ಭಾರತೀಯ ಕೋಸ್ಟ್ ಗಾರ್ಡ್ ಕಾರ್ಯಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಢಾಕಾ, ಫೆ.25 (ಎಪಿ)- ಕಳೆದ ಹಲವು ದಿನಗಳಿಂದ ಅಂಡಮಾನ್ ಸಮುದ್ರದ ಮೇಲೆ ಆಹಾರ, ನೀರಿಲ್ಲದೆ ಅಲೆಯುತ್ತಿರುವ ರೋಹಿಂಗ್ಯಾ ನಿರಾಶ್ರಿತರನ್ನು ಕರೆದೊಯ್ಯುವ ದೋಣಿಯ ಹುಡುಕಾಟವನ್ನು ನಮ್ಮ ಮನವಿ ಮೇರೆಗೆ ಭಾರತೀಯ ಕೋಸ್ಟ್ ಗಾರ್ಡ್ ನಡೆಸುತ್ತಿದೆ ಯುಎನ್ ನಿರಾಶ್ರಿತರ ಏಜೆನ್ಸಿ ತಿಳಿಸಿದೆ.

ಸುಮಾರು 90 ಮಂದಿ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತ ದೋಣಿ ಕಳೆದ ಎರಡು ವಾರಗಳ ಹಿಂದೆ ಬಾಂಗ್ಲಾ ದೇಶದಿಂದ ಹೊರಟಿದ್ದು, ಸಾಗರದ ಅಲೆಗಳ ಹೊಡೆತಕ್ಕೆ ಮುರಿದಿದೆ. ನಿರಾಶ್ರಿತರ ರು ಆಹಾರ, ನೀರು ಇಲ್ಲದೆ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಅವರ ಕುಟುಂಬಗಳು ಚಿಂತೆಗೀಡಾಗಿವೆ ಎಂದು ಮಾನವ ಹಕ್ಕುಗಳ ಗುಂಪುಗಳು ವಿಶ್ವಸಂಸ್ಥೆಗೆ ವರದಿ ಮಾಡಿವೆ.

ಅದರ ನಿಟ್ಟಿನಲ್ಲಿ ವಿಶ್ವಸಂಸ್ಥೆ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ, ದೋಣಿ ಅಂಡಮಾನ್ ಸಮುದ್ರದ ಮಧ್ಯೆ ಯಾವ ಸ್ಥಳದಲ್ಲಿದೆ ಎಂಬುದು ತಿಳಿದುಬಂದಿಲ್ಲ. ದೋಣಿ ಹುಡುಕಲು ಯುಎನ್ ಏಜೆನ್ಸಿ ಸಮೀಪದ ರಾಷ್ಟ್ರಗಳನ್ನು ಎಚ್ಚರಿಸಿದೆ ಹಾಗೂ ಅದು ಕಂಡುಬಂದಲ್ಲಿ ಮಾನವೀಯ ನೆರವು ನೀಡಲು ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆ ನಿರಾಶ್ರಿತ ರಾಯಭಾರಿ ತಿಳಿಸಿದ್ದಾರೆ.

ರೋಹಿಂಗ್ಯಾ ಬಿಕ್ಕಟ್ಟನು ಮೇಲ್ವಿಚಾರಣೆ ಮಾಡುವ ಅರಕನ್ ಯೋಜನಾ ನಿರ್ದೇಶಕಿ ಕ್ರಿಸ್ ಲೆವಾ ಅವರು ದೋಣಿಯಲ್ಲಿ ಕನಿಷ್ಟ ಎಂಟು ಮಂದಿ ಸಾವನ್ನಪ್ಪಿರಬಹುದು ಎಂದು ಕೇಳಿದ್ದೇನೆ. ಫೆ.11 ರಂದು ಬಾಂಗ್ಲಾ ದೇಶ ಬಿಟ್ಟ ದೋಣಿ ಈಶಾನ್ಯ ಏಷಿಯಾ ಭಾಗ ತಲುಪುವ ಮಧ್ಯದಲ್ಲಿ ಎಂಜಿನ್ ಮುರಿದುಬಿದ್ದಿದೆ. ಅರಕನ್ ಯೋಜನೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅವರು ಆಹಾರ, ನೀರಿಲ್ಲದೆ ಸಾಯುವ ಸ್ಥಿತಿಯಲ್ಲಿದ್ದಾರೆ ಎಂದಿದ್ದಾರೆ.

#ವಿಶ್ವಸಂಸ್ಥೆ ಮೆಚ್ಚುಗೆ:
ಯುಎನ್ ಏಜೆನ್ಸಿ ಮನವಿ ಮೇರೆಗೆ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ನೇಮಿಸಿ ಅವಿರತವಾಗಿ ರೋಹಿಂಗ್ಯಾ ನಿರಾಶ್ರಿರ ದೋಣಿ ಪತ್ತೆಗಾಗಿ ಅವರ ರಕ್ಷಣೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಯುಎನ್‍ಎಚ್‍ಸಿಆರ್ ರೀಜನಲ್ ಬ್ಯೂರೋ ಆಫ್ ಏಷಿಯಾ ಮತ್ತು ಪೆಸಿಫಿಕ್ ವಕ್ತಾರೆ ಕ್ಯಾಥರೀನ್ ಸ್ಟಬ್ಬರ್‍ಫೀಲ್ಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕೋಸ್ಟ್ ಗಾರ್ಡ್ ವಕ್ತಾರ ಪಿ.ಎನ್. ಅನುಪ್ ಮಾತನಾಡಿ ಪತ್ತೆ ಹಾಗೂ ರಕ್ಷಣಾ ಕಾರ್ಯ ನಡೆಯುತ್ತಿದೆ, ಆದರೆ, ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಆದರೆ, ಬಾಂಗ್ಲಾದೇಶ ಅಕಾರಿಗಳು ನಮಗೆ ಬಾಂಗ್ಲಾದೇಶದ ನೀರಿನ ಮೇಲಿಂದ ರೋಹಿಂಗ್ಯಾ ಮುಸ್ಲಿಮರನ್ನು ಹೊತ್ತ ದೋಣಿಯಾಗಲಿ, ನಿರಾಶ್ರಿತರಾಗಲಿ ಹೋಗಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅಲ್ಲಗಳೆದಿದ್ದಾರೆ.

Facebook Comments

Sri Raghav

Admin