ಭಾರತಕ್ಕೆ ಮಹಾಮಾರಿ ಕಿಲ್ಲರ್ ಕೊರೊನಾ ಕಾಲಿಟ್ಟು ಇಂದಿಗೆ ಒಂದು ವರ್ಷ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.30- ಕೊರೊನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷವಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ವಿಶ್ವದ 2ನೇ ಸ್ಥಾನದಲ್ಲಿ ಇದ್ದು , ಮೃತರ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿ ಇದೆ. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿ ಸ್ವದೇಶಕ್ಕೆ ಕಳೆದ ವರ್ಷ ಮರಳಿದ್ದು, ಜನವರಿ 30 ರಂದು ಆತನಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು.

ಆ ವೇಳೆಗಾಗಲೇ ಚೀನಾ, ಅಮೆರಿಕ, ಇಟಲಿ, ಇಂಗ್ಲೆಂಡ್ ದೇಶಗಳನ್ನು ಕಂಗೆಡಿಸಿದ್ದ ಕೊರೊನಾ ಕೇರಳದ ಮೂಲಕ ಭಾರತಕ್ಕೆ ಕಾಲಿಟ್ಟಿತ್ತು. ಇಂದಿಗೆ ಬರೋಬ್ಬರಿ ಒಂದು ವರ್ಷದ ಹಿಂದೆ ಭಾರತವು ಕೂಡ ಕೊರೊನಾದ ಬಲೆಗೆ ಸಿಲುಕಿತು. ಅನಂತರ ದೇಶ ಹಿಂದೆಂದೂ ಕಾಣದಷ್ಟು ಸಂಕಷ್ಟಕ್ಕೆ ಒಳಗಾಗಯಿತು. ಲಾಕ್‍ಡೌನ್, ಸರಣಿ ಸಾವು, ಸೋಂಕಿತರ ಪರದಾಟದಿಂದ ಭಾರತ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತು. ಈವರೆಗೂ ಕೊರೊನಾದಿದ ಚೇತರಿಕೆ ಕಾಣಲು ಸಾಧ್ಯವಾಗಿಲ್ಲ.

ಆದರೆ, ಆಶಾದಾಯಕ ಬೆಳವಣಿಗೆ ಎಂದರೆ ಕೊರೊನಾ ಲಸಿಕೆ ಕಂಡುಹಿಡಿಯುವಲ್ಲಿ ಭಾರತ ವಿಶ್ವದ ಶ್ರೀಮಂತ ರಾಷ್ಟ್ರಗಳಿಗಿಂತಲೂ ಮುಂದಿದೆ. ದೇಶೀಯವಾಗಿ ತಯಾರಾಗುತ್ತಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಆಸ್ಟ್ರೇಲಿಯಾದ ಪೈಜರ್‍ಗಿಂತಲೂ ಹೆಚ್ಚು ವಿಶ್ವಾಸಾರ್ಹವಾಗಿದ್ದು, ಜಾಗತಿಕವಾಗಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿದೆ.

ಭಾರತದಲ್ಲಿ ಈವರೆಗೂ 1,07,33,131 ಮಂದಿಗೆ ಸೋಂಕು ತಗುಲಿದೆ. 1,54,147 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಮತ್ತು ಬ್ರೆಜಿಲ್ ನಂತರ ಭಾರತ ಮೂರನೇ ಸ್ಥಾನದಲ್ಲಿದೆ. 1,04,09,160ಮಂದಿ ಗುಣಮುಖರಾಗಿದ್ದಾರೆ. ನಿನ್ನೆ 7,56,229 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಈವರೆಗೂ ಒಟ್ಟು 19,58,37,408 ಮಂದಿಯ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ವಲ್ಡರ್ ಮೀಟರ್ ಅಂಕಿಅಂಶಗಳ ಪ್ರಕಾರ, ಅಮೆರಿಕ ಗರಿಷ್ಠ 4,47,459 ಸಾವುಗಳನ್ನು ಮತ್ತು ಬ್ರೆಜಿಲ್ ನಂತರ 2,22,775 ಸಾವುಗಳನ್ನು ಹೊಂದಿದೆ. ಮೆಕ್ಸಿಕೊ ಗುರುವಾರ 1,506 ಸಾವುಗಳನ್ನು ಸೇರಿಸಿದ್ದು, ಈ ಸಂಖ್ಯೆ 1,56,000 ಕ್ಕೆ ತಲಪಿದ್ದು, ಭಾರತದ 1,54,010 ಸಾವುಗಳು ಆಗಿವೆ. 2020 ರ ಸೆಪ್ಟೆಂಬರ್‍ನಲ್ಲಿ, ಜಾಗತಿಕವಾಗಿ 1 ಮಿಲಿಯನ್‍ಗಿಂತಲೂ ಹೆಚ್ಚು ಮತ್ತು ಸಾವುಗಳು ಸುಮಾರು 16,400 ವರದಿ ಯಾಗುತಿದ್ದವು.

ಈ ದಿನಗಳಲ್ಲಿ ಭಾರತವು ಅತಿ ಹೆಚ್ಚು ಪ್ರಕರಣಗಳು 75,000 ದಿಂದ 90,000 ಕ್ಕಿಂತ ಹೆಚ್ಚು ಪತ್ತೆಯಾಗಿದ್ದವು , ಆದರೆ ಸೆಪ್ಟೆಂಬರ್ 8 ದೇಶದಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳು ದೈನಂದಿನ ಚೇತರಿಕೆಗಿಂತ ಕಡಿಮೆ ಸೋಂಕಿತರು ಪತ್ತೆಯಾಗುತ್ತಿರುವುದು ಸಮಾಧಾನಕಾರವಾಗಿದೆ.

Facebook Comments