ಆಸ್ಟ್ರೇಲಿಯಾಕ್ಕೆ ತೆರಳಿದ ಭಾರತೀಯ ಆಟಗಾರರು

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ನ.12- ಐಪಿಎಲ್‍ನಲ್ಲಿ ನಿರತರಾಗಿದ್ದ ಭಾರತೀಯ ಆಟಗಾರರು ಆಸ್ಟ್ರೇಲಿಯಾದಲ್ಲಿ ನಡೆಯುವ ಕ್ರಿಕೆಟ್ ಸರಣಿಗಾಗಿ ಪಯಣ ಬೆಳೆಸಿದ್ದಾರೆ. ಆಟಗಾರರ ಆರೋಗ್ಯದ ದೃಷ್ಟಿಯಿಂದಾಗಿ ಎಲ್ಲರಿಗೂ ಪಿಪಿಇ ಕಿಟ್ ಅನ್ನು ವಿತರಿಸಿದ್ದು ಆಸ್ಟ್ರೇಲಿಯಾ ನೆಲದಲ್ಲಿ 3 ತಿಂಗಳ ಕಾಲ ನೆಲೆ ಯೂರಲಿರುವ ಕೊಹ್ಲಿ ಪಡೆಯು ಏಕದಿನ, ಟೆಸ್ಟ್ ಹಾಗೂ ಟ್ವೆಂಟಿ-20 ಪಂದ್ಯಗಳನ್ನಾಡಲಿದೆ.

ಈ ಸರಣಿಯಲ್ಲಿ ಹಲವು ಯುವ ಪ್ರತಿಭೆಗಳು ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಿಕೊಳ್ಳಲು ಸಿದ್ಧವಾಗಿದ್ದು ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿ ಆಟಗಾರರಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್‍ನ ನಂತರ ಭಾರತಕ್ಕೆ ಹಿಂದುರಿಗಲಿರುವುದರಿಂದ ಉಳಿದ ಟೆಸ್ಟ್‍ಗಳಿಗೆ ಐಪಿಎಲ್ ಚಾಂಪಿಯನ್ಸ್ ನಾಯಕ ರೋಹಿತ್ ಶರ್ಮಾ ಅವರು ನಾಯಕತ್ವ ವಹಿಸಿಕೊಳ್ಳುವ ಸೂಚನೆಗಳಿವೆ,.

Facebook Comments