7 ಮಹತ್ವದ ಒಪ್ಪಂದಗಳಿಗೆ ಭಾರತ-ಕೊರಿಯಾ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್. ಫೆ.22- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಕ್ಷಿಣ ಕೊರಿಯಾ ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ಇಂದು ಏಳು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮೂಲಸೌಕರ್ಯಾಭಿವೃದ್ದಿ, ಮಾಧ್ಯಮ, ನವೋದ್ಯಮ, ಅಂತಾರಾಷ್ಟ್ರೀಯ ಗಡಿ ಮತ್ತು ಜಾಗತಿಕ ಅಪರಾಧ ನಿಗ್ರಹ ಸೇರಿದಂತೆ ಏಳು ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ದಕ್ಷಿಣ ಕೊರಿಯಾ ಇಂದು ಒಡಂಬಡಿಕೆಗೆ ಅಂಕಿತ ಹಾಕಿವೆ.

ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಾಧ್ಯಕ್ಷ ಮೂನ್ ಜಾಯಿ-ಇನ್ ಅವರೊಂದಿಗೆ ವ್ಯಾಪಾರ, ಬಂಡವಾಳ ಹೂಡಿಕೆ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಮಹತ್ವದ ದ್ವಿಪಕ್ಷೀಯ ಸಹಕಾರ ವರ್ಧನೆಗಾಗಿ ರಚನಾತ್ಮಕ ಚರ್ಚೆ ನಡೆಸಿದರು.

ದಕ್ಷಿಣ ಕೊರಿಯಾ ಅಧ್ಯಕ್ಷರ ಅಧಿಕೃತ ನಿವಾಸ ಬ್ಲೂ ಹೌಸ್‍ನಲ್ಲಿ ಪ್ರಧಾನಿ ಮೋದಿ ಅವರಿಗೆ ದೇಶದ ಪರವಾಗಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ರಾಷ್ಟ್ರಾಧ್ಯಕ್ಷ ಮೂನ್ ಮತ್ತು ಪ್ರಥಮ ಮಹಿಳೆ (ಅಧ್ಯಕ್ಷರ ಪತ್ನಿ) ಕಿಮ್ ಜುಂಗ್ ಸೂಕ್ ಅವರನ್ನು ಮೋದಿ ಭೇಟಿ ಮಾಡಿದರು.

ಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪ್ರಧಾನಿ, ಭಾರತದ ಆರ್ಥಿಕತೆ ಪರಿವರ್ತನೆಯಲ್ಲಿ ದಕ್ಷಿಣ ಕೊರಿಯಾ ಪ್ರಮುಖ ಪಾಲುದಾರತ್ವ ದೇಶ. ನಮ್ಮ ವ್ಯಾಪಾರ ಮತ್ತು ಹೂಡಿಕೆ ವೃದ್ದಿಯಾಗುತ್ತಿದೆ ಎಂದು ಬಣ್ಣಿಸಿದರು.

ಪ್ರಧಾನಿ ಮೋದಿ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಾಧ್ಯಕ್ಷ ಮೂನ್ ಜಾಯಿ-ಇನ್ ವ್ಯಾಪಾರ, ಬಂಡವಾಳ ಹೂಡಿಕೆ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವರ್ಧನೆಗಾಗಿ ಪೂರಕ ಸಮಾಲೋಚನೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ರವೀಶ್ ಕುಮಾರ್ ಟ್ವೀಟರ್‍ನಲ್ಲಿ ತಿಳಿಸಿದ್ದ್ಧಾರೆ.

Facebook Comments