ಇಡೀ ದೇಶಕ್ಕೆ ಕಂಟಕವಾಯ್ತು ದೆಹಲಿಯ ತಬ್ಲಿಘಿ ಜಮಾತ್‌ ಧಾರ್ಮಿಕ ಸಭೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ದೇಶದಲ್ಲಿ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರುವಂತಾಗಿದ್ದ, ಕೊರೋನಾ ಪಿಡುಗು ದೆಹಲಿ ನಮಾಜಿನಿಂದಾಗಿ ಏರುಮುಖವಾಗಿದೆ. ದೆಹಲಿಯ ನಿಜಾಮುದ್ದೀನ್‌ ದರ್ಗಾದಲ್ಲಿ ನಡೆದ ತಬ್ಲೀಘಿ ನಮಾಜಿನಲ್ಲಿ ಭಾಗವಹಿಸಿದ್ದವರ ಪೈಕಿ 647 ಮಂದಿಗೆ ಕೊರೋನಾ ಸೋಂಕು ತಟ್ಟಿರುವುದು ದೃಢಪಟ್ಟಿದೆ. ಈ ನಮಾಜ್ ಮುಗಿಸಿಕೊಂಡ ಹಲವರು ದೇಆದ ವಿವಿಧ ಮೂಲಗೆಳಿಗೆ ಮರಳಿದ್ದು ಇದರಿಂಧಾಗಿ ದೇಶಾದ್ಯಂತ ಸೋಂಕು ಹರಡಲು ಅನುಕೂಲವಾಗಿದೆ.

ಅಂಡಮಾನ್‌ ನಿಕೋಬಾರ್‌, ಅಸ್ಸಾಮ್‌, ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮುಕಾಶ್ಮೀರ, ಜಾರ್ಖಂಡ್‌, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ್‌ ಮತ್ತು ಉತ್ತರಪ್ರದೇಶ ಹೀಗೆ ದೇಶದ 14 ರಾಜ್ಯಗಳಿಂದ ತಬ್ಲಿಘಿ ಜಮಾತ್‌ಗೆ ತೆರಳಿದ್ದವರಲ್ಲಿ ಕೊರೊನಾ ಸೋಂಕು ಹಬ್ಬಿರುವುದು ದೃಢಪಟ್ಟಿದೆ.

ಇನ್ನು ಈವರೆಗೆ 2301 ಜನರಿಗೆ ಭಾರತದಲ್ಲಿ ಕೊರೊನಾ ಇರೋದು ದೃಢಪಟ್ಟಿದ್ದು 56 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ 56 ಸಾವು ಪ್ರಕರಣಗಳಲ್ಲಿ 12 ಪ್ರಕರಣಗಳು ನಿನ್ನೆ ರಿಪೋರ್ಟ್‌ ಆಗಿದ್ದು ಈವರೆಗೆ 157 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ ಅಂತ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಲಾಲ್‌ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ‌ಇದುವರೆಗೆ 2301 ಕೊರೊನಾ ಪ್ರಕರಣ ದಾಖಲಾಗಿವೆ.‌ 24 ಗಂಟೆಯಲ್ಲಿ 339 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.‌ ಕೊರೊನಾ ಸೋಂಕು ಪತ್ತೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಸೇತು ಆಪ್ ಬಿಡುಗಡೆ ಮಾಡಲಾಗಿದೆ.

ದೇಶಾದ್ಯಂತ ಇದುವರೆಗೆ 30 ಲಕ್ಷ ಜನ ಈ ಆಪ್ ಉಪಯೋಗಿಸುತ್ತಿದ್ದಾರೆ. ನಾಗರಿಕರು ಈ ಆಪ್ ಡೌನ್ ಲೋಡ್ ಮಾಡಿಕೊಂಡು ಕೊರೊನಾ ಮಾಹಿತಿ ಪಡೆಯಬಹುದಾಗಿದೆ. ದೇಶಾದ್ಯಂತ 182 ಲ್ಯಾಬುಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 130 ಸರ್ಕಾರಿ ಹಾಗೂ 52 ಖಾಸಗಿ ವಲಯದ್ದಾಗಿವೆ ಎಂದು ಐಸಿಎಂಆರ್ ವರದಿ ಮಾಡಿದೆ.

ದೇಶದಲ್ಲಿ ಇದುವರೆಗೆ 66 ಸಾವಿರ ಟೆಸ್ಟ್ ಗಳನ್ನು ನಡೆಸಲಾಗಿದೆ.‌ ನಿನ್ನೆ ಒಂದೇ ದಿನ 8 ಸಾವಿರ ಸ್ಯಾಂಪಲ್ಸ್ ಪರೀಕ್ಷೆ ಮಾಡಲಾಗಿದೆ ಎಂದು ಅದು ಹೇಳಿದೆ.

# ಕಠಿಣ ಕ್ರಮ..!
ವೈದ್ಯರ ಮೇಲೆ, ವೈದ್ಯಕೀಯ ಸಿಬ್ಬಂದಿ ಮೇಲೆ, ಆಶಾ ಕಾರ್ಯಕರ್ತೆಯರ ಮೇಲೆ ಸಾಕಷ್ಟು ಕಡೆ ಹಲ್ಲೆಯ ವರದಿಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ. ಈ ರೀತಿ ದುರ್ವರ್ತನೆ ತೋರಿಸೋರ ಮೇಲೆ ಕಠಿಣ ಕ್ರಮ ಕೈಗೊಳ್ಳೋದಾಗಿ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ್‌ ಎಚ್ಚರಿಸಿದ್ದಾರೆ.

ದೇಶದ ಹಲವೆಡೆ ವೈದ್ಯರು ‌ಹಾಗೂ ಇತರೆ ಸಿಬ್ಬಂದಿ ಮೇಲೆ ಹಲ್ಲೆ ‌ನಡೆಸಿರುವ ಘಟನೆಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ಗೃಹ ಕಾರ್ಯದರ್ಶಿ ಎಲ್ಲ‌ ರಾಜ್ಯಗಳ‌ ಡಿಜಿಪಿಗಳಿಗೆ ನಿರ್ದೇಶನ ನೀಡಿದ್ದು ಕಠಿಣ ಕ್ರಮ ಜಾರಿಗೆ ಆದೇಶಿಸಿದೆ.

Facebook Comments

Sri Raghav

Admin