ಸಚಿವ ಸ್ಥಾನಕ್ಕೆ ನಾಗೇಶ್, ಶಂಕರ್ ರಾಜೀನಾಮೆ : ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.8- ಇತ್ತೀಚೆಗಷ್ಟೇ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ್ ಹಾಗೂ ಶಂಕರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ರಾಜ್ಯಪಾಲರನ್ನು ಭೇಟಿಮಾಡಿ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ. ಈ ಬೆಳವಣಿಗೆಗಳ ನಡುವೆಯೇ ಸಣ್ಣ ಕೈಗಾರಿಕೆ ಸಚಿವರಾಗಿದ್ದ ಎಚ್.ನಾಗೇಶ್ ಇಂದು ಬೆಳಿಗ್ಗೆ ದಿಢೀರನೆ ರಾಜೀನಾಮೆ ನೀಡಿ ಬೆಂಬಲ ವಾಪಸ್ ಪಡೆಯುತ್ತಿರುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದರು.

ಮದ್ಯಾಹ್ನ ಶಂಕರ್ ಕೂಡ ರಾಜ್ಯಪಾಲರನ್ನು ಭೇಟಿಯಾಗಿ ತಾವು ಈಗಾಗಲೇ ರಾಜೀನಾಮೆ ಪಾತ್ರವನ್ನು ಸಮನ್ವಯ ಅಧ್ಯಕ್ಷಾಧಾರ ಸಿದ್ದರಾಮಯ್ಯನವರಿಗೆ ನೀಡಿದ್ದೇನೆ ಪ್ರಸ್ತುತ ನಾನು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ಪತ್ರ ನೀಡಿದ್ದಾರೆ. ಇದರಿಂದಾಗಿ ಬಿಜೆಪಿಗೆ ಪಕ್ಷೇತರ ಶಾಸಕರಿಬ್ಬರ ಸಿಕ್ಕಿದ್ದು ಬಿಜೆಪಿ ಬಲ ಈಗ 107 ಕ್ಕೆ ತಲುಪಿದೆ.

ಇನ್ನು ರಾಜೀನಾಮೆ ನೀಡಿರುವ 14 ಶಾಸಕರು ಇವರ ಬಿಜೆಪಿ ಜೊತೆ ಸೇರಿದರೆ ಸಂಖ್ಯೆ 120 ರ ಗಡಿ ಮುಟ್ಟುವುದು. ಆದರೆ ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಾಳೆ ಸ್ಪೀಕರ್ ಶಾಸಕರ ರಾಜಿನಾಮೆಯನ್ನು ಅಂಗೀಕರಿಸಿದರೆ ಸರ್ಕಾರ ಎಳ್ಪಮೊಟ್ಟಕ್ಕೋ ಕುಸಿಯುವುದು ನಿಶ್ಚಿತವಾಗಲಿದೆ.

ಇನ್ನು ಉಪಚುನಾವಣೆಗಳು ನಡೆದು ಅಲ್ಲಿ ಗೆದ್ದು ಬರುವ ಶಾಸಕರ ಅನುಗುಣವಾಗಿ ಬಿಜೆಪಿ ಬಲ ಎಷ್ಟಕ್ಕೆ ಮುಟ್ಟುತ್ತೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

Facebook Comments

Sri Raghav

Admin