ಕ್ರಿಕೆಟ್ ಲೋಕದಲ್ಲಿ ಎಂದಿಗೂ ಮಾಸದ ಆ ಅದ್ಭುತ ಕ್ಷಣಗಳು

ಈ ಸುದ್ದಿಯನ್ನು ಶೇರ್ ಮಾಡಿ

ಕ್ರಿಕೆಟ್ ಲೋಕದಲ್ಲಿ ಹಲವು ನಾಯಕರ ಆಟ, ಪಂದ್ಯಗಳು, ಕೆಲವು ಜೊತೆಯಾಟಗಳು ಎಷ್ಟೇ ವರ್ಷವಾದರೂ ಕೂಡ ಕ್ರೀಡಾಪ್ರೇಮಿಗಳ ಮನಸ್ಸಿನಿಂದ ಮಾಸುವುದೇ ಇಲ್ಲ, ಕಪಿಲ್‍ದೇವ್ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವ ಚಾಂಪಿಯನ್ಸ್ ಆಗಿದ್ದು,

ಇಂಗ್ಲೆಂಡ್ ವಿರುದ್ಧ ನಾಟ್‍ವೆಸ್ಟ್ ಸೀರಿಸ್‍ನಲ್ಲಿ ಮೊಹಮ್ಮದ್ ಕೇಫ್ ಹಾಗೂ ಯುವರಾಜ್‍ಸಿಂಗ್‍ರ ಅದ್ಭುತ ಪ್ರದರ್ಶನದಿಂದ ಸರಣಿಯನ್ನು ಗೆದ್ದು ಬೀಗಿದ್ದು, ಕ್ರಿಕೆಟ್ ಮಾಂತ್ರಿಕ ಸಚಿನ್‍ತೆಂಡೂಲ್ಕರ್ ಪ್ರಥಮ ಬಾರಿಗೆ ದ್ವಿಶತಕ ಬಾರಿಸಿದ್ದು, 2011ರಲ್ಲಿ ತಮ್ಮ ಹೆಲಿಕಾಪ್ಟರ್ ಹೊಡೆತದಿಂದ ಮಹೇಂದ್ರಸಿಂಗ್ ಧೋನಿ ಮತ್ತೊಮ್ಮೆ ಭಾರತ ತಂಡವನ್ನು ಎರಡನೇ ಬಾರಿಗೆ ಏಕದಿನ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದು,

ಮಿಸ್ಬಾ ಉಲ್ ಹಕ್‍ರನ್ನು ಔಟ್ ಮಾಡುವ ಮೂಲಕ ಭಾರತ ಚೊಚ್ಚಲ ಬಾರಿಗೆ ಚುಟುಕು ಕ್ರಿಕೆಟ್‍ನ ವಿಶ್ವ ಚಾಂಪಿಯನ್ಸ್ ಆದ ಕ್ಷಣಗಳು ಎಷ್ಟೇ ವರ್ಷ ಕಳೆದರೂ ಕ್ರೀಡಾ ಪ್ರೇಮಿಗಳ ಮನಸ್ಸಿನಿಂದ ಮಾಸುವುದೇ ಇಲ್ಲ.

ಅಂತಹದೇ ಒಂದು ಅದ್ಭುತ ಕ್ಷಣಕ್ಕೆ ಕಾರಣೀಭೂತರಾಗಿರುವವರು ಟೀಂ ಇಂಡಿಯಾದ ಮಾಜಿ ನಾಯಕ, ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಹಾಗೂ ಗೋಡೆ ಖ್ಯಾತಿಯ ರಾಹುಲ್‍ದ್ರಾವಿಡ್‍ರ ತ್ರಿಶತಕದ ಜೊತೆಯಾಟ. ಈ ಜೋಡಿಯು ಅಂತಹದ್ದೊಂದು ಅಪರೂಪದ ದಾಖಲೆಗೆ ಪಾತ್ರರಾಗಿದ್ದು 21 ವರ್ಷಗಳ ಹಿಂದೆ. ಅದು ವಿಶ್ವಕಪ್‍ನ ವೇಳೆಯೇ ಇಂತದ್ದೊಂದು ಅಪರೂಪದ ದಾಖಲೆ ನಿರ್ಮಾಣವಾಗಿರುವುದು ಮತ್ತೊಂದು ವಿಶೇಷ.

