ಪಾಕ್ ಸೇರಿ ವಿಶ್ವದಾದ್ಯಂತ ಭಾರತದ ಎಲೆಕ್ಷನ್ ರಿಸಲ್ಟ್ ಲೈವ್ ವೀಕ್ಷಣೆ, ಮೋದಿಗೆ ಶುಭಾಶಯಗಳ ಸುರಿಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 23- ವಿಶ್ವದ ಅತ್ಯಂತ ಬೃಹತ್ ಪ್ರಜಾ ಪ್ರಭುತ್ವ ರಾಷ್ಟ್ರವಾದ ಭಾರತದ ಲೋಕಸಭಾ ಚುನಾವಣೆ ಫಲಿತಾಂಶ ಕೇವಲ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದ ಕುತೂಹಲ ಕೆರಳಿಸಿತು.

ಪಾಕಿಸ್ತಾನ, ಚೀನಾ ಸೇರಿದಂತೆ ಏಷ್ಯಾದ ಪ್ರಮುಖ ದೇಶಗಳು ಚುನಾವಣಾ ಫಲಿತಾಂಶದ ನೇರ ಪ್ರಸಾರವನ್ನು ವೀಕ್ಷಿಸಿದವು, ಅಲ್ಲದೆ ಪಾಕ್ ಮತ್ತು ಚೀನಾದ ಮುಖಂಡರು ಮತ್ತು ಸಾರ್ವಜನಿಕರು ಫಲಿತಾಂಶದ ಅಪ್‍ಡೆಟ್ ವಿವರಣೆಗೆ ಲೈವ್ ಮತ್ತು ಆನ್‍ಲೈನ್‍ಗೆ ಮೊರೆ ಹೋದರು.

ಅದರಲ್ಲೂ ಪಾಕಿಸ್ತಾನ ಭಾರತದ ಚುನಾವಣೆಯ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಎಂದುರುನೋಡುತ್ತಿತ್ತು. ಈಗ ಈ ಎಲ್ಲ ಕುತೂಹಲಗಳಿಗೆ ತೆರೆಬಿದ್ದಿದೆ. ಮೋದಿ ಮತ್ತೆ ಪ್ರಧಾನಿ ಪಟ್ಟ ಅಲಂಕರಿಸುತ್ತಿದ್ದಾರೆ.

ಮೋದಿಗೆ ಶುಭಾಶಯಗಳ ಸುರಿಮಳೆ: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಸೇರಿದಂತೆ ಫ್ರಾನ್ಸ್, ಜರ್ಮನಿ, ಚೀನಾ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಅನೇಕ ರಾಷ್ಟ್ರಗಳ ಪ್ರಧಾನಿಗಳು ಹಾಗೂ ರಾಷ್ಟ್ರಾಧ್ಯಕ್ಷರು ಪ್ರಧಾನಿ ನರೇಂದ್ರಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin