ಭಾರತ- ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ನಡೆಯೋದು ಡೌಟ್..?

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬೋರ್ನ್, ಮೇ 30- ಕೊರೊನಾ ಹಾವಳಿಯಿಂದ ಐಪಿಎಲ್ ಕ್ರೀಡಾಕೂಟದ ಮೇಲೆ ಕರಿನೆರಳು ಬೀರು ತ್ತಿರು ವಾಗಲೇ ಡಿಸೆಂಬರ್‍ನಲ್ಲಿ ನಡೆಯ ಲಿರುವ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವಿನ ಸರಣಿ ನಡೆಯುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ನಡೆಸಬೇಕೆಂದು ಉಭಯ ರಾಷ್ಟ್ರಗಳ ಕ್ರಿಕೆಟ್ ಮಂಡಳಿಯು ನಿರ್ಧರಿಸಿತ್ತು. ಅದರಂತೆ ದಿನಾಂಕಗಳು ಕೂಡ ಪ್ರಕಟವಾಗಿದ್ದವು. ಆದರೆ ಈಗ ಆಸ್ಟ್ರೇಲಿಯಾ ಕ್ರಿಕೆಟ್ ಅಧ್ಯಕ್ಷ ಅಸಮಾಧಾನಗೊಂಡಿರುವುದರಿಂದ ಸರಣಿ ನಡೆಯುವುದು ಅನುಮಾನ ಎಂದು ಸಿಎಒ ಕೆವಿನ್ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

ಈ ಹಿಂದೆ ಪ್ರಕಟಿಸಿದಂತೆ ಬಾರ್ಡರ್- ಗವಾಸ್ಕರ್ ಕ್ರಿಕೆಟ್ ಟೆಸ್ಟ್ ಸರಣಿಯು ಡಿ. 3 ರಿಂದ ಜನವರಿ 7ರವರೆಗೆ ನಡೆಸಲು ಆಯೋಜಿಸಲಾಗಿತ್ತು. ಹಾಗೆಯೇ ಬಾಕ್ಸಿಂಗ್ ಟೆಸ್ಟ್‍ಗೆ ಡಿಸೆಂಬರ್ 26ರಂದು ನಿಗದಿಪಡಿಸಲಾಗಿತ್ತು. ಆದರೆ ಈ ಪಂದ್ಯಗಳೆಲ್ಲವೂ ಅಡಿಲೇಡ್, ಮೆಲ್ಬೋರ್ನ್, ಸಿಡ್ನಿಗಳಲ್ಲಿ ನಡೆಸಲು ಯೋಜಿಸಿದೆ, ಹಾಗೆಯೇ ಎರಡನೇ ಟೆಸ್ಟ್‍ನಲ್ಲಿ ಪಿಂಕ್ ಚೆಂಡನ್ನು ಬಳಸಲು ಕೂಡ ನಿರ್ಧರಿಸಲಾಗಿತ್ತು.

ಆದರೆ ಆಸ್ಟ್ರೇಲಿಯಾದ ಲ್ಲಿರುವ ಪ್ರಮುಖ ಕ್ರಿಕೆಟ್ ಅಂಗಣವಾದ ಪರ್ತ್‍ನಲ್ಲಿ ಯಾವುದೇ ಪಂದ್ಯವನ್ನು ಆಯೋಜಿಸದಿರುವುದರಿಂದ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಕ್ರಿಸ್ಟಿನ ಮ್ಯಾಥ್ಯೂಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ಹಿಂದೆ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಸರಣಿಯ ವೇಳೆಯೂ ಈ ಕ್ರೀಡಾಂಗಣವನ್ನು ಕಡೆಗಾಣಿಸಲಾಗಿತ್ತು.

ಕ್ರಿಸ್ಟಿನ ಮ್ಯಾಥ್ಯೂಸ್‍ನ ಮುನಿಸಿನಿಂದ ಈ ಬಾರಿ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೇಲೆ ಕರಿ ನೆರಳು ಬಿದ್ದು ಸರಣಿ ನಡೆಯುವುದೇ ಅನುಮಾನ ಎಂದು ಹೇಳಲಾಗುತ್ತಿದೆಯಾದರೂ ಸರಣಿ ನಡೆಯಲು ಇನ್ನೂ 6 ತಿಂಗಳು ಬಾಕಿಯಿದ್ದು ಅಷ್ಟರೊಳಗೆ ಬ್ರೆಸ್ಬೇನ್‍ನಲ್ಲಿ ನಡೆಯಬೇಕಾಗಿರುವ ಟೆಸ್ಟ್ ಪಂದ್ಯವನ್ನು ಪರ್ತ್‍ಗೆ ವರ್ಗಾಯಿಸುವ ಮೂಲಕ ಸರಣಿಗೆ ಅವಕಾಶವನ್ನು ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

Facebook Comments