ಮೆಸ್ಸಿ ಸಾಧನೆ ಮೀರಿಸಿದ ಭಾರತದ ಫುಟ್‍ಬಾಲ್ ಸ್ಟಾರ್ ಛೆಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ದೋಹಾ,ಜೂ.8-ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ 74 ಗೋಲು ಭಾರಿಸುವ ಮೂಲಕ ಭಾರತದ ಫುಟ್‍ಬಾಲ್ ಸ್ಟಾರ್ ಸುನೀಲ್ ಛೆಟ್ರಿ ಅರ್ಜೇಂಟೈನಾದ ಫುಟ್‍ಬಾಲ್ ತಾರೆ ಲಿಯೋನಿಲ್ ಮೆಸ್ಸಿ ಅವರ ಸಾಧನೆಯನ್ನು ಪಕ್ಕಕ್ಕೆ ಸರಿಸಿ ಇತಿಹಾಸ ನಿರ್ಮಿಸಿದ್ದಾರೆ.

2022ರ ಫೀಫಾ ವಿಶ್ವಕಪ್ ಹಾಗೂ 2023ರ ಎಎಫ್‍ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೋಲು ಭಾರಿಸುವ ಮೂಲಕ ಛೆಟ್ರಿ ಈ ಸಾಧನೆ ಮಾಡಿದ್ದಾರೆ.

ಸುನೀಲ್ ಛೆಟ್ರಿ ಅವರ ಈ ಸಾಧನೆಯೊಂದಿಗೆ ಆರು ವರ್ಷಗಳ ನಂತರ ಇದೇ ಮೊದಲ ಭಾರಿಗೆ ಭಾರತ ವಿಶ್ವಕಪ್ ಫುಟ್‍ಬಾಲ್ ಪಂದ್ಯದ ಆರ್ಹತಾ ಸುತ್ತಿನಲ್ಲಿ ಜಯಭೇರಿ ಭಾರಿಸಿದೆ.

ಅತ್ಯಧಿಕ 103 ಗೋಲು ಭಾರಿಸಿರುವ ಪೋರ್ಚಗಲ್‍ನ ಕ್ರಿಸ್ಟಿಯಾನೋ ರೋನಾಲ್ಡೋ ಅವರ ನಂತರದ ಸ್ಥಾನ ಪಡೆದುಕೊಳ್ಳುವಲ್ಲಿ ಛೆಟ್ರಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin