ಇಂದು ಎಲ್ಲೆಲ್ಲೂ ಕ್ರಿಕೆಟ್ ಜ್ವರ, ಬದ್ಧ ವೈರಿಗಳ ಕಾದಾಟಕ್ಕೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಮ್ಯಾಂಚೆಸ್ಟರ್(ಓಲ್ಡ್ ಟ್ರಾಫರ್ಡ್), ಜೂ.16- ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾರೀ ಕುತೂಹಲ ಕೆರಳಿಸಿತ್ತು.

ಮ್ಯಾಂಚೆಸ್ಟರ್ ನಗರದ ಆಕಾಶದಲ್ಲಿ ದಟ್ಟವಾದ ಮೋಡ ಕವಿದ ವಾತಾವರಣವಿದ್ದರೂ ಕೂಡ ಜನರು ಮಾತ್ರ ಮೈದಾನದತ್ತ ಬೆಳಗಿನಿಂದಲೇ ಆಗಮಿಸುತ್ತಿದ್ದರು. ಅವರಲ್ಲಿ ಕ್ರೀಡಾ ಉತ್ಸಾಹ ಪುಟಿದೇಳುತ್ತಿತ್ತು.

ಐಸಿಸಿ ವೆಬ್‍ಸೈಟ್‍ಗೆ ಸುಮಾರು 40ಲಕ್ಷಕ್ಕೂ ಹೆಚ್ಚು ಮಂದಿ ಲಾಗ್ ಆನ್ ಆಗಿ ಟಿಕೆಟ್‍ಗಾಗಿ ಭಾರೀ ಬೇಡಿಕೆ ಇಟ್ಟಿದ್ದರು. ಇಷ್ಟೊಂದು ದೊಡ್ಡ ಮಟ್ಟದ ಬೇಡಿಕೆ ನಾವು ನಿರೀಕ್ಷಿಸಿರಲಿಲ್ಲ. ಆದರೂ ಎಲ್ಲರಿಗೂ ಈ ಮಹಾ ಕ್ರೀಡೆಯ ಬಗ್ಗೆ ಇರುವ ಆಸಕ್ತಿ ಮತ್ತು ಕುತೂಹಲಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಕ್ರಿಕೆಟ್ ಇಂಗ್ಲೆಂಡ್ ಹೇಳಿದೆ.

ಮುಂಜಾನೆಯೇ ತುಂತುರು ಮಳೆಯ ಸಿಂಚನವಾಗುತ್ತಿದ್ದರೂ ಪಂದ್ಯ ಆರಂಭ ವೇಳೆಗೆ ಇದು ನಿಲ್ಲಲಿದೆ ಎಂಬ ಆಶಾಭಾವನೆ ಮೂಡಿಸಿತ್ತು. ನಿಗದಿಯಂತೆಯೇ ಪಂದ್ಯ ಆರಂಭವಾಗಬಹುದು ಎಂಬ ಎಲ್ಲರ ನಿರೀಕ್ಷೆ ಇತ್ತು.

ಭಾರತ ಹಾಗೂ ಪಾಕ್‍ನ ಆಟಗಾರರು ಇದೇ ಚಿಂತೆಯಲ್ಲಿದ್ದರೂ ಕೂಡ ಎರಡು ತಂಡಗಳ ಮೇಲೆ ಭಾರೀ ಒತ್ತಡ ಕಾಣುತ್ತಿತ್ತು. ಪ್ರಾಕ್ಟೀಸ್ ಪಿಚ್‍ನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದ ಆಟಗಾರರಿಗೆ ಮಳೆಯ ಕಾಟವೂ ಕೂಡ ಕಾಡಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin