ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲೆತ್ನಿಸಿದ ‘ಪಾಪಿ’ಸ್ತಾನದ ವಿರುದ್ಧ ಭಾರತ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಲಾಹೋರ್, ಜು.28- ಪಾಕಿಸ್ತಾನದ ಲಾಹೋರ್‍ನಲ್ಲಿರುವ ಸಿಖ್ ಧರ್ಮೀಯರ ಪ್ರಸಿದ್ಧ ಗುರುದ್ವಾರ ಮಂದಿರವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಯತ್ನಿಸುತ್ತಿರುವ ಇಸ್ಲಾಮಾಬಾದ್ ಕ್ರಮಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ದೆಹಲಿಯಲ್ಲಿರುವ ಪಾಕಿಸ್ತಾನದ ಹೈ ಕಮಿಷನ್ ಮುಂದೆ ಕೇಂದ್ರ ಸರ್ಕಾರ ಪ್ರತಿಭಟನೆ ದಾಖಲಿಸಿದೆ. ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಈ ಕುರಿತು ಪಾಕಿಸ್ತಾನ ಹೈಕಮಿಷನ್‍ಗೆ ಭಾರತದ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಾಹೋರ್‍ನ ನೌಲಖಾ ಬಜಾರ್‍ನಲ್ಲಿರುವ ಗುರುದ್ವಾರ ಶಾಹಿದಿ ಆಸ್ಥಾನ ಭಾಯಿ ತರು ಜೀ ಐತಿಹಾಸಿಕ ಸ್ಥಳವಾಗಿದ್ದು, 1745ರಲ್ಲಿ ಸಿಖ್ ಧಾರ್ಮಿಕ ಮುಖಂಡ ತರು ಸಿಂಗ್ ಜೀ ಅವರು ಈ ಸ್ಥಳದಲ್ಲಿ ಹುತಾತ್ಮರಾದರು.

ಆದರೆ ಪಾಕಿಸ್ತಾನ ಇದು ಶಾಹಿದ್ ಗಂಜ್ ಮಸೀದಿಯ ಸ್ಥಳ ಎಂದು ಹೇಳಿಕೊಂಡು ಸಿಖ್ ಧರ್ಮೀಯರ ಪವಿತ್ರ ಮಂದಿರವನ್ನು ಮುಸ್ಲಿಮರ ಪ್ರಾರ್ಥನಾ ಸ್ಥಳವನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆ.

ಪಾಕಿಸ್ತಾನದ ಈ ಕ್ರಮಕ್ಕೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪಂಜÁಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಅಕಾಲಿ ದಳ, ಸಿಖ್ ಧಾರ್ಮಿಕ ಮುಖಂಡರು ಸೇರಿದಂತೆ ಅನೇಕರು ಇಸ್ಲಾಮಾಬದ್ ಯತ್ನವನ್ನು ಖಂಡಿಸಿದ್ದಾರೆ.

Facebook Comments

Sri Raghav

Admin