ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರಿ ಇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.26-ಕಳೆದ 238 ದಿನಗಳ ನಂತರ ಇದೇ ಮೊದಲ ಭಾರಿಗೆ ದೇಶದಲ್ಲಿ ಅತ್ಯಂತ ಕಡಿಮೆ ಸೋಂಕು ಪ್ರಕರಣಗಳು ದಾಖಲಾಗಿದೆ. ನಿನ್ನೆಯಿಂದ ಕೇವಲ 12,428 ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಇದರ ಜತೆಗೆ ಸಕ್ರೀಯ ಸೋಂಕು ಪ್ರಮಾಣ 1,63,816 ಲಕ್ಷಕ್ಕೆ ಕುಸಿದಿದೆ.

ಒಂದೇ ದಿನ ಕೊರೊನಾ ಮಹಾಮಾರಿಗೆ 356 ಮಂದಿ ಬಲಿಯಾಗಿರುವುದರಿಂದ ಸೋಂಕಿನಿಂದ ಇದುವರೆಗೂ ಮೃತಪಟ್ಟವರ ಸಂಖ್ಯೆ 4,55,068 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಿನ್ನೆ ಒಂದೇ ದಿನ 11 ಲಕ್ಷಕ್ಕೂ ಹೆಚ್ಚು ಕೊರೊನಾ ತಪಾಸಣೆ ನಡೆಸಲಾಗಿದ್ದು, ದೇಶದ್ಯಾಂತ ಇಂದಿನವರೆಗೆ 60 ಕೋಟಿಗೂ ಹೆಚ್ಚು ಮಂದಿಯ ತಪಾಸಣೆ ನಡೆಸಿದಂತಾಗಿದೆ.

Facebook Comments