ಮಿಲಿಟರಿ ಡೈರೆಕ್ಟ್ ವರದಿ ಪ್ರಕಾರ ಪ್ರಪಂಚದ ಬಲಿಷ್ಠ ಸೇನೆ ಯಾವುದು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.21- ಬಲಿಷ್ಟ ಸೇನೆಯನ್ನು ಹೊಂದಿರುವ ದೇಶಗಳ ಪೈಕಿ ಚೀನಾ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದರೆ ಭಾರತ ನಾಲ್ಕನೆ ಸ್ಥಾನ ಪಡೆದಿದೆ. ಮಿಲಿಟರಿ ಡೈರೆಕ್ಟ್ ಬಿಡುಗಡೆ ಮಾಡಿರುವ ಅಧ್ಯಯನ ವರದಿಯ ಪ್ರಕಾರ 74 ಅಂಕಗಳನ್ನು ಪಡೆದಿರುವ ಅಮೆರಿಕಾ ಎರಡನೆ ಸ್ಥಾನದಲ್ಲಿದೆ. ವಿಶ್ವದಲ್ಲೆ ಅಮೆರಿಕಾ ನೇನೆ ಸಶಕ್ತಿಕರಣಕ್ಕೆ ಹೆಚ್ಚು ಬಂಡವಾಳ ಹೂಡುತ್ತಿರುವುದರ ಹೊರತಾಗಿಯೂ ಅಮೆರಿಕಾ ಮೊದಲ ಸ್ಥಾನಕ್ಕೆ ಬರಲಾಗದಿರುವುದು ನಾನಾ ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ರಷ್ಯಾ 69, ಭಾರತ 61, ಪ್ರಾನ್ಸ್ 58 ಅಂಕಗಳನ್ನು ಪಡೆದು ಟಾಪ್ 10 ಸ್ಥಾನದಲ್ಲಿವೆ. ಇಂಗ್ಲೆಂಡ್ 43 ಅಂಕಗಳನ್ನು ಪಡೆದಿದ್ದು, ಒಬ್ಬತ್ತನೆ ಸ್ಥಾನದಲ್ಲಿ ಉಳಿದುಕೊಂಡಿದೆ. ಅದ್ಯಯನ ನಡೆಸಿದ ಸಂಸ್ಥೆ ಅಲ್ಟಿಮೆಟ್ ಮಿಲಿಟರಿ ಸ್ಟ್ರೆಂತ್ ಇಂಡೆಕ್ಸ್‍ನಲ್ಲಿ ಸೇನೆಗೆ ಒದಗಿಸಲಾದ ಬಜೆಟ್, ಸಕ್ರಿಯ ಮತ್ತು ನಿಷ್ಕ್ರೀಯ ಸೈನಿಕರು, ವಾಯು, ಭೂ ಹಾಗೂ ನೌಕಾ ಸೇನೆಯ ಸಾಮಥ್ರ್ಯ, ಅಣುಶಕ್ತಿಯ ಸಂಪನ್ಮೂಲ, ಸೇನಾ ಸಿಬ್ಬಂದಿಗಳ ಸರಾಸರಿ ವೇತನ, ನೇನಾ ಸಲಕರಣೆಗಳ ತೂಕ ಸೇರಿದಂತೆ ನಾನಾ ವಿಷಯಗಳನ್ನು ಸಂಸ್ಥೆ ಲೆಕ್ಕ ಹಾಕಿದೆ.

100 ಅಂಕಗಳಲ್ಲಿ ಚೀನಾ 82 ಅಂಕಗಳನ್ನು ಪಡೆದು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಚೀನಾ ಸೈನಿಕರ ಸಂಖ್ಯೆ ಹಾಗೂ ವಾಯು, ನೌಕಾದಳದಲ್ಲಿ ಹೆಚ್ಚಿನ ಬಲ ಹೊಂದುವ ಮೂಲಕ ಪ್ರಥಮ ಸ್ಥಾನಕ್ಕೆ ತಲುಪಿದೆ.

ಅಮೆರಿಕಾ ತನ್ನ ಬಜೆಟ್‍ನಲ್ಲಿ ವರ್ಷಕ್ಕೆ 732 ಬಿಲಿಯನ್ ಡಾಲರ್ ಮೊತ್ತವನ್ನು ಖರ್ಚು ಮಾಡುವ ಮೂಲಕ ವಿಶ್ವದಲ್ಲೇ ಹೆಚ್ಚು ಹಣ ಖರ್ಚು ಮಾಡುತ್ತಿರುವ ದೇಶವಾಗಿ ಗುರುತಿಸಿಕೊಂಡಿದೆ. ಚೀನಾ 261 ಬಿಲಿಯನ್ ಡಾಲರ್ ಖರ್ಚು ಮಾಡಿದರೆ ಭಾರತ ವರ್ಷಕ್ಕೆ 71 ಬಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ ಎಂದು ವರದಿ ಹೇಳಿದೆ.

ಸಂಭವನೀಯ ಯುದ್ಧ ನಡೆದರೆ ಚೀನಾ ಸಮುದ್ರದಲ್ಲಿ, ಅಮೆರಿಕಾ ಅಂತರಿಕ್ಷದಲ್ಲಿ, ರಷ್ಯಾ ಭೂ ನೆಲೆಯಲ್ಲಿ ಪ್ರಾಭಲ್ಯ ಸಾಸಲಿವೆ ಎಂದು ಹೇಳಲಾಗಿದೆ. ಅಮೆರಿಕಾ ವಾಯು ಸೇನೆಯಲ್ಲಿ 14,141, ರಷ್ಯಾ 4,682, ಚೀನಾ 3,587 ಯುದ್ಧವಿಮಾನಗಳನ್ನು ಹೊಂದಿವೆ.

ಭೂ ಸೇನೆಯಲ್ಲಿ ರಷ್ಯಾ ಒಕ್ಕೂಟ 54,866, ಅಮೆರಿಕಾ 50,326, ಚೀನಾ 41,641 ವಾಹನಗಳನ್ನು ಹೊಂದಿವೆ. ಸಮುದ್ರದಲ್ಲಿನ ನೌಕಾದಳದಲ್ಲಿ ಚೀನಾ 406 ಹಡಗುಗಳನ್ನು, ರಷ್ಯಾ 278, ಅಮೆರಿಕಾ ಮತ್ತು ಭಾರತ 202 ಹಡಗುಗಳನ್ನು ಹೊಂದಿವೆ ಎಂದು ವರದಿ ಹೇಳಿದೆ.

Facebook Comments

Sri Raghav

Admin