ಕರ್ನಾಟಕದಲ್ಲಿ ಕುಡುಕರ ಸಂಖ್ಯೆ ಹೆಚ್ಚಳ, ಅಬಕಾರಿ ಆದಾಯದಲ್ಲಿ ಶೇ.10ರಷ್ಟು ಏರಿಕೆ …!

ಈ ಸುದ್ದಿಯನ್ನು ಶೇರ್ ಮಾಡಿ

Drunk--01

ಬೆಂಗಳೂರು, ಅ.4- ರಾಜ್ಯದಲ್ಲಿ ಮದ್ಯ ಮಾರಾಟ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕರಷ್ಟು ಮಾರಾಟ ಹೆಚ್ಚಳವಾಗಿ. ಶೇ.10ರಷ್ಟು ಆದಾಯಲ್ಲೂ ಹೆಚ್ಚಳವಾಗಿದೆ. ರಾಜ್ಯದ ಬೊಕ್ಕಸಕ್ಕೆ ಇದರಿಂದ ಸಾಕಷ್ಟು ಆದಾಯ ಬರುತ್ತಿದ್ದು, ಕುಡುಕರ ಕೊಡುಗೆ ಇದೆಂದರೂ ತಪ್ಪಾಗದು.

ಹನ್ನೊಂದು ವರ್ಷಗಳಲ್ಲಿ ಬರೋಬ್ಬರಿ ಶೇ.77ರಷ್ಟು ಮದ್ಯ ಮಾರಾಟ ಹೆಚ್ಚಳವಾಗಿದ್ದು, ಇದರಿಂದ ಅಬಕಾರಿ ಆದಾಯ ಶೇ.273ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಏಪ್ರಿಲ್, ಸೆಪ್ಟೆಂಬರ್‍ಗೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟದಲ್ಲಿ ಸಾಕಷ್ಟು ಹೆಚ್ಚಳವಾಗಿರುವುದು ಈ ಅಂಕಿ-ಅಂಶಗಳ ಸಮೇತ ಮಾಹಿತಿ ದೊರೆತಿದೆ.
2007-08ರಲ್ಲಿ ಐಎಂಎಲ್ ಹಾಗೂ ಬಿಯರ್ 468.08 ಲಕ್ಷದಷ್ಟು ಬಾಕ್ಸ್‍ಗಳು ಮಾರಾಟವಾಗಿದ್ದರೆ, 2017-18ರ ಸಾಲಿನಲ್ಲಿ 830 ಲಕ್ಷ ಬಾಕ್ಸ್‍ಗಳು ಮಾರಾಟ ವಾಗುವ ಮೂಲಕ ದಾಖಲೆ ನಿರ್ಮಿಸಿದೆ.

2007-08ನೇ ಸಾಲಿನಲ್ಲಿ 4812ಕೋಟಿ ಇದ್ದ ಆದಾಯ 2017-18ನೇ ಸಾಲಿನಲ್ಲಿ 17,948 ಕೋಟಿಗೆ ಏರಿಕೆಯಾಗಿದೆ. ಈ ನಡುವೆ ಸಂಪನ್ಮೂಲ ಕ್ರೂಢೀಕರಣದ ಹೆಸರಿನಲ್ಲಿ ಎರಡು ಬಾರಿ ಅಬಕಾರಿ ಟಾರ್ಗೆಟನ್ನು ಹೆಚ್ಚಳ ಮಾಡಲಾಗಿದ್ದು, ಸದ್ಯ 19,075 ವಾರ್ಷಿಕ ಟಾರ್ಗೆಟ್ ನೀಡಲಾಗಿದೆ.  ಒಟ್ಟಾರೆ ಹೇಳಬೇಕೆಂದರೆ ರಾಜ್ಯದ ಬೊಕ್ಕಸಕ್ಕೆ ಕುಡುಕರ ಕೊಡುಗೆ ಅಪಾರವಾಗಿದ್ದು, ರಾಜ್ಯದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆತಂಕವೂ ಇದೆ.

Facebook Comments

Sri Raghav

Admin