ಅ.24 ರಂದು ಭಾರತ-ಪಾಕ್ ನಡುವೆ ಕ್ರಿಕೆಟ್ ಯುದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.4- ಚುಟುಕು ವಿಶ್ವಕಪ್‍ನ ಅಂತಿಮ ದಿನಾಂಕ ಪ್ರಕಟಗೊಂಡಿದ್ದು ಅಕ್ಟೋಬರ್ 24 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮಹಾಸಮರ ನಡೆಯಲಿದೆ.ಈ ಬಾರಿಯ ಚುಟುಕು ವಿಶ್ವಕಪ್‍ನಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು ಅಕ್ಟೋಬರ್ 17 ರಿಂದ ನವೆಂಬರ್ 14 ರಂದು ಕ್ರೀಡಾಕೂಟ ನಡೆಯಲಿದೆ.

ನವೆಂಬರ್ 14 ರಂದು ನಡೆಯುವ ಫೈನಲ್ ಪಂದ್ಯದ ನಂತರ ಟ್ವೆಂಟಿ-20 ಚಾಂಪಿಯನ್ ತಂಡ ಪ್ರಕಟಗೊಳ್ಳಲಿದೆ. ಈ ಹಿಂದೆ ಭಾರತ ಹಾಗೂ ಪಾಕಿಸ್ತಾನದ 2016ರ ಚುಟುಕು ವಿಶ್ವಕಪ್‍ನಲ್ಲಿ ಕೊನೆಯ ಬಾರಿಗೆ ಸೆಣಸಿದ್ದಾಗ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 18 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿದರೆ, ನಂತರ ಬ್ಯಾಟಿಂಗ್ ಮಾಡಿದ ಭಾರತ 15.5 ಓವರ್‍ಗಳಲ್ಲೇ 4 ವಿಕೆಟ್‍ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತ್ತು. ವಿರಾಟ್ ಕೊಹ್ಲಿ 55 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

Facebook Comments