್ಷಿಪಣಿ ಪ್ರಯೋಗ ನಡೆಸಿರುವುದು ಹಲವು ಕುತೂಹಲ ಕೆರಳಿಸಿದೆ.

ಚೀನಾದ ಪತ್ರಿಕೆಯೊಂದು ಇದನ್ನು ಪ್ರಕಟಿಸಿದ್ದು, ಅಮೆರಿಕವನ್ನು ಬಗ್ಗು ಬಡಿಯಲು ಇದನ್ನು ತಯಾರಿಸಲಾಗಿದೆ ಎಂದು ಹೇಳಲಾಗಿದೆ. ನಿನ್ನೆಯಷ್ಟೇ ಚೀನಾ ಅಮೆರಿಕದ ಗುಪ್ತಚರ ವಿಮಾನವೊದನ್ನು ಹೊಡೆದುರುಳಿಸಿತ್ತು.

ಈ ನಡುವೆ ತಮ್ಮ ದೇಶದ ಗಡಿಯಲ್ಲಿ ಕಟ್ಟೆಚ್ಚರಿಕೆ ಹಿನ್ನೆಲೆಯಲ್ಲಿ ಈ ಕ್ಷಿಪಣಿಗೆ ಅತ್ಯಾಧುನಿಕ ತಂತ್ರಜ್ಞಾನ ಇದೆ ಎಂದು ಹೇಳಲಾಗಿದೆ. ಹನೀನ್ ಮತ್ತು ಪಾರ್ಚಿಲ್ ಬಳಿ ಈ ಪರೀಕ್ಷೆ ನಡೆದಿದೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin