ಆಗ್ಲರನ್ನು ಬಗ್ಗುಬಡಿದ ಭಾರತ, 2ನೇ ಟೆಸ್ಟ್‌ನಲ್ಲಿ 317 ರನ್‌ಗಳ ಭರ್ಜರಿ ಜಯ..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ ಫೆ 16.ಆಂಗ್ಲರ ಸೊಕ್ಕನ್ನು ಬಗ್ಗು ಬಡಿದು ಭಾರತ ಎರಡನೆ ಟೆಸ್ಟ್ ನಲ್ಲಿ ದಾಖಲೆಯ ಅಂತರದಿಂದ ಜಯಗಳಿಸಿದೆ ನಾಲ್ಕನೆ ದಿನದಾಟದಲ್ಲಿ ಇಂದು ಜೋ ರೂಟ್ ಅವರ ವಿಕೆಟ್ ಉರುಳಿದ ನಂತರ ಆಂಗ್ಲ ಪಡೆ ಕೇವಲ 164 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ ಮೊದಲ ಟೆಸ್ಟ್ ಸೋತು ಕಂಗಾಲಾಗಿದ್ದ ಭಾರತದ ಮತ್ತೆ ಆತ್ಮವಿಶ್ವಾಸದಿಂದ ಆಡಿ 317 ರನ್ ಗಳ ಅಂತರದಿಂದ ಜಯಭೇರಿ ಬಾರಿಸಿದೆ .

ಇನ್ನೂ 1ದಿನ ಬಾಕಿ ಉಳಿದಿರುವಂತೆಯೇ ಇಂಗ್ಲೆಂಡ್ ನ ಬ್ಯಾಟಿಂಗ್ ಬಲವನ್ನು ಸಂಪೂರ್ಣವಾಗಿ ಧೂಳಿಪಟ ಮಾಡಿರುವ ಭಾರತದ ಬೌಲರ್ ಗಳು ದಾಖಲೆಯ ಗೆಲುವಿನಿಂದ ಬೀಗಿದ್ದಾರೆ. ದ್ವಿತೀಯ ಇನಿಂಗ್ಸ್ ನಲ್ಲಿ ಇಂದು ಮತ್ತೆ ಅಕ್ಷರ್ ಪಟೇಲ್ ಚಮತ್ಕಾರಿ ಬೌಲಿಂಗ್ ದಾಳಿ ನಡೆಸಿ ಒಟ್ಟು 5ವಿಕೆಟ್ ಪಡೆಯುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಅಂತೆಯೇ ಅಶ್ವಿನ್ 3ವಿಕೆಟ್ ಇಶಾಂತ್ ಶರ್ಮಾ 2ವಿಕೆಟ್ ಪಡೆಯುವ ಮೂಲಕ ಆಂಗ್ಲರ ಇಂಗ್ಲೆಂಡ್ ತಂಡವನ್ನು ಎರಡೂ ಇನಿಂಗ್ಸ್ ನಲ್ಲಿ ಕೇವಲ ಇನ್ನೂರು ರನ್ ಒಳಗೆ ಕಟ್ಟಿ ಹಾಕಿದ ಭಾರತೀಯ ಬೌಲರ್ ಗಳ ಕರಾರುವಾಕ್ ಬೌಲಿಂಗ್ ದಾಳಿ ಬಹುಪರಾಕ್ ಹಾಕಿದ್ದಾರೆ

ಸ್ಕ್ರೋರ್ ವಿವರ
ಮೊದಲ ಇನಿಂಗ್ಸ್
ಭಾರತ: 329-10
ಇಂಗ್ಲೆಂಡ್: 134-10

ದ್ವಿತೀಯ ಇನಿಂಗ್ಸ್
ಭಾರತ: 289-10
ಇಂಗ್ಲೆಂಡ್: 164-10

ಭಾರತಕ್ಕೆ 317 ರನ್‌ಗಳ ಜಯ

Facebook Comments