24 ಗಂಟೆಗಳಲ್ಲಿ 76,472 ಮಂದಿಗೆ ಕೊರೋನಾ ಅಟ್ಯಾಕ್, 1021 ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.29- ದೇಶದಲ್ಲಿ ಕೊರೋನಾ ರೌದ್ರನರ್ತನ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 76,472 ಮಂದಿಗೆ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 34 ಲಕ್ಷ ಗಡಿ ದಾಟಿದೆ.

ದೇಶದಲ್ಲಿ ಪ್ರಸ್ತುತ 7,52,424 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 34,63,973ಕ್ಕೆ ಏರಿಕೆಯಾಗಿದೆ. ಇದುವರೆಗೂ 26,48,999 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಸತತ ನಾಲ್ಕನೆಯ ದಿನ ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,000 ಕ್ಕೂ ಹೆಚ್ಚಿದೆ.

ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 1021 ಮಂದಿ ಮಹಾಮಾರಿ ವೈರಸ್‍ಗೆ ಬಲಿಯಾಗಿದ್ದು, ಇದುವರೆಗೆ ದೇಶದಲ್ಲಿ ಕೊರೋನಾಗೆ ಮೃತಪಟ್ಟವರ ಸಂಖ್ಯೆ 62,550ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ 34,63,973 ಮಂದಿ ಸೋಂಕಿತರ ಪೈಕಿ 26,48,999 ಮಂದಿ ಗುಣಮುಖರಾಗಿದ್ದು, ದೇಶದಲ್ಲಿ ಇನ್ನೂ 7,52,424 ಸಕ್ರಿಯ ಕೇಸುಗಳಿವೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.

ಜÁಗತಿಕ ಕೊರೊನಾ ವೈರಸ್ ಸಂಖ್ಯೆಯು 2,49,11,716ಕ್ಕೆ ತಲುಪಿದೆ. ಇದರಲ್ಲಿ 8,41,331 ಮಂದಿ ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ 67,70,496 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಅತ್ಯಕ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ದೇಶದಲ್ಲಿ ಇದುವರೆಗೆ 87 ಸಾವಿರಕ್ಕೂ ಅಕ ಮಂದಿ ಆರೋಗ್ಯ ಸಿಬ್ಬಂದಿಗೆ ಕೋವಿಡ್-19 ಸೋಂಕು ತಗುಲಿದೆ. ಈ ಪೈಕಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ದಿಲ್ಲಿ, ಪಶ್ಚಿಮ ಬಂಗಾಳ ಹಾಗೂ ಗುಜರಾತ್ ಹೀಗೆ ಆರು ರಾಜ್ಯಗಳ ಪಾಲು ಶೇ.74ರಷ್ಟಾಗಿದೆ.

ಅಂತೆಯೇ ಒಟ್ಟು 573 ಮಂದಿ ಆರೋಗ್ಯ ಸಿಬ್ಬಂದಿ ಮಾರಕ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ರಾಜ್ಯಗಳ ಪಾಳು ಶೇ.86ರಷ್ಟಾಗಿದೆ.

ಸುಮಾರು 7.5 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾದ ಮಹಾರಾಷ್ಟ್ರದಲ್ಲಿ ಅತ್ಯಕ ಮಂದಿ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತ ಆರೋಗ್ಯ ಸಿಬ್ಬಂದಿಯ ಪೈಕಿ ಶೇಕಡ 28ರಷ್ಟು ಮಂದಿ ಮಹಾರಾಷ್ಟ್ರದವರಾಗಿದ್ದು, ಒಟ್ಟು ಸಾವಿನಲ್ಲಿ ಶೇಕಡ 50ಕ್ಕೂ ಅಕ ಮಂದಿ ಈ ರಾಜ್ಯಕ್ಕೆ ಸೇರಿದವರು.

ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ತಲಾ ಒಂದು ಲಕ್ಷಕ್ಕೂ ಅಕ ಮಂದಿ ಆರೋಗ್ಯ ಸಿಬ್ಬಂದಿಯ ತಪಾಸಣೆ ನಡೆಸಲಾಗಿದೆ. ಕರ್ನಾಟಕದಲ್ಲಿ ಒಟ್ಟು 12,260 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದ್ದು, ಇದು ಮಹಾರಾಷ್ಟ್ರದ ಅರ್ಧದಷ್ಟು.

ತಮಿಳುನಾಡಿನಲ್ಲಿ ವೈದ್ಯರು, ನಸ್ರ್ಗಳು ಹಾಗೂ ಆಶಾ ಕಾರ್ಯಕರ್ತರು ಸೇರಿ 11,169 ಮಂದಿ ಆರೋಗ್ಯ ಸಿಬ್ಬಂದಿಗೆ ಸೋಂಕು ತಗಲಿದೆ. ಒಟ್ಟು ಸೋಂಕಿತ ಆರೋಗ್ಯ ಸಿಬ್ಬಂದಿಯ ಪೈಕಿ ಈ ಮೂರು ರಾಜ್ಯಗಳ ಪಾಲು ಶೇಕಡ 55ರಷ್ಟಾಗಿದೆ.

ಆದರೆ ಭಾರತದಲ್ಲಿ ಮರಣ ಪ್ರಮಾಣ ಕಡಿಮೆ ಎನ್ನುವುದು ಗಮನಾರ್ಹ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ (60,96,235) ಮರಣ ಪ್ರಮಾಣ ಶೇ 3.05ರಷ್ಟಿದೆ. ಇದುವರೆಗೂ 1,85,901 ಮಂದಿ ಮೃತಪಟ್ಟಿದ್ದಾರೆ.

ಎರಡನೆಯ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ (38,12,605 ಪ್ರಕರಣ) ಮರಣ ಪ್ರಮಾಣ 3.14ರಷ್ಟಿದೆ. ಅಲ್ಲಿ 1,19,605 ಮಂದಿ ಬಲಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಮರಣ ಪ್ರಮಾಣ ಶೇ 3.38ರಷ್ಟಿದೆ. ಆದರೆ ಭಾರತದಲ್ಲಿ ಇದು 1.81ರಷ್ಟಿದೆ.

ಇಟಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಸಾವಿನ ಪ್ರಮಾಣ ಶೇ 13.37ರಷ್ಟಿದೆ. ಬ್ರಿಟನ್ನಲ್ಲಿ 3,31,644 ಪ್ರಕರಣಗಳಿದ್ದು, 41,486 ಮಂದಿ (ಶೇ 12.51) ಬಲಿಯಾಗಿದ್ದಾರೆ.

ಮರಣ ಪ್ರಮಾಣದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮೆಕ್ಸಿಕೋ ಭಾರತಕ್ಕಿಂತ ಕೊಂಚ ಮುಂದೆ ಇದೆ. ಇಲ್ಲಿ 63,146 ಮಂದಿ ಮೃತಪಟ್ಟಿದ್ದು, ಮರಣ ಪ್ರಮಾಣ ಶೇ 10.78ರಷ್ಟಿದೆ.

Facebook Comments

Sri Raghav

Admin