ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗಮನಸೆಳೆದ ಅನುಭವ ಮಂಟಪ ಸ್ತಬ್ಧ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.26-ಪರಿಸರ, ಪ್ರಾಣಿ ಸಂರಕ್ಷಣೆ, ವಾಸ್ತುಶಿಲ್ಪ ವೈಭವ, ಮಹಾಪುರುಷರ ದರ್ಶನ… ಇವು ದೆಹಲಿಯಲ್ಲಿ ನಡೆದ 71ನೇ ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ ಗಮನ ಸೆಳೆದ ಆಕರ್ಷಕ ಸ್ತಬ್ಧ ಚಿತ್ರಗಳು.  12ನೇ ಶತಮಾನದ ಕ್ರಾಂತಿ ಯೋಗಿ ಮತ್ತು ಸಮಾಜ ಸುಧಾರಕ ಬಸವಣ್ಣನವರ ಅನುಭವ ಮಂಟಪ ಕರ್ನಾಟಕವನ್ನು ಪ್ರತಿನಿಧಿಸಿ ಕನ್ನಡಿಗರಿಗೆ ಹೆಮ್ಮೆ ತಂದಿದೆ.

ಗೋವಾ ಸರ್ಕಾರದ ಕಪ್ಪೆ ಉಳಿಸಿ ಸಂದೇಶದ ಸ್ತಬ್ಧ ಚಿತ್ರ ಪ್ರಾಣಿ ಸಂಕುಲದ ರಕ್ಷಣೆಯ ಮಹತ್ವವನ್ನು ಸಾರಿದರೆ ರಾಜಸ್ಥಾನ ಮತ್ತು ಗುಜರಾತ್‍ನ ಸ್ತಬ್ಧ ಚಿತ್ರಗಳು ಯುನೆಸ್ಕೋ ವಿಶ್ವ ಪರಂಪರೆಯಿಂದ ಮಾನ್ಯತೆ ಪಡೆದ ಸ್ಮಾರಕಗಳ ಮಹತ್ವವನ್ನು ಸಾರಿತು.  ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಬ್ಯಾಕ್ ಟು ವಿಲೇಜ್ ಎಂಬ ಸ್ತಬ್ಧ ಚಿತ್ರ ಕಣಿವೆ ಪ್ರಾಂತ್ಯದ ಶ್ರೀಮಂತ ಸಂಸ್ಕøತಿಯನ್ನು ಬಿಂಬಿಸಿತು.

ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್‍ದೇವ್ ಅವರ 550ನೇ ಜನ್ಮ ಜಯಂತಿ ಪ್ರಯುಕ್ತ ಪಂಜಾಬ್ ವಿನ್ಯಾಸ ಗೊಳಿಸಿದ ಟ್ಯಾಬ್ಲು ಕೂಡ ವಿಶೇಷ ಆಕರ್ಷಣೆಯಾಗಿತ್ತು. ತಮಿಳುನಾಡು, ತೆಲಂಗಾಣ, ಹಿಮಾಚಲಪ್ರದೇಶ, ಛತ್ತೀಸ್‍ಗಡ, ಮಧ್ಯಪ್ರದೇಶ, ಒಡಿಸ್ಸಾ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಒಟ್ಟು 16 ಸ್ತಬ್ಧ ಚಿತ್ರಗಳು ಈ ಬಾರಿ ಜನಾಕರ್ಷಣೆಗೆ ಪಾತ್ರವಾದವು.

Facebook Comments