2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ, 2-0 ಸರಣಿ ಮುನ್ನಡೆ, ಕೊಹ್ಲಿ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

ನಾಗ್ಪುರ, ಮಾ. 5: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಬಳಗ ಇಂದು ಎರಡನೇ ಏಕದಿನ ಪಂದ್ಯದಲ್ಲಿ 8 ರನ್ ಗಾಲ ರೋಚಕ ಜಯ ಸಾಧಿಸುವ ಮೂಲಕ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ .

ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ 48.2 ಓವರ್ ಗಳಲ್ಲಿ ಎಲ್ಲ ಔಟ್ 250 ರನ್ ಗಳಿಸಿ ಆಸ್ಟ್ರೇಲಿಯಾಗ್ 251 ರನ್ ಗಳ ಗುರಿ ನೀಡಿತ್ತು.

ತವರು ನೆಲದಲ್ಲಿ ನಡೆದ ಏಕದಿನದಲ್ಲಿ ರೋಹಿತ್ ಯಾವತ್ತಿಗೂ ಸೊನ್ನೆಗೆ ಔಟ್ ಆಗಿರಲಿಲ್ಲ. ಆದರೆ ವೃತ್ತಿ ಜೀವನದಲ್ಲಿ ಇದೇ ಮೊದಲಬಾರಿಗೆ ಭಾರತದಲ್ಲಿ ಶರ್ಮಾ ಸೊನ್ನೆಗೆ ವಿಕೆಟ್ ಒಪ್ಪಿಸಿ ಹೀಗೆ ನಿರಾಯಾಸವಾಗಿ ನಕಾರಾತ್ಮಕ ದಾಖಲೆಗೆ ಕಾರಣರಾದರು.

ರೋಹಿತ್ ಶರ್ಮ 0(6)ಕ್ಕೆ ಔಟ್ ಆಗಿ ಅನಗತ್ಯ ದಾಖಲೆ ಮಾಡಿ ಗಮನ ಸೆಳೆದಿದ್ದಾರೆ. ಶಿಖರ್ ಧವನ್ 21(29) ನಾಯಕ ವಿರಾಟ್ ಕೊಹ್ಲಿ ಎಂದಿನಂತೆ ತಮ್ಮ ಉತ್ತಮ ಬ್ಯಾಟಿಂಗ್ ಮೂಲಕ 116(120)ರನ್ ಓಡೆದು ಏಕದಿನ ಕ್ರಿಕೆಟ್ ನಲ್ಲಿ 40ನೇ ಶತಕ ಸಿಡಿಸಿ ಮಿಂಚಿದರು.

ಅಂಬಟಿ ರಾಯುಡು18(32), ವಿಜಯ್ ಶಂಕರ್46(41), ಕೇದಾರ್ ಜಾಧವ್11(12), ಧೋನಿ0(1), ರವೀಂದ್ರ ಜಡೇಜಾ21(40), ಕುಲದೀಪ್ ಯಾದವ್3(3), ಜಸ್ಪ್ರೀತ್ ಬುಮ್ರಾಹ್0(2) ಮೊಹಮ್ಮದ್ ಶಮಿ 4 ರನ್ ಒಡೆಯುದರ ಮೂಲಕ ಭಾರತದ ಒಟ್ಟು ಸ್ಕೋರ್ 10 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತ್ತು.

ಆಸ್ಟ್ರೇಲಿಯಾ ಬೌಲರ್ ಪಟ್ 4 ವಿಕೆಟ್ ಪಡೆದರೆ, ಆಡಮ್ 2 ನಾಥನ್ ಕೌಲ್ತೆರ್,ಮ್ಯಾಕ್ಸ್ವೆಲ್, ನಾಥನ್ ಲ್ಯೊನ್ ತಲಾ 1 ವಿಕೆಟ್ ಪಡೆದರು.

ನಂತರ 251 ರನ್ ಗಳ ಆಸ್ಟ್ರೇಲಿಯಾ ಗೆಲ್ಲಲು 251 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ 50 ಓವರ್‌ಗಳಲ್ಲಿ 242 ರನ್‌ಗೆ ಆಲೌಟಾಯಿತು. ಅರ್ಧಶತಕ ಗಳಿಸಿದ ಸ್ಟೋನಿಸ್(52,65 ಎಸೆತ, 4 ಬೌಂಡರಿ, 1 ಸಿಕ್ಸರ್) ಕೊನೆಯ ತನಕ ಹೋರಾಟ ನೀಡಿದರು. ಅಂತಿಮ ಓವರ್‌ನಲ್ಲಿ ಆಸೀಸ್ ಗೆಲುವಿಗೆ 11 ರನ್ ಬೇಕಾಗಿತ್ತು.

