ಆಸೀಸ್ ಬೌಲರ್‍ಗಳನ್ನು ಚೆಂಡಾಡಿದ ರಹಾನೆ, ಭರ್ಜರಿ ಮುನ್ನಡೆಯತ್ತ ಭಾರತ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬರ್ನ್, ಡಿ.27- ನಿರೀಕ್ಷೆಯಂತೆ ಭಾರತ ತಂಡವು ಬಾಕ್ಸಿಂಗ್ ಡೇ ಟೆಸ್ಟ್‍ನ ಎರಡನೇ ದಿನ ಭರ್ಜರಿ ಆಟ ಪ್ರದರ್ಶಿಸಿ ಆಸೀಸ್ ವಿರುದ್ಧ ಬೃಹತ್ ಮುನ್ನಡೆಯತ್ತ ದಿಟ್ಟ ಹೆಜ್ಜೆ ಇಟ್ಟಿದೆ.

# ಗಿಲ್ ಭರ್ಜರಿ ಆರಂಭ:
ಪೃಥ್ವಿ ಶಾರ ಕಳಪೆ ಪ್ರದರ್ಶದಿಂದಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಯುವ ಆಟಗಾರ ಶುಭಮನ್ ಗಿಲ್ ಆಸೀಸ್‍ನ ವೇಗ ಹಾಗೂ ಸ್ಪಿನ್ ಅಸ್ತ್ರವನ್ನು ದಿಟ್ಟವಾಗಿ ಎದುರಿಸಿ ಮೊದಲ ಪಂದ್ಯದಲ್ಲಿ ಭರವಸೆ ಮೂಡಿಸಿದರು. ನಿನ್ನೆ ದಿನದಾಟದ ಅಂತ್ಯಕ್ಕೆ 28 ರನ್ ಗಳಿಸಿದ್ದ ಗಿಲ್ ಇಂದು ಕೂಡ ಸೋಟಕ ಆಟಕ್ಕೆ ಮುಂದಾಗಿ ಅರ್ಧಶತಕ ಗಳಿಸುವ ಭರವಸೆ ಮೂಡಿಸಿದ್ದರಾದರೂ ಕುಮ್ಮಿನ್ಸ್ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್ ಪೇನ್ ಹಿಡಿದ ಕ್ಯಾಚ್‍ಗೆ ಗಿಲ್ (45 ರನ್, 8 ಬೌಂಡರಿ) ಮೊದಲ ಪಂದ್ಯದಲ್ಲೇ ಅರ್ಧಶತಕ ಗಳಿಸುವ ಅವಕಾಶ ಕೈಚೆಲ್ಲಿದರು.

ಈ ಜೋಡಿಯು ಎರಡನೇ ವಿಕೆಟ್‍ಗೆ 61 ರನ್‍ಗಳ ಜೊತೆಯಾಟ ನೀಡಿದರು. ಇನ್ನು ತಾಳ್ಮೆಯುತ ಆಟ ಪ್ರದರ್ಶಿಸಿದ ಪೂಜಾರ ಕೂಡ 17 ರನ್ ಗಳಿಸಿ ಕುಮ್ಮಿನ್ಸ್‍ಗೆ 2ನೆ ವಿಕೆಟ್ ಒಪ್ಪಿಸಿದರು.

# ಮೋಡಿ ಮಾಡಿದ ವಿಹಾರಿ- ರಹಾನೆ ಜೋಡಿ:
ಪೂಜಾರ ಮೈದಾನ ತೊರೆಯುತ್ತಿದ್ದಂತೆ ಕ್ರೀಸ್‍ಗೆ ಬಂದ ಹನುಮ ವಿಹಾರಿ ನಾಯಕ ರಹಾನೆಯೊಂದಿಗೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಈ ಜೋಡಿಯು ಸಮಯ ಸಿಕ್ಕಾಗಲೆಲ್ಲಾ ಬೌಂಡರಿ ಗಳಿಸುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರು. ಈ ಜೋಡಿಯು 3ನೆ ವಿಕೆಟ್‍ಗೆ 52 ರನ್‍ಗಳ ಜೊತೆಯಾಟ ನೀಡಿದರು. 2 ಬೌಂಡರಿ ಸಹಿತ 21 ರನ್ ಗಳಿಸಿದ್ದ ವಿಹಾರಿ, ಲಿಯೋನ್ ಬೌಲಿಂಗ್‍ನಲ್ಲಿ ಸ್ಲೀಪ್‍ನಲ್ಲಿದ್ದ ಸ್ಮಿತ್‍ಗೆ ಕ್ಯಾಚ್ ನೀಡಿದರು.

