ಗಿಲ್, ಮಯಾಂಕ್ ಆರ್ಭಟ : ಭಾರತ ಉತ್ತಮ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.3- ಮುಂಬೈನ ವಾಖಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೆ ಟೆಸ್ಟ್ ಪಂದ್ಯವು ಮಳೆಯಿಂದಾಗಿ ತಡವಾಗಿ ಆರಂಭಗೊಂಡರೂ ಕೂಡ ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಪಡೆಯು ಉತ್ತಮ ಆರಂಭ ಪಡೆದಿದೆ. ಕಾನ್ಪುರ ಟೆಸ್ಟ್ ಡ್ರಾ ಆಗಿರುವುದರಿಂದ ಈ ಟೆಸ್ಟ್ ಪಂದ್ಯವು ನಿರ್ಣಾಯಕವಾಗಿರುವುದರಂದ ಮುಂಬೈ ಟೆಸ್ಟ್‍ಗೆ ಮಹತ್ವ ಬಂದಿದ್ದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಕೈಗೊಂಡಿರುವ ಭಾರತವು ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಹಾಗೂ ಮಯಾಂಕ್ ಅಗರ್‍ವಾಲ್ ಅವರು ಉತ್ತಮ ಹೋರಾಟ ನಡೆಸುತ್ತಿದ್ದಾರೆ.

ಆರಂಭದ ಎಸೆತದಿಂದಲೂ ಉತ್ತಮ ಬ್ಯಾಟಿಂಗ್ ನಡೆಸಿದ ಈ ಇಬ್ಬರು ಆಟಗಾರರು 109 ಎಸೆತಗಳಲ್ಲೇ 50 ರನ್‍ಗಳ ಜೊತೆಯಾಟ ನೀಡಿದರು.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಮಯಾಂಕ್ ಅಗರ್ ವಾಲ್ (32 ರನ್, 3 ಬೌಂಡರಿ, 1 ಸಿಕ್ಸರ್) ಹಾಗೂ ಶುಭಮನ್ ಗಿಲ್ ( 44 ರನ್, 7 ಬೌಂಡರಿ, 1 ಸಿಕ್ಸರ್) ಗಳಿಸಿದ್ದು ಭಾರತ ವಿಕೆಟ್ ನಷ್ಟ ವಿಲ್ಲದೆ 27 ಓವರ್‍ಗಳಲ್ಲಿ 80 ರನ್‍ಗಳನ್ನು ಗಳಿಸಿತ್ತು.

Facebook Comments