24 ಗಂಟೆಯಲ್ಲಿ 14623 ಮಂದಿಗೆ ಕೊರೋನಾ, 197 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.20- ದಿನೇ ದಿನೇ ಸೋಂಕು ಕ್ಷೀಣಿಸುತ್ತಿರುವುದರಿಂದ ಸಕ್ರಿಯ ಕೊರೊನಾ ಸೋಂಕಿನ ಪ್ರಮಾಣ 1.78 ಲಕ್ಷಕ್ಕೆ ಕುಸಿದಿದೆ.
ಕಳೆದ 229 ದಿನಗಳ ಇದೇ ಮೊದಲ ಭಾರಿಗೆ ಸಕ್ರೀಯ ಸೋಂಕು ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡು ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಿನ್ನೆಯಿಂದ ಕೇವಲ 14623 ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಂಡಿರುವುದರಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 3,41,08,996 ಆಗಿದೆ.
ಇದರ ಜೊತೆಗೆ 197 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿಗೆ ಇದುವರೆಗೂ ಬಲಿಯಾದವರ ಸಂಖ್ಯೆ 4,52,651 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ 26 ದಿನಗಳಿಂದ ಪ್ರತಿನಿತ್ಯ 30 ಸಾವಿರದೊಳಗೆ ಕೊರೊನಾ ಸೋಂಕು ದಾಖಲಾಗುತ್ತಿದೆ. ಇದರ ಜತೆಗೆ ದಿನೇ ದಿನೇ ಸೋಂಕಿನ ಪ್ರಮಾಣ ಕ್ಷೀಣಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಬಣ್ಣಿಸಲಾಗುತ್ತಿದೆ.

Facebook Comments