2 ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಭಾರತ-ಮ್ಯಾನ್ವರ್ ಗಡಿ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ಇಂಫಾಲ, ಅ.9-ಈಶಾನ್ಯ ರಾಜ್ಯ ಮಣಿಪುರದ ಮೊರೆಹ್ ಪಟ್ಟಣದಲ್ಲಿ ಎರಡು ಬಾಂಬ್‍ಗಳು ಸ್ಪೋಟಗೊಂಡ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈ ನಗರದ ಪೊರೌಸ್ ಇಂಡಿಯಾ-ಮ್ಯಾನ್ವರ್ ಗಡಿಯನ್ನು ಅಸ್ಸಾಂ ರೈಫಲ್ಸ್(ಎಆರ್) ಯೋಧರು ಬಂದ್ ಮಾಡಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ಮರು ಕಳಿಸದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.  ಮಣಿಪುರದ ಟೆಂಗ್ನೋಪಾಲ್ ಜಿಲ್ಲೆಯ ಮೊರೆಹ್ ಪಟ್ಟಣ ಮತ್ತು ಮ್ಯಾನ್ಸರ್ ನಡುವೆ 10 ಕಿ.ಮೀ. ಉದ್ದದಷ್ಟು ಅಂತರದ ಗಡಿ ಇದಾಗಿದೆ.

ಮೊರೆಹ್ ಪಟ್ಟಣದ ಸಬ್ಸಿಡಿಯ ಇಂಟೆಲಿಜೆನ್ಸ್ ಬ್ಯೂಟೋ(ಎಸ್‍ಐಬಿ) ಮತ್ತು ಮೊರೆಹ್ ಪೊಲೀಸ್ ಠಾಣೆ ಬಳಿ ನಿನ್ನೆ ಮತ್ತು ಮೊನ್ನೆ ಎರಡು ಬಾಂಬ್‍ಗಳು ಸ್ಪೋಟಗೊಂಡವು. ಆದರೆ ಈ ಘಟನೆಯಲ್ಲಿ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ವರದಿಯಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಪೊರೌಸ್ ಗಡಿಯನ್ನು ಮುಂದಿನ ಆದೇಶದ ತನಕ ಬಂದ್ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನ ಮತ್ತು ಜನ ಸಂಚಾರ ನಿಷೇಧಿಸಲಾಗಿದೆ.

Facebook Comments