ಇಂಡಿಯಾ ಬ್ಯಾಡ್ಮಿಂಟನ್ ಟೂರ್ನಿಗೆ ಕೊರೊನಾ ಗುಮ್ಮ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.13- ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಗೆ ಕೊರೊನಾ ಕಾಡಲಾರಂಭಿಸಿದೆ. ವಿಶ್ವ ಚಾಂಪಿಯನ್‍ಶಿಪ್ ಬೆಳ್ಳಿ ಪದಕ ವಿಜೇತ ಕಿಡಾಂಬಿ ಶ್ರೀಕಾಂತ್ ಸೇರಿದಂತೆ ಏಳು ಭಾರತೀಯ ಷಟ್ಲರ್‍ಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಈ ಆಟಗಾರರ ಹೆಸರುಗಳನ್ನು ಖಚಿತಪಡಿಸುವ ಮುನ್ನ ಬ್ಯಾಡ್ಮಿಂಟನ್ ವಲ್ರ್ಡ್ ಫೆಡರೇಷನ್ (ಬಿಡಬ್ಲ್ಯೂಎಫ್) ಈ ವಿಷಯವನ್ನು ಇಂದು ನಸುಕಿನ ಜಾವ ಪ್ರಕಟಿಸಿದೆ.

ಶ್ರೀಕಾಂತ್ ಅವರಲ್ಲದೆ ಸ್ಪರ್ಧೆಯಿಂದ ಹಿಂದೆ ಸರಿದ ಇತರ ಕ್ರೀಡಾಪಟುಗಳೆಂದರೆ ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಥಕ್ಕರ್, ತ್ರೀಸಾ ಜೋಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮಾನ್ ಸಿಂಗ್ ಮತ್ತು ಖುಷಿಗುಪ್ತ ಮಂಗಳವಾರ ನಡೆದ ಕಡ್ಡಾಯ ಆರ್‍ಟಿಪಿಸಿಆರ್ ಪರೀಕ್ಷೆಯಲ್ಲಿ ಈ ಆಟಗಾರರಿಗೆ ಪಾಸಿಟಿವ್ ಫಲಿತಾಂಶ ಕಂಡು ಬಮದಿತ್ತು. ಈ ಏಳು ಆಟಗಾರರ ನಿಕಟ ಸಂಪರ್ಕ ಹೊಂದಿದ್ದ ಡಬಲ್ಸ್ ಜೊತೆಗಾರರು ಕೂಡ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಬಿಡಬ್ಲ್ಯೂಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಮುಖ್ಯ ಡ್ರಾನಲ್ಲಿ ಈ ಆಟಗಾರರಿಗೆ ಬರಲಿ ಆಟಗಾರರನ್ನು ಆಡಿಸುವುದಿಲ್ಲ. ಆದ್ದರಿಂದ ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್ ಒವರ್ ನೀಡಲಾಗುವುದು. ಈ ಮುನ್ನ ಬಿಡಬ್ಲ್ಯೂಎಫ್ ಈ ಏಳು ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ.

Facebook Comments