ಪಾಕ್ ಪರಮಾಪ್ತ ಚೀನಾಗೆ ವಿಶ್ವಸಂಸ್ಥೆಯಲ್ಲಿ ಪಾಠ ಕಲಿಸಲು ಭಾರತ-ಫ್ರಾನ್ಸ್ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.25- ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರ ಪಾಕಿಸ್ತಾನದ ಭಯೋತ್ಪಾದಕರನ್ನು ವಿಶ್ವಸಂಸ್ಥೆಯಲ್ಲಿ ಸಮರ್ಥಿಸಿಕೊಳ್ಳುವ ಚೀನಾಗೆ ಬುದ್ಧಿ ಕಲಿಸಲು ಭಾರತ ಮತ್ತು ಫ್ರಾನ್ಸ್ ಸಜ್ಜಾಗಿವೆ.

ಜೈಷ್-ಇ-ಮೊಹಮ್ಮದ್ ಸಂಘಟನೆಯ ಕುಖ್ಯಾತ ಭಯೋತ್ಪಾದಕ ಮಸೂದ್ ಅಜರ್‍ಗೆ ವಿಶ್ವಸಂಸ್ಥೆಯಿಂದ ನಿಷೇಧ ವಿಧಿಸುವ ಭಾರತದ ಪ್ರಯತ್ನಕ್ಕೆ ಚೀನಾ ನಿರಂತರವಾಗಿ ಅಡ್ಡಗಾಲು ಹಾಕುತ್ತಲೇ ಇದೆ. ಪುಲ್ವಾಮ ದಾಳಿಯ ನಂತರ ಚೀನಾ ತಂತ್ರಕ್ಕೆ ಭಾರತ ಹೆಣೆಯುತ್ತಿರುವ ಪ್ರತಿ ತಂತ್ರವೂ ಪರಿಣಾಮಕಾರಿಯಾಗಿಯೇ ಇದೆ.

ಪ್ರತಿ ಬಾರಿಯೂ ಮಸೂದ್ ಅಜರ್ ನಿಷೇಧಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಈಗ ಭಾರತಕ್ಕೆ ವಿಶ್ವಸಂಸ್ಥೆಯ ಪ್ರಭಾವಿ ರಾಷ್ಟ್ರ ಫ್ರಾನ್ಸ್ ಬೆಂಬಲ ನೀಡಿದೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾಗಿರುವ ಜೈಷ್-ಇ-ಮೊಹಮ್ಮದ್ ಗೆ ವಿಶ್ವಸಂಸ್ಥೆಯ ನಿಷೇಧ ವಿಸುವುದಕ್ಕೆ ರಾಜ ತಾಂತ್ರಿಕವಾಗಿ ಮತ್ತಷ್ಟು ಪರಿಣಾಮಕಾರಿಯಾದ ತಂತ್ರ ರೂಪಿಸುತ್ತಿರುವ ಭಾರತ-ಫ್ರಾನ್ಸ್ ಮಸೂದ್ ಅಜರ್ ಜತೆಗೆ ಆತನ ಸಹೋದರ ಅಬ್ದುಲ್ ರೌಫ್ ಅಸ್ಘರ್‍ಗೂ ಸಹ ವಿಶ್ವಸಂಸ್ಥೆ ನಿರ್ಬಂಧನೆ ಕುಣಿಕೆಯನ್ನು ಸಿದ್ಧ ಮಾಡಿವೆ.

ಈ ವರೆಗೂ ಮಸೂದ್ ಅಜರ್ ನಿರ್ಬಂಧದ ವಿಷಯವಷ್ಟೇ ಪ್ರಧಾನ ಅಂಶವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮತ್ತಷ್ಟು ಉಗ್ರರನ್ನೂ ಸೇರಿಸಿ ವಿಶ್ವಸಂಸ್ಥೆಯ 1267 ನಿಯಮದ ಪ್ರಕಾರ ನಿರ್ಬಂಧ ವಿಧಿಸಲು ಆಗ್ರಹಿಸಿದರೆ ಆಗ ಚೀನಾಗೆ ಈ ನಿರ್ಣಯವನ್ನು ಒಪ್ಪಿಕೊಳ್ಳುವ ಅನಿವಾರ್ಯ ಒತ್ತಡ ಸೃಷ್ಟಿಯಾಗಲಿದೆ.

ಒಂದು ವೇಳೆ ಈ ಪ್ರಸ್ತಾವನೆ ಜಾರಿಯಾದಲ್ಲಿ, ಈ ವರೆಗೂ ಮಸೂದ್ ಅಸೂರ್‍ನ ನಿರ್ಬಂಧಕ್ಕೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣವೊಡ್ಡಿ ಅಡ್ಡಗಾಲು ಹಾಕುತ್ತಿದ್ದ ಚೀನಾಗೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇತರ ಉಗ್ರರ ವಿರುದ್ಧ ನಿರ್ಬಂಧ ಹೇರುವುದಕ್ಕೆ ಅಡ್ಡಗಾಲು ಹಾಕುವುದು ಕಷ್ಟ ಸಾಧ್ಯವಾಗಲಿದೆ. ಚೀನಾ ವಿಶ್ವಸಂಸ್ಥೆಯಲ್ಲಿ ಭಾರತ-ಫ್ರಾನ್ಸ್ ಪ್ರಸ್ತಾವನೆಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಎದುರಿಸಲಿದ್ದು ಅಡ ಕತ್ತರಿಗೆ ಸಿಲುಕಿಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅರ್ಜ ಗೆ ನಿರ್ಬಂಧ ವಿಸುವುದಕ್ಕೆ ಸಂಬಂಸಿದಂತೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಚೀನಾವನ್ನು ಹೊರತುಪಡಿಸಿ ಅಮೆರಿಕ, ಫ್ರಾನ್ಸ್ , ಜರ್ಮನಿ, ಐರೋಪ್ಯ ರಾಷ್ಟ್ರಗಳ ಬೆಂಬಲ ಲಭಿಸಿದೆ.

Facebook Comments