ಆಗ ಬೌಲಿಂಗ್ ಮಾಡಿದ ಶಂಕರ್ ಅವರು ಸ್ಟೋನಿಸ್ ವಿಕೆಟ್ ಪಡೆದು ಭಾರತದ ಗೆಲುವು ಖಚಿತಪಡಿಸಿದರು. ಶಂಕರ್‌ಗೆ ಇದು ಚೊಚ್ಚಲ ವಿಕೆಟ್. ಝಾಂಪರನ್ನು ಕ್ಲೀನ್‌ಬೌಲ್ಡ್ ಮಾಡಿದ ಶಂಕರ್ 49.3 ಓವರ್‌ಗಳಲ್ಲಿ ಆಸೀಸನ್ನು 242 ರನ್‌ಗೆ ಆಲೌಟ್ ಮಾಡಿದರು.

ಆಸೀಸ್‌ಗೆ ನಾಯಕ ಫಿಂಚ್(37) ಹಾಗೂ ಉಸ್ಮಾನ್ ಖ್ವಾಜಾ(38)ಮೊದಲ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭವನ್ನು ನೀಡಿದರು. ಫಿಂಚ್ ವಿಕೆಟ್ ಪಡೆದ ಕುಲದೀಪ್ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದರು. ಫಿಂಚ್ ಔಟಾದ ಬೆನ್ನಿಗೇ ಖ್ವಾಜಾ(38)ಕೇದಾರ್ ಜಾಧವ್‌ಗೆ ವಿಕೆಟ್ ಒಪ್ಪಿಸಿದರು. ತಂಡಕ್ಕೆ ವಾಪಸಾದ ಶಾನ್ ಮಾರ್ಷ್(46) ಹಾಗೂ ಆಲ್‌ರೌಂಡರ್ ಮ್ಯಾಕ್ಸ್‌ವೆಲ್(4)ವಿಫಲರಾದರು.

ಸ್ಟೋನಿಸ್ ಹಾಗೂ ಅಲೆಕ್ಸ್ ಕಾರೆ 6ನೇ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಕುಲದೀಪ್ ಆಸೀಸ್ ಗೆಲುವಿನ ಆಸೆಗೆ ತಣ್ಣೀರೆರಚಿದರು. ಭಾರತದ ಪರ ಕುಲದೀಪ್ ಯಾದವ್ ಯಶಸ್ವಿ ಬೌಲರ್(3-54) ಎನಿಸಿಕೊಂಡರು.

# ಕೊಹ್ಲಿ ದಾಖಲೆ :
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 40ನೇ ಶತಕ ಬಾರಿಸಿದ್ದಾರೆ.
ಇದರೊಂದಿಗೆ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 65 ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 25 ಶತಕ ಗಳಿಸಿರುವ ಅವರು, ಏಕದಿನದಲ್ಲಿ 40 ಶತಕ ಬಾರಿಸಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಏಕದಿನ ಪಂದ್ಯದಲ್ಲಿ 49 ಶತಕ ಬಾರಿಸಿದ್ದಾರೆ.

ಇದೇ ವೇಳೆ ಕೊಹ್ಲಿ ನಾಯಕನಾಗಿ ಅತಿ ವೇಗದಲ್ಲಿ 9000 ರನ್ ಗಳಿಸಿ ದಾಖಲೆಗೆ ಪಾತ್ರರಾಗಿದ್ದಾರೆ. 159 ಇನ್ನಿಂಗ್ಸ್ ನಲ್ಲಿ ಕೊಹ್ಲಿ 9000 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 203 ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಎಂ.ಎಸ್. ಧೋನಿ 253 ಇನಿಂಗ್ಸ್ ನಲ್ಲಿ 9000 ರನ್ ಗಳಿಸಿದ್ದು, ಗ್ರೇಮ್ ಸ್ಮಿತ್ 220 ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ ನಾಯಕನಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್  : 
ಭಾರತ : 250
ಆಸ್ಟ್ರೇಲಿಯಾ : 242 (49.3/50 ov, target 251)

Facebook Comments