ಒಂದೇ ದಿನ 50.000 ಕೊರೋನಾ ಕೇಸ್..! ವಿಶ್ವದಲ್ಲಿ 2ನೇ ಸ್ಥಾನಕ್ಕೆರಿದ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜು.24-ಕಿಲ್ಲರ್ ಕೋವಿಡ್ ವೈರಸ್ ಗಂಡಾಂತರದಿಂದ ತತ್ತರಿಸುತ್ತಿರುವ ವಿಶ್ವದಲ್ಲಿ ಭಾರತ ಈಗ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಪಿಡುಗಿನ ಕರ್ಮಕಾಂಢ ಯಥಾಪ್ರಕಾರ ಮುಂದುವರಿದಿದೆ.

ದಿನೇ ದಿನೇ ಸೋಂಕು ಮತ್ತು ಸಾವು ಪ್ರಕರಣಗಳು ಅತಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಸೋಂಕು ಪ್ರಕರಣಗಳಲ್ಲಿ ಭಾರತ ಬ್ರೆಜಿಲ್‍ನನ್ನು ಹಿಂದಿಕ್ಕೆ ಎರಡನೇ ಸ್ಥಾನಕ್ಕೇರಿದೆ.

24 ತಾಸುಗಳಲ್ಲಿ ಕೋವಿಡ್ ವೈರಾಣು ದಾಳಿಯ ಹೊಸ ದಾಖಲೆ ನಿರ್ಮಾಣವಾಗಿದ್ದು, 50,000ಕ್ಕೂ ಹೆಚ್ಚು ಹೊಸ ಸಾಂಕ್ರಾಮಿಕ ರೋಗ ಪ್ರಕರಣಗಳು ವರದಿಯಾಗಿದೆ. ಒಂದೇ ದಿನ 740 ಸಾವುಗಳು ಸಂಭವಿಸಿದೆ.
ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 12.88 ಲಕ್ಷ ಹಾಗೂ ಸಾವಿನ ಪ್ರಮಾಣ 30,000 ದಾಟಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.

ದೇಶದಲ್ಲಿ ಈಗ 4.40 ಲಕ್ಷ ಆಕ್ಟಿವ್ ಕೇಸ್‍ಗಳಿದ್ದು, 8.17 ಲಕ್ಷ ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿ ಡಿರ್ಸಾಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ನಿನ್ನೆವರೆಗೆ ಒಂದೂವರೆ ಕೋಟಿಗೂ ಅಧಿಕ ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಗೆ ಒಳಪಡಿಸಲಾಗಿದೆ ಅಲ್ಲದೇ ಸೋಂಕು ಪರೀಕ್ಷೆ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

ದೇಶದಲ್ಲಿ ಜುಲೈ ತಿಂಗಳ 24 ದಿನವೂ ಹೆಮ್ಮಾರಿ ಆರ್ಭಟ ಅತಂಕಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಇನ್ನೆರಡು ತಿಂಗಳು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಪೀಡೆಯ ಹಾವಳಿ ಈ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದ್ದು, ಭಾರತೀಯರ ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ.

ನಿನ್ನೆ ಒಂದೇ ದಿನ (24 ಗಂಟೆಗಳ ಅವಧಿ) 49,310 ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ಇಂದು ಬೆಳಗಿನ ವರದಿ ಪ್ರಕಾರ ಸೋಂಕಿತರ ಸಂಖ್ಯೆ 50,000 ದಾಟಿದೆ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 32,000 ಮತ್ತು ಸೋಂಕು ಬಾಧಿತರ ಸಂಖ್ಯೆ 13 ಲಕ್ಷ ತಲುಪುವ ಆತಂಕವಿದೆ.

ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 740 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 30,601ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 12,87,943 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.63.45ರಷ್ಟು ಏರಿಕೆ ಕಂಡುಬಂದಿದ್ದು, ಸುಮಾರು 8.18 ಲಕ್ಷ ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ.

# 2ನೇ ಸ್ಥಾನದಲ್ಲಿ ಭಾರತ :
ಕೋವಿಡ್ ವೈರಾಣು ಸೋಂಕಿನಂದ ತೀವ್ರ ಬಾಧೆಗೆ ಒಳಗಾಗಿರುವ ದೇಶಗಳಲ್ಲಿ ಭಾರತ ಈಗ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಬೆಜ್ರಿಲ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ಟಾಪ್ ಫೈವ್ ಪಟ್ಟಿಯಲ್ಲಿವೆ.

Facebook Comments

Sri Raghav

Admin