ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್‍ಗೆ ಜಾಡಿಸಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.26- ಕಳೆದ 70 ವರ್ಷಗಳಲ್ಲಿ ಭಯೋತ್ಪಾದನೆ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ನೆರೆ ರಾಷ್ಟ್ರಗಳಿಗೆ ಕಾಟ ಮತ್ತು ಅಣ್ವಾಸ್ತ್ರಗಳನ್ನು ಹೊಂದುವುದೇ ನಿಮ್ಮ ದೇಶದ ದೊಡ್ಡ ಸಾಧನೆಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್‍ಖಾನ್‍ಗೆ ಭಾರತ ತೀವ್ರ ತರಾಟೆ ತೆಗೆದುಕೊಂಡಿದೆ.

ವಿಶ್ವಸಂಸ್ಥೆಯ 75ನೇ ಮಹಾ ಅವೇಶನದಲ್ಲಿ ಅನಗತ್ಯವಾಗಿ ಕಾಶ್ಮೀರ ವಿಷಯವನ್ನು ಕೆದಕಿದ ಇಮ್ರಾನ್‍ಖಾನ್ ವಿರುದ್ಧ ಭಾರತದ ಪ್ರತಿನಿ ಮಿಜಿಟೊ ವಿನಿಟೊ ವಾಗ್ದಾಳಿ ನಡೆಸಿದ್ದಾರೆ.

ಭಯೋತ್ಪಾದನೆ ನಿಮ್ಮ ದೇಶದ ಕೀರ್ತಿಯ ಮುಕುಟ. ಉಗ್ರವಾದ ನಿಮ್ಮ ಕಿರೀಟದ ವೈಭವ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನಿನ್ನೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಇಮ್ರಾನ್‍ಖಾನ್, ಕಾಶ್ಮೀರ ವಿಷಯವನ್ನು ಕೆದಕಿದಾಗ ಭಾರತದ ಪ್ರತಿನಿ ಮಿಜಿಟೊ ವಿನಿಟೊ ಅವರ ಹೆಳಿಕೆಯನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.

ನಂತರ ಇಮ್ರಾನ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿನಿಟೊ, ಜಮ್ಮು ಮತ್ತು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ. ಇದನ್ನು ಯಾರಿಂದಲೂ ಬೇರೆ ಮಾಡಲು ಸಾಧ್ಯವಿಲ್ಲ. ಆದರೆ, ಪಾಕಿಸ್ತಾನ ಕಾಶ್ಮೀರದ ಕೆಲವು ಭಾಗಗಳಲ್ಲಿ ಈಗಲೂ ಅತಿಕ್ರಮಣ ಮುಂದುವರೆಸಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಅಂತಾರಾಷ್ಟ್ರೀಯ ಕುಖ್ಯಾತಿಯ ಭಯೋತ್ಪಾದಕರಿಗೆ ಪಿಂಚಣಿ ಸೇರಿದಂತೆ ಅನೇಕ ಸರಕಾರಿ ಸೌಲಭ್ಯಗಳನ್ನು ನೀಡಿದ ಕೀರ್ತಿ ನಿಮ್ಮದಲ್ಲವೆ ಎಂದು ಅವರು ಇಮ್ರಾನ್‍ಗೆ ಮಾತಿನಿಂದ ತಿವಿದರು.

ಸನ್ಮಾನ್ಯರು (ಇಮ್ರಾನ್‍ಖಾನ್) ಕುಪ್ರಸಿದ್ಧ ಭಯೋತ್ಪಾದಕ ಒಸಮ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ತಮ್ಮ ದೇಶದಲ್ಲಿ 40 ಸಾವಿರ ಭಯೋತ್ಪಾದಕರಿದ್ದಾರೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ.
ಇದು ಆ ದೇಶದ ಭಯೋತ್ಪಾದನೆ ಪೋಷಣೆಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ನಿಮ್ಮ ದೇಶವು ಹಿಂದು, ಸಿಕ್ಕರು, ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೈವರ್ಜನ್ಯ ನಡೆಸುತ್ತಿದ್ದಾರೆ. ಮತ್ತೊಂದೆಡೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಲೇ ಇದೆ. ನೀವು ನಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಯವುದೇ ಹಕ್ಕಿಲ್ಲ. ನಿಮ್ಮ ಗೊಡ್ಡು ಉಪದೇಶಗಳನ್ನು ಮೊದಲು ನಿಲ್ಲಿಸಿ ಎಂದು ತಾಕೀತು ಮಾಡಿದರು.

Facebook Comments

Sri Raghav

Admin