150 ಕೋಟಿ ರೂ. ತೆರಿಗೆ ವಂಚನೆ : ತಮಿಳುನಾಡು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ಅ.29- ತೆರಿಗೆ ವಂಚನೆ ಪ್ರಕರಣಗಳ ಸಂಬಂಧ ದೇಶದ ವಿವಿಧೆಡೆ ಕಾರ್ಯಾಚರಣೆ ಮುಂದುವರೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡಿನ ಶಿಕ್ಷಣ ಸಂಸ್ಥೆಗಳ ಮೇಲೆ ರೇಡ್ ಮಾಡಿ 150 ಕೋಟಿ ರೂ. ಅಕ್ರಮ ಅವ್ಯವಹಾರವನ್ನು ಪತ್ತೆ ಮಾಡಿದ್ದಾರೆ.

ಚೆನ್ನೈ, ಕೊಯಮತ್ತೂರು, ಈರೋಡ್, ನಮಕಲ್ ಸೇರಿದಂತೆ ಕೆಲವು ನಗರಗಳಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು 5 ಕೋಟಿ ರೂ. ನಗದನ್ನು ವಶಪಡಿಸಿಕೊಂಡು 150 ಕೋಟಿ ರೂ.ಗಳ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದಾರೆ. ಪ್ರಭಾವಿ ಗುತ್ತಿಗೆದಾರರೊಬ್ಬರು ನಡೆಸುತ್ತಿದ್ದ ಈ ಶಿಕ್ಷಣ ಸಂಸ್ಥೆಗಳು ಕೆಲವು ವರ್ಷದಿಂದ ಸರ್ಕಾರಕ್ಕೆ ತೆರಿಗೆ ವಂಚಿತ ಪ್ರಕರಣಗಳು ಬಯಲಾಗಿದೆ.

ಈ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಬ್ಯಾಂಕ್ ಲಾಕರ್‍ಗಳು ಪತ್ತೆಯಾಗಿದ್ದು, ಅವುಗಳನ್ನು ತೆರೆದರೆ ಮತ್ತಷ್ಟು ಅಕ್ರಮ, ಅವ್ಯವಹಾರಗಳು ಬಯಲಾಗುವ ನಿರೀಕ್ಷೆಯಿದೆ. ನಿನ್ನೆ ಮತ್ತು ಮೊನ್ನೆ ಆದಾಯ ತೆರಿಗೆ ಇಲಾಖೆಯ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಅಧಿಕಾರಿಗಳು ದೆಹಲಿ, ಪಂಜಾಬ್, ಗೋವಾ, ಉತ್ತರಖಂಡ್ ಸೇರಿದಂತೆ 45ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಹವಾಲಾ ಆಪರೇಟರ್‍ಗಳ ಕೋಟ್ಯಂತರ ರೂ. ಅಕ್ರಮ ಅವ್ಯವಹಾರ ಮತ್ತು ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿದ್ದರು.

Facebook Comments