ಒಂದೇ ದಿನ 1,84,372 ಮಂದಿಗೆ ಕೊರೋನಾ, ಸಾವಿರ ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.14- ಯುಗಾದಿ, ರಂಜಾನ್ ಉಪವಾಸ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳ ನಡುವೆ ಕೊರೊನಾ ಸೋಂಕಿನ ಉಪಟಳ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ 1,84,372 ಮಂದಿಗೆ ಸೋಂಕು ತಗುಲಿದೆ. 1027 ಮಂದಿಗೆ ಸಾವನ್ನಪ್ಪಿದ್ದಾರೆ.  ದಿನೇ ದಿನೆ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಮತ್ತು ಸೋಂಕಿತರ ನಡುವಿನ ಅಂಕಿ ಅಂಶಗಳಲ್ಲಿ ಭಾರೀ ವ್ಯತ್ಯಾಸ ಕಾಣಲಾರಂಭಿಸಿದೆ.

1.84 ಲಕ್ಷ ಸೋಂಕಿತರಾದರೆ, ಚಿಕಿತ್ಸೆ ಪಡೆದು ಗುಣಮುಖರಾಗಿರುವವರು 82,339 ಮಂದಿ ಇದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,38,23,825 ರಷ್ಟಾಗಿದೆ. ಚಿಕಿತ್ಸೆ ಪಡೆದು ಗುಣಮುಖರಾಗಿರುವವರು 1,23,36,036ರಷ್ಟಿದ್ದು, ದೇಶದಲ್ಲಿ ಇನ್ನು 13,65,704 ಸಕ್ರಿಯ ಪ್ರಕರಣಗಳಿವೆ. ಸಾವಿನ ಸಂಖ್ಯೆ 1,72,085ರಷ್ಟಾಗಿದೆ.

ನಿನ್ನೆ ಒಂದೇ ದಿನ 1027 ಮಂದಿ ಸಾವನ್ನಪ್ಪಿರುವುದು ಆತಂಕ ಸೃಷ್ಟಿಸಿದೆ. ಎಂದಿನಂತೆ ಮಹಾರಾಷ್ಟ್ರ, ಕೇರಳ, ದೆಹಲಿ, ಪಶ್ಚಿಮಬಂಗಾಳ, ತಮಿಳುನಾಡು, ಗುಜರಾತ್, ಛತ್ತೀಸ್‍ಗಢ್ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿತ್ತಿದೆ.

ಕೆಲವು ರಾಜ್ಯಗಳಲ್ಲಿ ಸೋಂಕನ್ನು ನಿಯಂತ್ರಿಸಲು ಲಾಕ್‍ಡೌನ್, ನೈಟ್ ಕಫ್ರ್ಯೂನಂತಹ ಕ್ರಮಗಳನ್ನು ಕೈಗೊಳ್ಳಳಾಗಿದೆ. ಅದರ ಹೊರಾಗಿಯೂ ಕೂಡ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಹಲವಾರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಬಿಗಿ ಕ್ರಮ ಕೈಗೊಳ್ಳುತ್ತಿದೆ.

ಎಲ್ಲಾ ಪ್ರಯತ್ನದ ನಡುವೆಯೂ ಕೂಡ ಕೊರೊನಾದ ಎರಡನೇ ದೇಶದಲ್ಲಿ ಅಬ್ಬರಿಸುತ್ತಿದ್ದು, ದಿನೇ ದಿನೆ ಮಹಾಮಾರಿಯಂತೆ ವ್ಯಾಪಿಸಲು ಆರಂಭಿಸಿದೆ. ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಜನ ಮೈರೆಯುತ್ತಿರುವುದು ಹಾಗೂ ಚುನಾವಣಾ ಪ್ರಚಾರಗಳ ಅಬ್ಬರದಿಂದಾಗಿ ಸೋಂಕು ಹೆಚ್ಚಾಗುತ್ತಿದೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ.

Facebook Comments