ಪಾಕಿಸ್ತಾನಕ್ಕೆ ರಾಜತಾಂತ್ರಿಕ ಶಾಕ್ ನೀಡಿದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.24-ರಾಜಧಾನಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಕಚೇರಿಯ ಅರ್ಧದಷ್ಟು ಸಿಬ್ಬಂದಿಯನ್ನು ಇನ್ನು ಏಳು ದಿನಗಳ ಒಳಗೆ ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತ ಇಸ್ಲಾಮಾಬಾದ್‍ಗೆ ತಾಕೀತು ಮಾಡಿದೆ.

ಚೀನಾ ಕುಮ್ಮಕ್ಕಿನಿಂದ ಭಾರತದ ವಿರುದ್ಧ ಪದೇ ಪದೇ ದುಷ್ಕøತ್ಯಗಳಿಗೆ ಹವಣಿಸುತ್ತಿರುವ ಪಾಕಿಸ್ತಾನಕ್ಕೆ ಈ ಮೂಲಕ ಕೇಂದ್ರ ಸರ್ಕಾರ ರಾeತಾಂತ್ರಿಕ ಆಘಾತ ನೀಡಿದೆ.

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ಗುಂಡಿನ ದಾಳಿ, ಯೋಧರ ಹತ್ಯೆ, ಉಗ್ರಗಾಮಿಗಳಿಗೆ ಕುಮ್ಮಕ್ಕು, ಭಾರತದ ವಿರುದ್ಧ ಬೇಹುಗಾರಿಕೆ, ಭಾರತೀಯ ರಾಜತಾಂತ್ರಿಕರ ಅಪಹರಣ, ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಪಾಕ್‍ಗೆ ಈ ಮೂಲಕ ಭಾರತ ಬಿಸಿ ಮುಟ್ಟಿಸಿದೆ.

ಇನ್ನು ಏಳು ದಿನಗಳ ಒಳಗೆ ದೆಹಲಿಯಲ್ಲಿನ ಪಾಕ್ ರಾಯಭಾರಿ ಕಚೇರಿಯಲ್ಲಿನ ನಿಮ್ಮ ಸಿಬ್ಬಂದಿಯನ್ನು ಶೇ.50ರಷ್ಟು ಕಡಿಮೆ ಮಾಡಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೈಕಮಿಷನ್ ಕಾರ್ಯಾಲಯದ ಉನ್ನತಾಕಾರಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಿಂದಲೂ ನಾವು ಅರ್ಧದಷ್ಟು ಸಿಬ್ಬಂದಿಯನ್ನು ಇನ್ನೊಂದು ವಾರದೊಳಗೆ ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಭಾರತ ತಿಳಿಸಿದೆ.

ಭಾರತದ ಈ ಕಟ್ಟುನಿಟ್ಟಿನ ಸೂಚನೆಯಿಂದ ಪಾಕಿಸ್ತಾನಕ್ಕೆ ಆಘಾತವಾಗಿದ್ದು, ತನ್ನ ಚಟುವಟಿಕೆಗಳಿಗೆ ಭಾರೀ ಹೊಡೆತ ಬೀಳಲಿದೆ. ಪಾಕಿಸ್ತಾನದಲ್ಲಿ ಸರ್ಕಾರದ ಕುಮ್ಮಕ್ಕಿನಿಂದ ಭಾರತೀಯರ ರಾಜತಾಂತ್ರಿಕರನ್ನು ಅಪಹರಿಸಲಾಗಿತ್ತು.

ದೆಹಲಿಯಲ್ಲಿರುವ ಹೈಕಮಿಷನ್ ಕಚೇರಿಯ ಸಿಬ್ಬಂದಿ ಭಾರತದ ವಿರುದ್ಧ ಗೂಢಚಾರಿಕೆ ನಡೆಸಿ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡುತ್ತಿದ್ದರು. ಪಾಕಿಸ್ತಾನದ ಈ ಎಲ್ಲ ಕುಯುಕ್ತಿಗಳಿಗೆ ತಕ್ಕಪಾಠ ಕಲಿಸುತ್ತಿರುವ ಭಾರತ ಈಗ ಮತ್ತೊಂದು ರಾಜತಾಂತ್ರಿಕ ಪೆಟ್ಟು ನೀಡಿದೆ.

Facebook Comments

Sri Raghav

Admin