ದಾಖಲೆ ಮತಗಳೊಂದಿಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Idnai--01

ವಿಶ್ವಸಂಸ್ಥೆ, ಅ.13 (ಪಿಟಿಐ)- ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅತ್ಯುನ್ನತ ಸಂಸ್ಥೆಗೆ ಭಾರತ ಮೂರು ವರ್ಷಗಳ ಕಾಲಾವಧಿಗೆ ದಾಖಲೆ ಮತಗಳೊಂದಿಗೆ ಆಯ್ಕೆಯಾಗಿದೆ.188 ಮತಗಳಿಂದ ಭಾರತ ಆಯ್ಕೆಯಾಗಿದೆ. 18 ದೇಶಗಳಿಗಿಂತ ಅತ್ಯಧಿಕ ಮತ ಪಡೆದಿರುವ ಭಾರತ ಇಷ್ಟು ಸಂಖ್ಯೆಯ ಬಹುಮತದೊಂದಿಗೆ ಆಯ್ಕೆಯಾಗಿರುವುದು ಇದೇ ಮೊದಲು.

ಸಂಯುಕ್ತ ರಾಷ್ಟ್ರಗಳ ಏಷ್ಯಾ-ಪೆಸಿಫಿಕ್ ವಿಭಾಗದ ಮಾನವ ಹಕ್ಕುಗಳ ಮಂಡಳಿಗೆ ಭಾರತವು ಸದಸ್ಯ ದೇಶವಾಗಿ ಆಯ್ಕೆಯಾಗಿದೆ ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ 193 ಸದಸ್ಯ ದೇಶಗಳು ನಿನ್ನೆ ಮಾನವ ಹಕ್ಕುಗಳ ಮಂಡಳಿಗೆ ನೂತನ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಿದ್ದವು. ರಹಸ್ಯ ಮತದಾನದ ಮೂಲಕ 118 ರಾಷ್ಟ್ರಗಳ ಬಹುಮತದೊಂದಿಗೆ ಭಾರತ ಆಯ್ಕೆಯಾಗಿದೆ. ಮಂಡಳಿಯ ಸದಸ್ಯತ್ವ ಪಡೆಯಲು ಕನಿಷ್ಠ 97 ಮತಗಳ ಅಗತ್ಯವಿತ್ತು.

ಮಂಡಳಿಯ ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಸ್ಥಾನ ಪಡೆಯಲು ಭಾರತ ಉತ್ಸುಕವಾಗಿದ್ದು, ಭಾರತದೊಂದಿಗೆ ಇದೇ ವಿಭಾಗದಲ್ಲಿ ಬಹರೈನ್, ಬಾಂಗ್ಲಾದೇಶ್, ಫಿಜಿ ಮತ್ತು ಫಿಲಿಪ್ಪೈನ್ಸ್ ದೇಶಗಳೂ ಕೂಡ ಸ್ಪರ್ಧೆಯಲ್ಲಿದ್ದವು. ಈ ಪೈಪೆÇೀಟಿ ನಡುವೆ ಭಾರತ ಭಾರೀ ಮತಗಳೊಂದಿಗೆ ಆಯ್ಕೆಯಾಗಿದೆ.

Facebook Comments