ಅತಿ ಹೆಚ್ಚು ಉಗ್ರರ ದಾಳಿಗೊಳಗಾದ 5 ದೇಶಗಳಲ್ಲಿ ಭಾರತವೂ ಒಂದು

ಈ ಸುದ್ದಿಯನ್ನು ಶೇರ್ ಮಾಡಿ

Terrorist

ವಾಷಿಂಗ್ಟನ್, ಸೆ.20- ಕಳದ ವರ್ಷದ ಭಯೋತ್ಪಾದಕರ ಎಲ್ಲ ದಾಳಿಗಳಲ್ಲಿ ಶೇಕಡ 59ರಷ್ಟು ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಏಷ್ಯಾದ ಐದು ದೇಶಗಳಲ್ಲಿ ನಡೆದಿದೆ ಎಂದು ಅಮೆರಿಕ ಹೇಳಿದೆ.  ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾಕ್ ಮತ್ತು ಫಿಲಿಪೈನ್ಸ್…ಈ ಐದು ಏಷ್ಯಾ ದೇಶಗಳಲ್ಲಿ 2017ರಲ್ಲಿ ನಡೆದ ಉಗ್ರರ ಆಕ್ರಮಣಗಳಲ್ಲಿ ಬಹುತೇಕ ಶೇ.59ರಷ್ಟು ಆಕ್ರಮಣಗಳಾಗಿವೆ ಎಂದು ವರದಿಯೊಂದು ಹೇಳಿದೆ.

ಕಳೆದ ವರ್ಷ ವಿಶ್ವಾದ್ಯಂತ ನಡೆದ ಉಗ್ರರ ದಾಳಿಗಳು ಶೇ.23ರಷ್ಟು ಕಡಿಮೆಯಾಗಿವೆ. ಅದೇ ರೀತಿ, ಭಯೋತ್ಪಾದಕರ ಹಿಂಸಾಚಾರದ ಒಟ್ಟು ಸಾವಿನ ಪ್ರಕರಣಗಳೂ ಸಹ ಶೇ.27ರಷ್ಟು ಇಳಿಕೆಯಾಗಿದೆ ಎಂದು ಸಮಾವೇಶವೊಂದರಲ್ಲಿ ಭಯೋತ್ಪಾದನಿ ನಿಗ್ರಹ ಸಮನ್ವಯ ಸಮಿತಿ ಸಂಚಾಲಕ ನಾಥನ್ ಸೇಲ್ಸ್ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
.
2017ರಲ್ಲಿ 100 ದೇಶಗಳಲ್ಲಿ ಉಗ್ರರ ದಾಳಿಗಳು ನಡೆದಿವೆ. ಇಷ್ಟೂ ದೇಶಗಳಲ್ಲಿ ನಡೆದ ಭಯೋತ್ಪಾದಕರ ಆಕ್ರಮಣಗಳಲ್ಲಿ ಏಷ್ಯಾದ ಐದು ದೇಶಗಳಲ್ಲೇ ಅತಿ ಹೆಚ್ಚಾಗಿ ನಡೆದಿದ್ದು, ಒಟ್ಟು ಶೇ.59ರಷ್ಟು ಟೆರ್ರರಿಸ್ಟ್ ಅಟ್ಯಾಕ್‍ಗಳಾಗಿವೆ ಎಂದು ನಾಥನ್ ವರದಿಗಾರರೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ.

Facebook Comments

Sri Raghav

Admin