ಟ್ಯೂಷನ್‍ಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.18-ಕೊರೊನಾ ಸೋಂಕಿನ ಪರಿಣಾಮದಿಂದಾಗಿ ಶಾಲೆಗಳಿಗಿಂತ ಟ್ಯೂಷನ್‍ಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಏಸರ್ ಸಂಸ್ಥೆ ನಡೆಸಿರುವ ವಾರ್ಷಿಕ ಶಿಕ್ಷಣ ವರದಿಯಲ್ಲಿ ರಾಜ್ಯದಲ್ಲಿ ಟ್ಯೂಷನ್‍ಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಲ್ಲಿ ಏರಿಕೆಯಾಗಿರುವ ಅಂಶ ಬಯಲಾಗಿದೆ.

2018ರಲ್ಲಿ ಟ್ಯೂಷನ್‍ಗೆ ದಾಖಲಾಗಿದ್ದು, ಬರೀ ಶೇ.10.7 ರಷ್ಟು ವಿದ್ಯಾರ್ಥಿಗಳು ಮಾತ್ರ. 2020 ರಲ್ಲಿ ಟ್ಯೂಷನ್‍ಗೆ ಹೋಗುವವರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿತ್ತು. ಆದರೆ, ಇದೀಗ ಕೊರೊನಾ ಎಫೆಕ್ಟ್‍ನಿಂದಾಗಿ ಟ್ಯೂಷನ್‍ಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಶೇ.20.5ಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ಟ್ಯೂಷನ್‍ಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬರೊಬ್ಬರಿ ಶೇ.10 ರಷ್ಟು ಹೆಚ್ಚಳವಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ರಾಜ್ಯದ್ಯಂತ 11,545 ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದ್ದು, ವಿದ್ಯಾರ್ಥಿಗಳು ಟ್ಯೂಷನ್ ಪಡೆದುಕೊಳ್ಳುತ್ತಿರುವವರ ಪಟ್ಟಿಯಲ್ಲಿ ರಾಜ್ಯಕ್ಕೆ 11 ನೇ ಸ್ಥಾನ ಲಭಿಸಿದೆ.

ಟ್ಯೂಷನ್ ಮೊರೆ ಹೋಗಲು ಕಾರಣವೇನು? ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಕಾಡುತ್ತಿರುವುದರಿಂದ ಶಾಲಾ-ಕಾಲೇಜುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳ ಶೈಕ್ಷಣಿಕ ಕೊರತೆ ಎದುರಾಗಬಾರದು ಹಾಗೂ ಮಕ್ಕಳ ಜ್ಞಾನ ವೃದ್ಧಿಯಾಗಲಿ ಎಂಬ ಉದ್ದೇಶದಿಂದ ಪೋಷಕರು ಟ್ಯೂಷನ್‍ಗೆ ಮೊರೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ.

ಯಾವ ರಾಜ್ಯಗಳಲ್ಲಿ ಟ್ಯೂಷನ್‍ಗೆ ಹೋಗುವವರ ಸಂಖ್ಯೆ ಹೆಚ್ಚಿದೆ: ದೇಶದ್ಯಾಂತ ನಡೆಸಿರುವ ಸಮೀಕ್ಷೆಯಲ್ಲಿ ಬೀಹಾರ ಹಾಗೂ ಪಶ್ಚಿಮ ಬಂಗಾಳದ ಶೇ.70 ರಷ್ಟು ವಿದ್ಯಾರ್ಥಿಗಳು ಟ್ಯೂಷನ್ ಅಲವಂಬಿಸಿದ್ದರೆ, ಒಡಿಸ್ಸಾದ ಶೇ.60, ಮಹಾರಾಷ್ಟ್ರದ ಶೇ.20, ಆಂಧ್ರಪ್ರದೇಶದ ಶೆ.23, ತಮಿಳುನಾಡಿನ ಶೇ.17, ಕೇರಳದ ಶೇ.19 ಹಾಗೂ ತೆಲಂಗಾಣದ ಶೇ.10 ರಷ್ಟು ವಿದ್ಯಾರ್ಥಿಗಳು ಟ್ಯೂಷನ್ ಅವಲಂಭಿಸಿರುವುದು ಬೆಳಕಿಗೆ ಬಂದಿದೆ.

Facebook Comments