ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕ್‍ಗೆ ಭಾರತ-ಅಮೆರಿಕಾ ಮತ್ತೊಮ್ಮೆ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮಾ.14- ಭಯೋತ್ಪಾದ ಸಂಘಟನೆಗಳು ಮತ್ತು ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಪಾಕಿಸ್ತಾನಕ್ಕೆ ವಿಶ್ವದ ವಿವಿಧ ದೇಶಗಳು ಒತ್ತಡ ಹೇರುತ್ತಿರುವಾಗಲೇ ಭಾರತ ಮತ್ತು ಅಮೆರಿಕಾ ಮತ್ತೊಮ್ಮೆ ಇಸ್ಲಾಮಾಬಾದ್‍ಗೆ ಈ ಬಗ್ಗೆ ತಾಕೀತು ಮಾಡಿದೆ.

ಈ ಸಂಬಂಧ ಅಮೆರಿಕಾದ ಭದ್ರತಾ ಸಲಹೆಗಾರರ ಜಾನ್ ಬೋಲ್ಟನ್ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲ್ ವಾಷಿಂಗ್ಟನ್‍ನಲ್ಲಿ ನಿನ್ನ ರಾತ್ರಿ ಚರ್ಚೆ ನಡೆಸಿದ್ದಾರೆ.ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಜತೆ ಉಗ್ರರ ವಿರುದ್ದ ಹೋರಾಟದ ಯೋಜನೆಗಳ ಮತ್ತು ಅಮೆರಿಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗಿದೆ.

ಉಗ್ರರನ್ನೇ ಸಂಹಾರ ಮಾಡಲು ಭಾರತಕ್ಕೆ ನಮ್ಮ ಬೆಂಬಲವಿರುತ್ತದೆ ಎಂದು ಅಮೆರಿಕಾದ ಭದ್ರತಾ ಸಲಹೆಗಾಗರ ಜಾನ್ ಬೋಲ್ಟನ್ ಟ್ವೀಟ್ ಮಾಡುವ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆ. 14ರಂದು ಪಾಕಿಸ್ತಾನದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಡೆಸಿದ ಪುಲ್ವಾಮಾ ದಾಳಿ ಬಳಿಕ ಭಾರತಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದ್ದೇವೆ, ಇದರಿಂದ ಅಮೆರಿಕಾ ಮತ್ತು ಭಾರತ ನಡುವೆ ಸಂಬಂಧ ಚೆನ್ನಾಗಿದೆ ಎಂದು ಬೋಲ್ಟ್‍ನ ತಿಳಿಸಿದ್ದಾರೆ.

Facebook Comments