ಭಾರತ – ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯ ಡ್ರಾ

ಈ ಸುದ್ದಿಯನ್ನು ಶೇರ್ ಮಾಡಿ

ಸಿಡ್ನಿ, ಡಿ.8- ಆಸ್ಟ್ರೇಲಿಯಾ ಎ ಹಾಗೂ ಭಾರತ ಎ ನಡುವಿನ ಅಭ್ಯಾಸ ಪಂದ್ಯವು ಡ್ರಾನಲ್ಲಿ ಅಂತ್ಯಕಂಡಿದೆ. ಗ್ರೀನ್‍ರ ಆಕರ್ಷಕ ಶತಕ (125*ರನ್, 12 ಬೌಂಡರಿ, 1 ಸಿಕ್ಸರ್) ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 306 ರನ್‍ಗಳಿಗೆ ಡಿಕ್ಲೇರ್ಡ್ ಘೋಷಿಸುವ ಮೂಲಕ 59 ರನ್‍ಗಳ ಮುನ್ನಡೆ ಪಡೆಯಿತು.

# ಭಾರತ ಉತ್ತಮ ಹೋರಾಟ:
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ಆರಂಭಿಕ ಆಟಗಾರರಾದ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಅವರು ಎಚ್ಚರಿಕೆಯ ಆಟಕ್ಕೆ ಮುಂದಾದರು. ಈ ಜೋಡಿಯು ಆಸೀಸ್ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ ಮೊದಲ ವಿಕೆಟ್‍ಗೆ 37 ರನ್‍ಗಳ ಉಪಯುಕ್ತ ಕಾಣಿಕೆ ನೀಡಿದ್ದರು.

ಮೊದಲ ಇನ್ನಿಂಗ್ಸ್ ಸೊನ್ನೆ ಸುತ್ತಿದ್ದ ಪೃಥ್ವಿ ಶಾ (19ರನ್,3 ಬೌಂಡರಿ) ಗ್ರೀನ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರೆ, ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರೆ ಗಿಲ್ ಕೂಡ 5 ಬೌಂಡರಿ ಸಹಿತ 29 ರನ್ ಗಳಿಸಿ ಗ್ರೀನ್‍ಗೆ ವಿಕೆಟ್ ಒಪ್ಪಿಸಿದರು.

ಭಾರತ ಎ ತಂಡದ ಆಟಗಾರರಾದ ವಿಕೆಟ್ ಕೀಪರ್ ವೃದ್ಧಿಮಾನ್ ಶಾ( ಅಜೇಯ 54 ರನ್, 7 ಬೌಂಡರಿ), ಹನುಮವಿಹಾರಿ (28ರನ್, 3 ಬೌಂಡರಿ), ನಾಯಕ ಅಜೆಂಕ್ಯಾ ರಹಾನೆ (28ರನ್) ರನ್‍ಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಡಿಕ್ಲೇರ್ಡ್ ಘೋಷಿಸಿದರು.

# ಆಸೀಸ್‍ಗೆ ಆರಂಭಿಕ ಆಘಾತ:
ಗೆಲ್ಲಲು 130 ರನ್ ಗಳಿಸಬೇಕಾಗಿದ್ದ ಆಸೀಸ್ ಆರಂಭದಲ್ಲೇ ಉಮೇಶ್ ಯಾದವ್ ಬ್ರೂನ್ಸ್(0ರನ್)ರ ವಿಕೆಟ್ ಪಡೆದು ಆಘಾತ ನೀಡಿದರು. ಆರಂಭಿಕ ಆಘಾತ ಕಂಡರೂ ಪೋಕೋವಾಕ್ಸಿ(23ರನ್, 1 ಬೌಂಡರಿ), ಹ್ಯಾರಿಸ್ (25ರನ್, 4 ಬೌಂಡರಿ) ನೆರವಿನಿಂದ 52 ರನ್ ಗಳಿಸುವ ಮೂಲಕ ಡ್ರಾಗೆ ತೃಪ್ತಿಪಟ್ಟುಕೊಂಡಿತು.

Facebook Comments

Sri Raghav

Admin