ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತದ ಅವಿರೋಧ ಆಯ್ಕೆ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಜೂ.1-ವಿಶ್ವಸಂಸ್ಥೆಯತಾತ್ಕಾಲಿಕ ಸದಸ್ಯತ್ವ ಸ್ಥಾನಕ್ಕೆ ಭಾರತದ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಯುನೈಟೆಡ್ ನೇಷನ್ಸ್‍ನ ಸೆಕ್ಯೂರಿಟಿಕೌನ್ಸಿಲ್ (ಯುಎನ್‍ಎಸ್‍ಸಿ)ನ ಐದು ತಾತ್ಕಾಲಿಕ ಸದಸ್ಯತ್ವಕ್ಕೆ ಜೂನ್ 17ರಂದು ಚುನಾವಣೆ ನಡೆಸಲು ಸಂಯುಕ್ತ ರಾಷ್ಟ್ರಗಳ ವೇದಿಕೆ ನಿರ್ಧರಿಸಿದೆ.

ಏಷ್ಯಾ ಪೆಸಿಫಿಕ್ ವಲಯದಿಂದ ಭಾರತ ಏಕಮಾತ್ರ ಸ್ಪರ್ಧಿ. ಹೀಗಾಗಿ ಚುನಾವಣೆ ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದೆ. ಡೆಡ್ಲಿ ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಚುನಾವಣೆಗೆ ವಿಶ್ವಸಂಸ್ಥೆ ವಿಶೇಷ ವ್ಯವಸ್ಥೆಕೈಗೊಂಡಿದೆ.

ಈ ಸಂಬಂಧ 193 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಚುನಾವಣೆ ಪ್ರಕ್ರಿಯೆಕುರಿತು ವಿಶೇಷ ನಿರ್ಣಯ ಅಂಗೀಕರಿಸಲಾಗಿದೆ. ಏಷ್ಯಾ ಪೆಸಿಫಿಕ್ ವಲಯವನ್ನು ಪ್ರತಿನಿಧಿಸಲು ಭಾರತದ ನಾಮನಿರ್ದೇಶನಕ್ಕೆ 2021-22ನೇ ಸಾಲಿಗೆ ಕಳೆದ ವರ್ಷ ಜೂನ್‍ನಲ್ಲಿ ಚೀನಾ, ಪಾಕಿಸ್ತಾನ ಸೇರಿದಂತೆ 55 ದೇಶಗಳು ಬೆಂಬಲ ನೀಡಿದ್ದವು.

Facebook Comments