# ಪಂತ್ ಸೋಟಕ ಆಟ:
ವಿಹಾರಿ ಔಟಾಗುತ್ತಿದ್ದಂತೆ ಮೈದಾನಕ್ಕಿಳಿದು ಸೋಟಕ ಆಟಕ್ಕೆ ಮುಂದಾದ ರಿಷಭ್ ಪಂತ್ ಆಸೀಸ್ ಬೌಲರ್‍ಗಳನ್ನು ಚೆಂಡಾಡಿದರು. ಒಂದೆಡೆ ನಾಯಕ ರಹಾನೆ ತಾಳ್ಮೆಯುತ ಆಟಕ್ಕೆ ಮುಂದಾಗಿದ್ದರೆ ಪಂತ್ ಬಿರುಸಿನ ಆಟ ಪ್ರದರ್ಶಿಸಿ ಎದುರಿಸಿದ 40 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 29 ರನ್ ಗಳಿಸಿ ಸ್ಟ್ರಾಕ್ ಬೌಲಿಂಗ್‍ನಲ್ಲಿ ವಿಕೆಟ್‍ಕೀಪರ್ ಪೇನ್ ಹಿಡಿದ ಕ್ಯಾಚ್‍ನಿಂದಾಗಿ ಮೈದಾನ ತೊರೆದರು. ಈ ಜೋಡಿಯು 5ನೆ ವಿಕೆಟ್‍ಗೆ 57 ರನ್‍ಗಳ ಜತೆಯಾಟ ನೀಡಿದರು.

ಆಸೀಸ್ ಬೌಲರ್ಸ್‍ಗಳನ್ನು ಕಾಡಿದ ರಹಾನೆ- ಜಡೇಜಾ ಜೋಡಿ:
ಏಕದಿನ ಹಾಗೂ ಚುಟುಕು ಕ್ರಿಕೆಟ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಲೌಂಡರ್ ಜಾಡೇಜಾ, ಆಸೀಸ್ ಬೌಲರ್‍ಗಳನ್ನು ಕಾಡಿದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ ಗಳಿಸಿದ ಜಾಡೇಜಾ ದಿನದಾಟದ ಅಂತ್ಯಕ್ಕೆ 40 ರನ್ ಗಳಿಸಿದ್ದರೆ, ಇಡೀ ದಿನ ಆಸೀಸ್ ಬೌಲರ್‍ಗಳನ್ನು ಕಾಡಿದ ನಾಯಕ ಅಜೆಂಕಾ ರಹಾನೆ ಆಕರ್ಷಕ ಶತಕ (104 ರನ್, 12 ಬೌಂಡರಿ) ಗಳಿಸಿ ಅಜೇಯರಾಗಿ ಉಳಿದಿದ್ದು ಟೆಸ್ಟ್ ಜೀವನದಲ್ಲಿ ತಮ್ಮ 12ನೆ ಶತಕ ಗಳಿಸುವ ಮೂಲಕ ಸಂಭ್ರಮಿಸಿದರು.

ದಿನದಾಟದ ಅಂತ್ಯಕ್ಕೆ ಭಾರತ ತಂಡವು 5 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದು 82 ರನ್‍ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಆಸ್ಟ್ರೇಲಿಯಾ ಪರ ಮಿಚಲ್ ಸ್ಟ್ರಾಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ 2, ಲಯಾನ್ 1 ವಿಕೆಟ್ ಕಬಳಿಸಿದರು.

Facebook Comments

Sri Raghav

Admin