ಲಡಾಖ್ ಗಡಿ ಸಂಘರ್ಷ ಶಮನಕ್ಕೆ ಇಂಡೋ-ಚೀನಾ 5 ಅಂಶಗಳ ಸೂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.11- ಪೂರ್ವ ಲಡಾಖ್‍ನಲ್ಲಿ ಕಳದ ನಾಲ್ಕು ತಿಂಗಳುಗಳಿಂದ ಭಾರತ ಮತ್ತು ಚೀನಾ ನಡುವೆ ತಲೆದೋರಿರುವ ಗಡಿ ಬಿಕ್ಕಟ್ಟು ಮತ್ತು ಯುದ್ಧದ ಕಾರ್ಮೋಡವನ್ನು ಶಮನಗೊಳಿಸಲು ಉಭಯ ದೇಶಗಳನ್ನು ಮಹತ್ವದ ನಿರ್ಧಾರಕೈಗೊಂಡಿದೆ.

ರಷ್ಯಾರಾಜಧಾನಿ ಮಾಸ್ಕೋದಲ್ಲಿ ನಿನ್ನೆರಾತ್ರಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತುಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯೀ ನಡುವೆ ನಡೆದ ಮಾತುಕತೆ ವೇಳೆ ಲಡಾಖ್‍ಗಡಿ ಸಂಘರ್ಷ ಶಮನಗೊಳಿಸಲು ಐದು ಅಂಶಗಳ ನೀಲನಕ್ಷೆ ಸಮ್ಮತಿ ನೀಡಲಾಗಿದೆ.

ಪೂರ್ವ ಲಡಾಖ್ ಗಡಿ ಭಾಗದ ವಾಸ್ತವ ನಿಯಂತ್ರಣರೇಖೆಯಿಂದ (ಎಲ್‍ಎಸಿ) ಉಭಯ ಸೇನಾ ಪಡೆಗಳು ತಕ್ಷಣ ಹಿಂದಕ್ಕೆ ಸರಿಯುವುದು ಮತ್ತುಉದ್ವಿಗ್ನ ವಾತಾವರಣಕ್ಕೆ ಪ್ರಚೋದನೆ ನೀಡಬಹುದಾದಯಾವುದೇ ಕ್ರಮಗಳನ್ನು ತಪ್ಪಿಸುವುದೂ ಸೇರಿದಂತೆಐದು ಸಂಧಾನ ಸೂತ್ರಗಳ ಬಗ್ಗೆ ಉಭಯ ನಾಯಕರು ಚರ್ಚಿಸಿ ಸಹಮತ ನೀಡಿದ್ದಾರೆಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ)ಯ ಸಭೆಯ ಸಂದರ್ಭದಲ್ಲಿಜೈ ಶಂಕರ್ ಮತ್ತು ವಾಂಗ್ ಯೀ ಇಂಡೋ-ಚೀನಾಗಡಿ ಬಿಕ್ಕಟ್ಟುಕುರಿತು ಗಹನ ಸಮಾಲೋಚನೆ ನಡೆಸಿದರು. ಪೂರ್ವ ಲಡಾಖ್‍ನ ಎಲ್‍ಎಸಿ ಬಳಿ ಚೀನಾದಿಂದ ಭಾರೀ ಸಂಖ್ಯೆಯ ಸೇನಾಪಡೆಗಳು ಮತ್ತು ಯುದ್ಧಾಸ್ತ್ರಗಳ ಜಮಾವಣೆ ಬಗ್ಗೆ ಭಾರತವು ಸಭೆಯಲ್ಲಿತೀವ್ರ ಕಳವಳ ವ್ಯಕ್ತಪಡಿಸಿ ಗಡಿ ಭದ್ರತೆಕುರಿತತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿತು.

ಗಡಿ ಭಾಗದಲ್ಲಿ ನಡೆಯುತ್ತಿರುವಚಟುವಟಿಕೆ ಮತ್ತು ಬೆಳವಣಿಗೆಗಳ ಬಗ್ಗೆ ಚೀನಾದಿಂದ ಸ್ಪಷ್ಟ ಉತ್ತರ ಲಭಿಸಿಲ್ಲ ಎಂದು ಸಭೆಯಲ್ಲಿತೀವ್ರಅಸಮಾಧಾನ ವ್ಯಕ್ತಪಡಿಸಿದ ಜೈ ಶಂಕರ್, ನಿಮ್ಮ (ಚೀನಾ) ಸೇನಾಪಡೆ ಪ್ರಚೋದನಾಕಾರಿ ವರ್ತನೆಯಿಂದಗಡಿಯಲ್ಲಿಉದ್ವಿಗ್ನ ವಾತಾವರಣಉಂಟಾಗಿದೆ.

ಅಲ್ಲದೇ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ದ್ವಿಪಕ್ಷೀಯ ಬಾಂಧವ್ಯ ಮತ್ತು ಸೌಹಾರ್ದಯುತ ಶಿಷ್ಟಾಚಾರದಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ ಎಂದು ಆರೋಪಿಸಿದರು.

ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಮಾಡಿಕೊಂಡ ಒಪ್ಪಂದಗಳಿಗೆ ಬದ್ಧವಾಗಿರಲು ಮತ್ತು ಎಲ್‍ಎಸಿಯಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳಲು ಭಾರತವು ಚೀನಾದ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತಿದೆ. ಆದರೆ ಚೀನಾ ಇದಕ್ಕೆ ಸಹಕಾರ ನೀಡುತ್ತಿಲ್ಲಎಂದು ವಿದೇಶಾಂಗ ಸಚಿವರುತೀವ್ರಅಸಮಾಧಾನ ವ್ಯಕ್ತಪಡಿಸಿದರು.

ನಂತರ ನಡೆದ ಉಭಯ ನಾಯಕರ ನಡುವಣ ಮಹತ್ವದ ಸಮಾಲೋಚನೆ ನಂತರ ಪೂರ್ವ ಲಡಾಖ್‍ನಲ್ಲಿಗಡಿ ಸಂಘರ್ಷ ಶಮನಕ್ಕೆ ಐದು ಅಂಶಗಳ ನೀಲನಕ್ಷೆಗೆ ಸಹಮತ ನೀಡಿಅದನ್ನುಯಥಾವತ್ ಪಾಲಿಸಲು ಒಪ್ಪಿಗೆ ನೀಡಲಾಯಿತು.

ಭಾರತ-ಚೀನಾ ನಡುವಣ ಆತಂಕಕಾರಿ ಸಂಘರ್ಷಕ್ಕೆ ಕಾರಣವಾಗಿರುವ ಪೂರ್ವ ಲಡಾಖ್‍ಗಡಿಯಲ್ಲಿ ಉಭಯ ದೇಶಗಳ ನಡುವೆಗುಂಡಿನ ಚಕಮಕಿ ನಡೆದ ನಂತರ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡು ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು.

ಈ ಘಟನೆಯಿಂದಾಗಿ ಪ್ಯಾನ್‍ಗಾಂಗ್ ಸರೋವರ ಪ್ರದೇಶದಲ್ಲಿ ಭಾರೀ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿ, ಆತಂಕಕ್ಕೆ ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಉಭಯ ದೇಶಗಳ ಉನ್ನತ ಸೇನಾಧಿಕಗಳು ಕೂಡಗಡಿ ಬಿಕ್ಕಟ್ಟು ಶಮನಗೊಳಿಸಲು ಮಾತುಕತೆ ಮುಂದುವರಿಸಿದ್ದರು.

Facebook Comments