BIG NEWS : ಲಾಕ್‍ಡೌನ್ ‘ಪರಿಶ್ರಮ’ : ಭಾರತದಲ್ಲಿ ವರ್ಷಾಂತ್ಯದಕ್ಕೆ 2 ಕೋಟಿ ಶಿಶುಗಳ ಜನನ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಮೇ 7- ಡೆಡ್ಲಿ ಕೊರೊನಾ ವೈರಸ್‍ನ್ನು ಜಾಗತಿಕ ಪಿಡುಗು ಎಂದು ವಿಶ್ವಸಂಸ್ಥೆ ಘೋಷಿಸಿದ ನಂತರ ಮಾರ್ಚ್‍ನಿಂದ ಡಿಸೆಂಬರ್‍ನೊಳಗೆ ಭಾರತದಲ್ಲಿ 20.1 ದಶಲಕ್ಷ ಶಿಶುಗಳು ಜನಿಸುವ ನಿರೀಕ್ಷೆ ಇದೆ. ಇದು ಅತ್ಯಧಿಕ ಜನನ ಪ್ರಮಾಣವಾಗಲಿದೆ ಎಂದು ವಿಶ್ವ ಸಂಸ್ಥೆ ಮಕ್ಕಳ ನಿಧಿ-ಯೂನಿಸೆಫ್ ಅಂದಾಜು ಮಾಡಿದೆ.

ವಿಶ್ವಸಂಸ್ಥೆ ಮಾರ್ಚ್‍ನಲ್ಲಿ ಕೋವಿಡ್-19 ವೈರಸ್ ಹಾವಳಿಯನ್ನು ಜಾಗತಿಕ ಹೆಮ್ಮಾರಿ ಎಂದು ಘೋಷಿಸಿತ್ತು. ಮಾರ್ಚ್‍ನಿಂದ ಈ ವರ್ಷಾಂತ್ಯದ ಒಳಗೆ ಒಂಭತ್ತು ತಿಂಗಳ ಅವಧಿಯಲ್ಲಿ 20 ದಶಲಕ್ಷಕ್ಕೂ (ಎರಡು ಕೋಟಿ) ಅಧಿಕ ಮಕ್ಕಳು ಭಾರತದಲ್ಲಿ ಜನಿಸಲಿವೆ. ಎಂದು ಸಂಯುಕ್ತ ರಾಷ್ಟ್ರಗಳ ಮಕ್ಕಳ ಕುರಿತ ಸಂಸ್ಥೆ ಹೇಳಿದೆ.

ಮೇ 10ರಂದು ಮಾತೆಯರ ದಿನಾಚರಣೆಗೆ ಮುನ್ನ ಯುನಿಸೆಫ್ ಈ ಕುರಿತ ವರದಿಯೊಂದನ್ನು ಬಿಡುಗಡೆ ಮಾಡಿದೆ. ಡೆಡ್ಲಿ ಕೊರನಾ ಪಿಡುಗಿನ ಕರಾಳ ಛಾಯೆ ಮಧ್ಯೆ ವಿಶ್ವದ್ಯಾಂತ 116 ದಶಲಕ್ಷ ಶಿಶುಗಳು ಜನಿಸಲಿವೆ.

ಇದರಲ್ಲಿ ಭಾರತದಲ್ಲೇ ಅತಿ ಹೆಚ್ಚು ಮಕ್ಕಳು (20.1) ಹುಟ್ಟಲಿವೆ. ನಂತರದ ಸ್ಥಾನದಲ್ಲಿ ಚೀನಾ (13.5 ದಶಲಕ್ಷ), ನೈಜಿರಿಯಾ (6.4 ದಶಲಕ್ಷ), ಪಾಕಿಸ್ತಾನ (ಐದು ದಶಲಕ್ಷ) ಮತ್ತು ಇಂಡೋನೆಷ್ಯಾ (ನಾಲ್ಕು ದಶಲಕ್ಷ) ದೇಶಗಳಿವೆ.

ಈ ಅವಧಿಯಲ್ಲಿ ಜನಿಸಲಿರುವ ಅತಿ ಹೆಚ್ಚು ಮಕ್ಕಳು ಜನಿಸುವ ಮೊದಲ ಐದು ರಾಷ್ಟ್ರಗಳಲ್ಲಿ ನಾಲ್ಕು ಸ್ಥಾನಗಳು ಏಷ್ಯಾ ಖಂಡದ್ದಾಗಿದೆ. (ಭಾರತ, ಚೀನಾ, ಪಾಕಿಸ್ತಾನ ಮತ್ತು ಇಂಡೋನೆಷ್ಯಾ) ಹಾಗೂ ಇಂದು ಸ್ಥಾನ ಆಫ್ರಿಕಾ ಖಂಡ ಪಡೆದಿದೆ.

ಈ ಸಂಕಷ್ಟ ಸಮಯದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರು/ನವಜಾತ ಶಿಶುಗಳು ಆರೋಗ್ಯ ಸೌಲಭ್ಯಗಳು ಮತ್ತು ಸೇವೆಗಳ ವ್ಯವಸ್ಥೆಯನ್ನು ಎದುರಿಸುವಂತಾಗುತ್ತದೆ ಯೂನಿಸೆಫ್ ಎಚ್ಚರಿಕೆ ನೀಡಿದೆ.

Facebook Comments

Sri Raghav

Admin