ಅಂತರಿಕ್ಷದಲ್ಲಿ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಮುಂದಾದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ. ಜೂ.14 : ಚಂದ್ರಯಾನ-2 ಕ್ಕೆ ಮುಹೂರ್ತ ನಿಗದಿಪಡಿಸಿದ ಬೆನ್ನಲ್ಲೇ ಇಸ್ರೋ ತನ್ನ ಮಹತ್ವಾಕಾಂಕ್ಷಿಯ ಯೋಜನೆಯ ಕುರಿತು ಮಾಹಿತಿ ನೀಡಿದೆ. ನವದೆಹಲಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕೆ ಶಿವನ್‌​ ಗಗನಯಾನ ಯೋಜನೆಯ ಮೂಲಕ ಅಂತರಿಕ್ಷಕ್ಕೆ ಮನುಷ್ಯರನ್ನು ಕಳುಹಿಸಲು ಯೋಜನೆ ರೂಪಿಸಿದ್ದೇವೆ. ಗಗನಯಾತ್ರಿಗಳು ಅಂತರಿಕ್ಷದಲ್ಲಿ ಉಳಿದುಕೊಳ್ಳಲು ಬಾಹ್ಯಾಕಾಶ ನಿಲ್ದಾಣದ ಅವಶ್ಯಕತೆ ಇರುತ್ತದೆ.

‘ಮಾನವ ಬಾಹ್ಯಾಕಾಶ ಅಭಿಯಾನವನ್ನು ಆರಂಭಿಸಿದ ಬಳಿಕ ನಾವು ಗಗನಯಾನ ಕಾರ್ಯಕ್ರಮವನ್ನು ಉಳಿಸಿಕೊಳ್ಳಬೇಕಾಗಿದೆ. ಈ ನೆಲೆಯಲ್ಲಿ ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ’ ಎಂದವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಹಾಗಾಗಿ ಭಾರತ ತನ್ನದೇ ಒಂದು ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ. ಅಂತರಿಕ್ಷಕ್ಕೆ ಮನುಷ್ಯರನ್ನು ಕಳುಹಿಸುವ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಮುಂದುವರಿದ ಭಾಗವಾಗಿ ಅಂತರಿಕ್ಷದಲ್ಲಿ ಭಾರತ ತನ್ನದೇ ಒಂದು ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಭಾರತ ಯೋಜನೆ ರೂಪಿಸುತ್ತಿದೆ.

ಜುಲೈ 15ಕ್ಕೆ ಚಂದ್ರಯಾನ-2 ಉಡಾವಣೆ :  ಚಂದ್ರನ ಮೇಲಿರುವ ಖನಿಜ, ನೀರು ಹಾಗೂ ಕಂಪನದ ಬಗ್ಗೆ ಅಧ್ಯಯನ ನಡೆಸಲಿರುವ ಬಹು ನಿರೀಕ್ಷೆಯ ‘ಚಂದ್ರಯಾನ-2’ ಬಾಹ್ಯಾಕಾಶ ನೌಕೆಯ ಯಾನ ಜುಲೈ 15ರಂದು ಆರಂಭವಾಗಲಿದೆ.

‘ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಂದು ಮುಂಜಾನೆ 2 ಗಂಟೆ 51 ನಿಮಿಷಕ್ಕೆ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಳಗೊಂಡ 3.8 ಟನ್ ತೂಕದ ‘ಚಂದ್ರಯಾನ-2′ ಉಪಕರಣಗಳನ್ನು ಹೊತ್ತ ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ಉಡಾವಣೆಗೊಳ್ಳಲಿದೆ.

‘ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್ಗಳ ನಿರ್ಮಾಣ ಕಾರ್ಯ ಕೊನೆಗೊಂಡಿದೆ. ಶುಕ್ರವಾರ ಇವುಗಳನ್ನು ಶ್ರೀಹರಿಕೋಟಾಕ್ಕೆ ಸಾಗಿಸಲಾಗುವುದು. 17ರಿಂದ ಉಡಾವಣಾ ವಾಹನಕ್ಕೆ ಸೇರಿಸುವ ಪ್ರಕ್ರಿಯೆಗಳು ಆರಂಭವಾಗಲಿವೆ.

‘ನಾಸಾ’ದ ಒಂದು ಸಣ್ಣ ಸಂವಹನ ಸಾಧನ ಬಿಟ್ಟರೆ ಭಾರತೀಯ ತಂತ್ರಜ್ಞಾನವನ್ನೇ ಸಂಪೂರ್ಣವಾಗಿ ಬಳಸಿಕೊಂಡು ಚಂದ್ರಯಾನ-2 ಅನ್ನು ಸಿದ್ಧಪಡಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin