ವಿಶ್ವಸಂಸ್ಥೆಯಲ್ಲಿ ಚೀನಾಗೆ ಮತ್ತೊಮ್ಮೆ ಮುಖಭಂಗ..! ಭಾರತ ಮೇಲುಗೈ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಸೆ.15-ಸಂಯುಕ್ತ ರಾಷ್ಟ್ರಗಳ(ಯುಎನ್) ವೇದಿಕೆಯಲ್ಲಿ ಚೀನಾಗೆ ಮತ್ತೊಮ್ಮೆ ಭಾರೀ ಮುಖಭಂಗವಾಗಿದ್ದು, ಮಹಿಳೆಯರ ಸ್ಥಿತಿಗತಿ ಕುರಿತ ವಿಶ್ವಸಂಸ್ಥೆಯ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗುವ ಮೂಲಕ ಗೆಲುವು ಸಾಧಿಸಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ಇಸಿಒಎಸ್‍ಒಸಿ) ಕಾರ್ಯನಿರ್ವಹಣ ಆಯೋಗವಾದ ಮಹಿಳೆಯರ ಸ್ಥಿತಿಗತಿ ಕುರಿತ ಯುಎನ್‍ಕಮಿಷನ್‍ಗೆ ನಡೆದ ಮಹತ್ವದ ಚುನಾವಣೆಯಲ್ಲಿ ಭಾರತ, ಚೀನಾವನ್ನು ಮಣಿಸಿ ಸದಸ್ಯತ್ವ ಪಡೆದಿದೆ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ತಿಳಿಸಿದ್ದಾರೆ.

ಆಯೋಗದ ಸದಸ್ಯತ್ವಕ್ಕಾಗಿ ಭಾರತ, ಚೀನಾ ಮತ್ತು ಆಫ್ಘಾನಿಸ್ತಾನ ದೇಶಗಳು ಸ್ರ್ಪಸಿದ್ದವು. ಈ ಚುನಾವಣೆಯಲ್ಲಿ ಭಾರತ 39, ಆಫ್ಘಾನಿಸ್ಥಾನ 38 ಮತ್ತು ಚೀನಾ 27 ಮತಗಳನ್ನು ಪಡೆದವು. ಭಾರತ ಮುಂದಿನ ನಾಲ್ಕು ವರ್ಷಗಳ ಅವಗೆ ವಿಶ್ವಸಂಸ್ಥೆಯ ಈ ಆಯೋಗದ ಸದಸ್ಯ ರಾಷ್ಟ್ರವಾಗಿ ಕಾರ್ಯನಿರ್ವಹಿಸಲಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಭಾರತ ಪ್ರತಿಷ್ಠಿತ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.

ಇದು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಬಿಂಬಿಸುವ ಅನುಮೋದನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಆಯೋಗದಲ್ಲಿ ಭಾರತ ಸದಸ್ಯ ರಾಷ್ಟ್ರವಾಗಲು ಬೆಂಬಲ ನೀಡಿದ ಎಲ್ಲ ದೇಶಗಳಿಗೂ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿರುಮೂರ್ತಿ ಹೇಳಿದ್ದಾರೆ.

Facebook Comments

Sri Raghav

Admin