ಭಾರತೀಯ ಕ್ರಿಕೆಟ್ ರಂಗಕ್ಕೆ ಒಂದೇ ಬಾರಿಗೆ ಪಾದಾರ್ಪಣೆ ಮಾಡಿದ ಬಂಗಾಳದ ಹುಲಿ ಸೌರವ್‍ಗಂಗೂಲಿ, ಕರ್ನಾಟಕದ ಕಲಿ ರಾಹುಲ್ ದ್ರಾವಿಡ್ ನಂತರ ಬಹಳಷ್ಟು ವರ್ಷಗಳ ಕಾಲ ಟೀಂ ಇಂಡಿಯಾದ ಖಾಯಂ ಆಟಗಾರರಾಗಿಯೂ, ಉಪನಾಯಕ, ನಾಯಕರಾಗಿಯೂ ಹಲವು ಮಹತ್ತರ ಪಂದ್ಯಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದ ಈ ಜೋಡಿಯು 1999 ಮೇ 26 ರಂದು ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್‍ನಲ್ಲಿ 318 ರನ್‍ಗಳ ಜೊತೆಯಾಟವನ್ನು ನೀಡಿ ನಿರ್ಮಿಸಿದ ದಾಖಲೆಗೆ ಈಗ 21ರ ಸಂಭ್ರಮ.

ಇಂಗ್ಲೆಂಡ್‍ನಲ್ಲಿ ನಡೆದ ಆ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 6 ರನ್‍ಗಳಾಗುವಷ್ಟರಲ್ಲೇ ಆರಂಭಿಕ ಆಟಗಾರ ಶಡ್‍ಗೋಪನ್ ರಮೇಶ್(5)ರ ವಿಕೆಟ್ ಕಳೆದುಕೊಂಡಿತು.

ಆಗ ಮಾಸ್ಟರ್ ಬ್ಲಸ್ಟರ್ ಸಚಿನ್‍ತೆಂಡೂಲ್ಕರ್ ಬದಲು ಕ್ರೀಸ್‍ಗೆ ಇಳಿದ ಗೋಡೆ ದ್ರಾವಿಡ್, ನಾಯಕ ಸೌರವ್‍ಗಂಗೂಲಿಯೊಂದಿಗೆ ಚಮತ್ಕಾರವನ್ನೇ ಸೃಷ್ಟಿಸಿದರು. ಲಂಕಾದ ಬೌಲರ್‍ಗಳನ್ನು ಚೆಂಡಾಡಿದ ಈ ಜೋಡಿಯು ಬೌಂಡರಿ ಹಾಗೂ ಸಿಕ್ಸರ್‍ಗಳ ಸುರಿಮಳೆಯನ್ನು ಸುರಿಸುವ ಮೂಲಕ ಭಾರತೀಯ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಅದುವರೆಗೂ ಭಾರತದ ಯಾವುದೇ ಆಟಗಾರರು 300 ರನ್‍ಗಳ ಜೊತೆಯಾಟವನ್ನು ನೀಡಿರಲಿಲ್ಲ ಆ ನಿಟ್ಟಿನಲ್ಲೂ ಈ ಪಂದ್ಯ ವಿಶೇಷವಾಗಿತ್ತು. ಅಂದಿನ ಪಂದ್ಯದಲ್ಲಿ ರನ್‍ಗಳ ಸುರಿಮಳೆ ಸುರಿಸಿದ ಗಂಗೂಲಿ (183 ರನ್,158 ಎಸೆತ, 17 ಬೌಂಡರಿ, 5 ಸಿಕ್ಸರ್) ಹಾಗೂ ತಾಳ್ಮೆಯುತ ಆಟಕ್ಕೆ ಖ್ಯಾತರಾಗಿದ್ದ ದ್ರಾವಿಡ್(145 ರನ್, 129 ಎಸೆತ,17 ಬೌಂಡರಿ,1 ಸಿಕ್ಸರ್) ಎರಡನೇ ವಿಕೆಟ್‍ಗೆ 318 ರನ್‍ಗಳ ಜೊತೆಯಾಟವನ್ನು ನೀಡಿದಲ್ಲದೆ ತಂಡದ ಮೊತ್ತವನ್ನು 373 ರನ್‍ಗಳಿಗೆ ಹಿಗ್ಗಿಸಿದ್ದರು.

