ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಫ್‍ಗೆ ತೆರಳಿದ ಭಾರತೀಯ ಬಾಕ್ಸರ್‌ಗಳು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.20-ಇದೇ ತಿಂಗಳ 24 ರಿಂದ ಬೆಲ್‍ಗ್ರೇಡ್‍ನಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಫ್‍ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಬಾಕ್ಸರ್‍ಗಳ ತಂಡ ಇಂದು ಬೆಲ್ ಗ್ರೇಡ್‍ಗೆ ಪ್ರಯಾಣ ಬೆಳೆಸಿತು. ಏಷ್ಯನ್ ಪ್ರಶಸ್ತಿ ಪುರಸ್ಕøತ ದೀಪಕ್‍ಕುಮಾರ್, ಶಿವಥಾಪಾ, ಸಂಜೀತ್ ಮತ್ತಿತರ ತಂಡ ಬೆಲ್‍ಗ್ರೇಡ್‍ಗೆ ತೆರಳಿದೆ.

ಟೋಕಿಯೊ ಒಲಂಪಿಕ್ಸ್‍ನಲ್ಲಿ ಪದಕ ಗಳಿಸದೆ ನಿರಾಶರಾಗಿದ್ದ ಭಾರತೀಯ ಬಾಕ್ಸರ್‍ಗಳು ಬೆಲ್‍ಗ್ರೇಡ್‍ನಲ್ಲಿ ಪದಕ ಗಳಿಸುವ ಕನಸಿನೊಂದಿಗೆ ತಮ್ಮ ಪ್ರಯಾಣ ಆರಂಭಿಸಿದ್ದಾರೆ. ಥಾಪಾ ಕಳೆದ 2015ರಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಫ್‍ನಲ್ಲಿ ಕಂಚಿನ ಪದಕ ಪಡೆದಿದ್ದರು.

ಉಳಿದ ಇಬ್ಬರು ಬಾಕ್ಸರ್‍ಗಳು ರಾಷ್ಟ್ರೀಯ ಚಾಂಪಿಯನ್‍ಶಿಫ್‍ನಲ್ಲಿ ಭಾಗವಹಿಸಿರುವ ಅನುಭವ ಹೊಂದಿದ್ದು, ಈ ಬಾರಿ ವಿಶ್ವ ಚಾಂಪಿಯನ್‍ಶಿಫ್‍ನಲ್ಲಿ ಗೆದ್ದು ಬರುವ ಭರವಸೆ ಮೂಡಿಸಿದ್ದಾರೆ.

Facebook Comments