ಸ್ವಾತಂತ್ರ್ಯ ದಿನಾಚರಣೆ ಮೇಲೆಯೂ ಕೊರೋನಾ ಕರಿನೆರಳು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.16- ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಸಂಪ್ರದಾಯಕ್ಕೂ ಕೋವಿಡ್ ಹೆಮ್ಮಾರಿ ಚ್ಯುತಿ ತರಲಿದೆ. ಪ್ರತಿ ವರ್ಷದಂತೆಯೇ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡತ್ತಾರಾದರೂ ಅದನ್ನೂ ಕಣ್ತುಂಬಿಕೊಳ್ಳುವ ಜನರ ಸಂಖ್ಯೆಗೆ ಕಡಿವಾಣ ಬೀಳಲಿದೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಪ್ರಧಾನಿ ಭಾಷಣಕ್ಕೆ ಸುಮಾರು ಸಾವಿರ ಮಂದಿ ಗಣ್ಯರಿಗೆ ಪ್ರತ್ಯಕ್ಷ ಅವಕಾಶವಿರುತ್ತಿತ್ತು. ಆದರೆ ಈ ಬಾರಿ ಕೇವಲ ನೂರು ಮಂದಿಗಷ್ಟೇ ಪ್ರಧಾನಿ ಭಾಷಣ ವೀಕ್ಷಣೆಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಇನ್ನೂ ಒಂದು ತಿಂಗಳು ಇದ್ದು, ಈಗಾಗಲೇ ಕೈಗೊಳ್ಳಬೇಕಾದ ವ್ಯವಸ್ಥೆಗಳ ಪರಿಶೀಲನೆ ನಡೆದಿದೆ.ಕೆಂಪು ಕೋಟೆಯಲ್ಲಿನ ಕಾರ್ಯಕ್ರಮಗಳನ್ನು ಕಡಿತಗೊಳಿಸಿ ಹೆಚ್ಚಿನ ಜನ ಸಂದಣಿ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.

ಇದೇ ರೀತಿ ವಿವಿಧ ರಾಜ್ಯಗಳಲ್ಲಿ ಸಹ ಸ್ವಾತಂತ್ರ್ಯ ದಿನಾಚರಣೆಗಳ ಸಂಪ್ರದಾಯ ಇದ್ದರೂ ಅದರ ಸಂಭ್ರಮಕ್ಕೆ ಕೋವಿಡ್ ಕಂಟಕ ಒಡ್ಡಲಿರುವುದು ಖಚಿತ ಎನ್ನುವಂತಾಗಿದೆ.

Facebook Comments

Sri Raghav

Admin