2017ರ ಭಾರತ-ಇಸ್ರೇಲ್ ರಕ್ಷಣಾ ಒಪ್ಪಂದದ ಭಾಗವಾಗಿತ್ತಾ ಪೆಗಾಸಸ್..?

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್,ಜ.29- ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಒಂದು ಕ್ಷಿಪಣಿ ವ್ಯವಸ್ಥೆ 2017ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಏರ್ಪಟ್ಟ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ಸಲಕರಣಿಗಳ ಅಂದಾಜು ಎರಡು ಶತಕೋಟಿ ಅಮೆರಿಕನ್ ಡಾಲರ್‍ಗಳ ಮೊತ್ತದ ಒಪ್ಪಂದದ ಕೇಂದ್ರಬಿಂದುವಾಗಿದ್ದವು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಕೆಲವು ಸಕ್ರಾಗಳು ಪತ್ರಕರ್ತರು, ಮಾನವ ಹಕ್ಕುಗಳ ಸಮರ್ಥಕರು, ರಾಜಕಾರಣಿಗಳು ಮತ್ತು ಇತರ ಮೇಲೆ ನಿಗಾವಹಿಸಲು ಇಸ್ರೇಲ್‍ನ ಎನ್‍ಎಸ್‍ಒ ಗ್ರೂಪ್‍ನ ಪೆಗಾಸ್ ಸಾಫ್ಟ್‍ವೇರ್ ಬಳಸಿವೆ ಎಂಬ ಆರೋಪ ವ್ಯಕವಾದ ಕಾರಣ ಕಳೆದ ವರ್ಷ ಭಾರೀ ವಿವಾದ ಉಂಟಾಗಿತ್ತು ಮತ್ತು ಖಾಸಗಿತನದ ಕುರಿತು ಆತಂಕಗಳು ಮೂಡಿದ್ದವು.

ಪ್ರಪಂಚದ ಅತ್ಯಂತ ಶಕ್ತಿಶಾಲಿ ಸೈಬರ್ ಆಯುಧಕ್ಕಾಗಿನ ಕದನ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿರುವ ನ್ಯೂಯಾರ್ಕ್ ಟೈಮ್ಸ್ ಇಸ್ರೇಲಿ ಕಂಪನಿ ಎನ್‍ಎಸ್‍ಒ ಗ್ರೂಪ್ ಸುಮಾರು ಒಂದು ದಶಕದಿಂದ ತನ್ನ ಕಣ್ಗಾವಲು ಸಾಫ್ಟ್‍ವೇರ್‍ನ್ನು ಜಗತ್ತಿನಾದ್ಯಂತದ ಕಾನೂನು ಅನುಷ್ಠಾನ ಮತ್ತು ಗುಪ್ತಚರ(ಬೇಹುಗಾರಿಕಾ) ಸಂಸ್ಥೆಗಳಿಗೆ ಚಂದಾದಾರಿಕೆ ಆಧಾರದಲ್ಲಿ ಮಾರಾಟ ಮಾಡುತ್ತ ಬಂದಿದೆ ಎಂದು ತಿಳಿಸಿದೆ.

ಈ ಸಾಫ್ಟ್‍ವೇರ್ ಯಾವುದೇ ಖಾಸಗಿ ಅಥವಾ ಸರ್ಕಾರಿ ಬೇಹುಗಾರಿಕ ಸಂಸ್ಥೆ ಮಾಡದಂತಹ ಕಾರ್ಯ ನಿರ್ವಹಿಸುತ್ತದೆ. ಸ್ಥಿರವಾಗಿ ಮತ್ತು ವಿಶ್ವಾಸರ್ಹಾವಾಗಿ ಯಾವುದೇ ಐಫೋನ್ ಅಥವಾ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್‍ನ ಸಂವಹನಗಳಿಗೆ ಕನ್ನಡ ಹಾಕಲು ಸಮರ್ಥವಾಗಿದೆ ಎಂದು ಎನ್‍ಎಸ್‍ಒ ಗ್ರೂಪ್ ಭರವಸೆ ನೀಡಿತ್ತು ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.

ಈ ವರದಿಯಲ್ಲಿ 2017ರಲ್ಲಿ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‍ಗೆ ಭೇಟಿ ನೀಡಿದ್ದನ್ನೂ ಪ್ರಸ್ತಾಪಿಸಲಾಗಿದೆ. ಅದು ಇಸ್ರೇಲ್‍ಗೆ ಭೇಟಿ ನೀಡಿದ್ದನ್ನೂ ಪ್ರಸ್ತಾಪಿಸಲಾಗಿದೆ. ಅದು ಇಸ್ರೇಲ್‍ಗೆ ಭಾರತದ ಪ್ರಧಾನಿಯೊಬ್ಬರ ಪ್ರಥಮ ಭೇಟಿಯಾಗಿತ್ತು.

ಕಾಂಗ್ರೆಸ್ ವಾಗ್ದಾಳಿ:
ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ ವರದಿಯ ಪ್ರಕಾರ ಕೇಂದ್ರ ಸರ್ಕಾರ ಸ್ಪೈವೇರ್ ಬಳಸಿ ಗೂಢಚಾರಿಕೆ ನಡೆಸಿರುವುದು ದೇಶದ್ರೋಹಕ್ಕೆ ಸಮಾನ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.

ಮೋದಿ ಅವರ ಸರ್ಕಾರ ಭಾರತದ ಶತ್ರುಗಳಂತೆ ಏಕೆ ಈ ಕೃತ್ಯ ಮಾಡಿತು? ಯುದ್ಧಕ್ಕೆ ಬಳಸುವಂತಹ ಆಯುಧವನ್ನು ಭಾರತೀಂ ನಾಗರಿಕರ ಮೇಲೆ ಏಕೆ ಪ್ರಯೋಗಿಸಿತು? ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

Facebook Comments