ನಂತರ ಬ್ಯಾಟಿಂಗ್ ಮಾಡಿದ ಲಂಕಾ ರಾಬಿನ್‍ಸಿಂಗ್(5 ವಿಕೆಟ್)ರ ಬೌಲಿಂಗ್ ಜಾದೂಗೆ ಶರಣಾಗಿ 202 ರನ್ ಗಳಿಸಲಷ್ಟೇ ಶಕ್ತವಾಗಿ 174 ರನ್‍ಗಳಿಂದ ಭಾರತಕ್ಕೆ ಶರಣಾದರೆ, ಗಂಗೂಲಿ ಪಂದ್ಯಶ್ರೇಷ್ಠರಾಗಿದ್ದರು. ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎಂಬಂತೆ ದಾದಾ- ದ್ರಾವಿಡ್ ನಿರ್ಮಿಸಿದ್ದ ತ್ರಿಶತಕ ಜೊತೆಯಾಟದ ದಾಖಲೆಯನ್ನು ನವೆಂಬರ್ 8, 1999ರಲ್ಲಿ ಹೈದರಾಬಾದ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ (186ರನ್, 20 ಬೌಂಡರಿ, 3 ಸಿಕ್ಸರ್) ಹಾಗೂ ರಾಹುಲ್‍ದ್ರಾವಿಡ್(153ರನ್,15 ಬೌಂಡರಿ, 2 ಸಿಕ್ಸರ್) ಬಾರಿಸಿ 331 ರನ್‍ಗಳ ಜೊತೆಯಾಟ ನೀಡಿದರು. ಆ ದಾಖಲೆಯನ್ನು ಅಳಿಸಿ ಹಾಕಿದರೂ ಈ ದಾಖಲೆಯನ್ನು ಮುರಿಯಲು 14 ವರ್ಷಗಳು ಬೇಕಾದವು.

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‍ಗಳ ಜೊತೆಯಾಟ:
ಕ್ರಿಸ್‍ಗೇಲ್-ಮಾರೂಲ್‍ಸ್ಯಾಮುಯಲ್ಸ್- 372 ರನ್
ಗ್ರೇಗ್‍ಚಾಪೆಲ್- ಹೋಪ್- 365ರನ್
ಸಚಿನ್‍ತೆಂಡೂಲ್ಕರ್- ರಾಹುಲ್‍ದ್ರಾವಿಡ್-331ರನ್
ಸೌರವ್‍ಗಂಗೂಲಿ- ರಾಹುಲ್‍ದ್ರಾವಿಡ್-318ರನ್
ಇಂಜಾಮಮ್ ಉಲ್‍ಹಕ್-ಫಕರ್ ಜಮಾನ್-304 ರನ್

ವಿಶ್ವಕಪ್‍ನಲ್ಲಿ ಅತಿ ಹೆಚ್ಚು ರನ್ ಜೊತೆಯಾಟ:
ಕ್ರಿಸ್‍ಗೇಲ್-ಮಾರೂಲ್‍ಸ್ಯಾಮುಯಲ್ಸ್- 372 ರನ್
ಸೌರವ್‍ಗಂಗೂಲಿ- ರಾಹುಲ್‍ದ್ರಾವಿಡ್-318ರನ್
ಉಪಲ್ ತರಂಗ- ತಿಲಕರತ್ನೆ ದಿಲ್ಷಾನ್-282 ರನ್
ಡೇವಿಡ್‍ವಾರ್ನರ್-ಸ್ಟೀವ್‍ಸ್ಮಿತ್-260 ರನ್
ಡೇವಿಡ್‍ಮಿಲ್ಲರ್-ಜೆಪಿ ಡುಮಿನಿ-256* ರನ್

Facebook Comments